PM Narendra Modi: ಉತ್ತರ ಕರ್ನಾಟಕಕ್ಕೆ 2ನೇ ಬಾರಿ ಆಗಮಿಸುತ್ತಿರುವ ಪ್ರಧಾನಿ ಮತದಾರರ ಮೇಲೆ ಮೋಡಿ ಮಾಡಲಿದ್ದಾರೆಯೇ?

Edited By:

Updated on: Jan 19, 2023 | 11:09 AM

ಅಲ್ಲಿನ ಮತದಾರರನ್ನು ತಮ್ಮೆಡೆ ಸೆಳೆದುಕೊಳ್ಳಲು ಪ್ರಧಾನಿಗಳು ಈಗಿಂದಲೇ ರಣತಂತ್ರ ರೂಪಿಸಿ ಅದನ್ನು ಜಾರಿಗೆ ತರುವ ಕಾರ್ಯ ಶುರುಮಾಡಿದ್ದಾರೆ.

ಬೆಂಗಳೂರು:  ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಕಲ್ಯಾಣ ಕರ್ನಾಟಕದ ಪ್ರಮುಖ ನಗರ ಕಲಬುರಗಿಯಲ್ಲಿ (Kalaburagi) ಬಂದಿಳಿಯಲಿದ್ದಾರೆ. ಸರ್ವ ಸಿದ್ಧತೆಗಳು ಪೂರ್ಣಗೊಂಡಿವೆ ಮತ್ತು ರಾಜ್ಯ ಬಿಜೆಪಿಯ ಗಣ್ಯರು ಮತ್ತು ಆ ಭಾಗದ ಜನತೆ ಕಾತುರದಿಂದ ಪ್ರಧಾನಿಗಳಿಗಾಗಿ ಕಾಯುತ್ತಿದ್ದಾರೆ. ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ (assembly polls) ತೀರ ಹತ್ತಿರವಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಕೇವಲ ಒಂದು ವಾರದ ಅವಧಿಯಲ್ಲಿ ಪ್ರಧಾನಿ ರಾಜ್ಯಕ್ಕೆ ಅದರಲ್ಲೂ ವಿಶೇಷವಾಗಿ ರಾಜ್ಯದ ಉತ್ತರ ಭಾಗಕ್ಕೆ (ಕಲ್ಯಾಣ ಕರ್ನಾಟಕ) ಎರಡನೇ ಬಾರಿ ಭೇಟಿ ನೀಡುತ್ತಿದ್ದಾರೆ. ಉತ್ತರ ಕರ್ನಾಟಕ ಯಾವತ್ತಿಗೂ ಕಾಂಗ್ರೆಸ್ ಭಧ್ರಕೋಟೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಅಲ್ಲಿನ ಮತದಾರರನ್ನು ತಮ್ಮೆಡೆ ಸೆಳೆದುಕೊಳ್ಳಲು ಪ್ರಧಾನಿಗಳು ಈಗಿಂದಲೇ ರಣತಂತ್ರ ರೂಪಿಸಿ ಅದನ್ನು ಜಾರಿಗೆ ತರುವ ಕಾರ್ಯ ಶುರುಮಾಡಿದ್ದಾರೆ. ಈ ರಿಪೋರ್ಟ್ ವೀಕ್ಷಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jan 19, 2023 11:04 AM