ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ

Updated By: Ganapathi Sharma

Updated on: May 01, 2025 | 2:13 PM

ಬೇಸಿಗೆಯ ಬೇಗೆ ಎಲ್ಲೆಡೆ ಜನರನ್ನು ಹಾಗೂ ಪ್ರಾಣಿಗಳನ್ನು ಕಂಗಾಲಾಗಿಸಿದೆ. ವನ್ಯಜೀವಿಗಳಿಗೂ ಬಿಸಿಲಿನ ಬೇಗೆ ತಟ್ಟಿದೆ. ಕಾಡಾನೆಗಳು ಸಹ ಬಿಸಿಲ ಧಗೆಯಿಂದ ಮೈ ತಣ್ಣಗಾಗಿಸಲು ನೀರಿರುವ ಕಡೆ ತೆರಳುತ್ತಿವೆ. ಕಾಡಾನೆಗಳ ಹಿಂಡೊಂದು ಕೆರೆಯೊಂದರಲ್ಲಿ ಜಳಕವಾಡುತ್ತಿರುವ ದೃಶ್ಯ ಕರ್ನಾಟಕ ತಮಿಳುನಾಡಿನ ಗಡಿ ಪಾಲಾರ್ ಗ್ರಾಮದಲ್ಲಿ ಕಂಡುಬಂದಿದೆ.

ಚಾಮರಾಜನಗರ, ಮೇ 1: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಾಲಾರ್ ಗ್ರಾಮದಲ್ಲಿ ಬಿಸಿಲಿನ ಧಗೆಯಂದ ರಕ್ಷಣೆ ಪಡೆಯಲು ಕಾಡಾನೆಗಳ ಹಿಂಡು ಕೆರೆಯಲ್ಲಿ ಜಲಕ್ರೀಡೆಯಾಡಿದೆ. ಕರ್ನಾಟಕ ತಮಿಳುನಾಡಿನ ಗಡಿ ಭಾಗದಲ್ಲಿನ ಈ ದೃಶ್ಯ ಬೈಕ್ ಸವಾರನ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ