PM Modi Karnataka Visit: ಪ್ರಧಾನಿಗಳನ್ನು ನೋಡುವ ತವಕದಲ್ಲಿ ಲಂಬಾಣಿ ಸಮುದಾಯದ ಜನ ರಾತ್ರಿಯೆಲ್ಲ ನಿದ್ರಿಸಿಲ್ಲ: ಡಾ ಉಮೇಶ್ ಜಾಧವ, ಸಂಸದ
ಪ್ರಧಾನ ಮಂತ್ರಿಗಳ ಆಗಮನದ ನಿರೀಕ್ಷೆಯಲ್ಲಿ ಈ ಭಾಗದ ಲಂಬಾಣಿ ಸಮುದಾಯದ ಜನರು ರಾತ್ರಿಯೆಲ್ಲ ನಿದ್ರಿಸಿಲ್ಲ, ಎಂದು ಜಾಧವ ಹೇಳುತ್ತಾರೆ.
ಕಲಬುರಗಿ: ನಾವು ಈಗಾಗಲೇ ವರದಿ ಮಾಡಿರುವಂತೆ ಯಾದಗಿರಿಯ ಕೊಡೇಕಲ್ ಗ್ರಾಮದಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ (revenue villages) ಪರಿವರ್ತಿಸಿರುವ ಹಿನ್ನೆಲೆಯಲ್ಲಿ ಲಂಬಾಣಿ ಸಮುದಾಯದ ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲು ಆಗಮಿಸಲಿದ್ದಾರೆ. ಮಳಖೇಡದಲ್ಲಿ ಹಬ್ಬದ ವಾತಾವರಣ ಅನ್ನೋದಕ್ಕಿಂತ ಒಂದು ದೊಡ್ಡ ಉತ್ಸವದ ವಾತಾವರಣ ಸೃಷ್ಟಿಯಾಗಿದೆ ಎಂದರೆ ಉತ್ಪ್ರೇಕ್ಷೆ ಅನಿಸದು. ಕಾರ್ಯಕ್ರಮ ಆಯೋಜನೆ ವಹಿಸಿಕೊಂಡಿರುವ ಕಲಬುರಗಿಯ ಸಂಸದ ಡಾ ಉಮೇಶ್ ಜಾಧವ (Dr Umesh Jadhav) ಅವರು, ಪ್ರಧಾನಿಗಳ ಭೇಟಿಗಾಗಿ ಮಾಡಿರುವ ತಯಾರಿಗಳು, ಅವರನ್ನು ನೋಡಲು ಜನರಲ್ಲಿ ಮನೆ ಮಾಡಿರುವ ಕಾತುರ, ರೋಮಾಂಚನ ಮೊದಲಾದವುಗಳ ಬಗ್ಗೆ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ್ದಾರೆ. ಪ್ರಧಾನ ಮಂತ್ರಿಗಳ ಆಗಮನದ ನಿರೀಕ್ಷೆಯಲ್ಲಿ ಈ ಭಾಗದ ಲಂಬಾಣಿ ಸಮುದಾಯದ ಜನರು ರಾತ್ರಿಯೆಲ್ಲ ನಿದ್ರಿಸಿಲ್ಲ, ಎಂದು ಜಾಧವ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ