Dasara Mahotsav-2024: ಕೇವಲ ದಸರಾ ಉತ್ಸವಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವೆನೆಂದ ಸಿದ್ದರಾಮಯ್ಯ
Dasara Mahotsav-2024: ಸಿದ್ದರಾಮಯ್ಯ ವಿಚಾರವಾದಿ ಎಂದು ಗುರುತಿಸಿಕೊಂಡವರು, ಹಾಗಂತ ನಾಸ್ತಿಕರೇನೂ ಅಲ್ಲ. ಇವತ್ತು ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ ಅವರು ತಾಯಿ ಚಾಮುಂಡೇಶ್ಚರಿಗೆ ಅತಿಹೆಚ್ಚು ಬಾರಿ ಪುಷ್ಪಾರ್ಚನೆ ಮಾಡಿದ್ದು ತಾನೇ, ಮತ್ತು ತನ್ನ ಮೇಲೆ ದೇವರ ಆಶೀರ್ವಾದ ಸದಾ ಇದೆ ಅಂತ ಹೇಳಿದರು.
ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೆದರಿಕೆಯೋ ಅಥವಾ ಅವುಗಳಿಂದ ಬೇಸತ್ತಿದ್ದಾರೋ? ಇವತ್ತು ಮೈಸೂರಲ್ಲಿ ಮಾಧ್ಯಮದವರು ಕಂಡೊಡನೆ ಅವರು ಹಾಕಿದ ಷರತ್ತು ಏನು ಗೊತ್ತಾ? ಕೇವಲ ದಸರಾಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಬೇಕು! ಎಲ್ಲರಿಗೂ ದಸರಾ ಹಬ್ಬದ ಶುಭಾಷಯಗಳನ್ನು ಹೇಳಿದ ಸಿದ್ದರಾಮಯ್ಯ ನವರಾತ್ರಿಯ ಕೊನೆಯ ದಿನವಾಗಿರುವ ನಾಳೆ ಜಂಬೂ ಸವಾರಿ ನಡೆಯಲಿದ್ದು ತಾನು ಅದರಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾಳೆಯಿಂದ ಮೂರು ದಿನ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಲಭ್ಯವಿರಲ್ಲ