ನಾಳೆಯಿಂದ ಮೂರು ದಿನ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಲಭ್ಯವಿರಲ್ಲ

ನಾಳೆಯಿಂದ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಮೊದಲು ಮೈಸೂರಿಗೆ ಬಳಿಕ ಭಾನುವಾರ ಧಾರವಾಡ ಮತ್ತು ಬೆಳಗಾವಿಗೆ ತೆರಳಲಿದ್ದಾರೆ. ಅ.11, 12, 13ರಂದು ಮೈಸೂರು ಜಿಲ್ಲೆಗೆ ಭೇಟಿ ನೀಡುತ್ತಿರುವ ಸಿದ್ದರಾಮಯ್ಯ, ವಿಜಯದಶಮಿ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ.

ನಾಳೆಯಿಂದ ಮೂರು ದಿನ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಲಭ್ಯವಿರಲ್ಲ
ನಾಳೆಯಿಂದ ಮೂರು ದಿನ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಲಭ್ಯವಿರಲ್ಲ
Follow us
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Oct 10, 2024 | 8:10 PM

ಮೈಸೂರು, ಅಕ್ಟೋಬರ್​ 10: ಸಿಎಂ ಸಿದ್ದರಾಮಯ್ಯ (Siddaramaiah) ನಾಳೆಯಿಂದ 3 ದಿನ‌ಗಳ ಕಾಲ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಬೆಳಗ್ಗೆ ಮೈಸೂರಿಗೆ ತೆರಳಲಿರುವ ಸಿಎಂ, 2 ದಿನ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಭಾನುವಾರ ಧಾರವಾಡ ಮತ್ತು ಬೆಳಗಾವಿಗೆ ತೆರಳಲಿದ್ದಾರೆ.

ಸಿಎಂ ಜಿಲ್ಲಾ ಪ್ರವಾಸ ವಿವರ 

ನಾಳೆಯಿಂದ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಅ.11, 12, 13ರಂದು ಮೈಸೂರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಅಕ್ಟೋಬರ್ 11ರಂದು ಬೆಳಗ್ಗೆ 10.25ಕ್ಕೆ ಮೈಸೂರಿಗೆ ಆಗಮಿಸುವ ಸಿಎಂ, ಅ.12ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: ಮೈಸೂರು ಡಿಸಿ ಕಚೇರಿಯಲ್ಲೂ ಖರೀದಿಸಬಹದು ಜಂಬೂಸವಾರಿ, ಟಾರ್ಚ್​​ ಲೈಟ್​ ಟಿಕೆಟ್

ಅಕ್ಟೋಬರ್, 12ರಂದು ಮಧ್ಯಾಹ್ನ 1.41ರಿಂದ 2.10ರವರೆಗೆ ಅರಮನೆಯ ಬಲರಾಮ ದ್ವಾರದ ಆವರಣದಲ್ಲಿ ನಂದಿ ಧ್ವಜಕ್ಕೆ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಅಂದು ಸಂಜೆ 4ರಿಂದ 4.30ರವರೆಗೆ ಜಂಬೂಸವಾರಿಗೆ ಚಾಲನೆ ನೀಡಲಿದ್ದು, ಚಿನ್ನದ ಅಂಬಾರಿಯಲ್ಲಿ ಆಸೀನರಾಗುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯದಶಮಿ ಮೆರವಣಿಗೆ ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ 2024: ಮೂರನೇ ದಿನ ಕಾರ್ಯಕ್ರಗಳ ವಿವರ ಹೀಗಿದೆ

ಇನ್ನು ಸಂಜೆ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು, ಟಾರ್ಚ್ ಲೈಟ್ ಪರೇಡ್​ನಲ್ಲಿ ಭಾಗವಹಿಸಲಿದ್ದಾರೆ. ಅ.13ರಂದು ಬೆಳಗ್ಗೆ 11ಕ್ಕೆ ಕಡಕೋಳದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ 11.30ಕ್ಕೆ ಮೈಸೂರಿನಿಂದ ನಿರ್ಗಮಿಸಲಿದ್ದಾರೆ. ಭಾನುವಾರ ಅಂದರೆ ಅ.13ರಂದು ಮೈಸೂರಿನಿಂದ ಹೊರಡುವ ಸಿಎಂ ಸಿದ್ದರಾಮಯ್ಯ ಧಾರವಾಡ ಮತ್ತು ಬೆಳಗಾವಿಗೆ ಜಿಲ್ಲಾಗಳಿಗೂ ಭೇಟಿ ನೀಡಲಿದ್ದಾರೆ.

ಇಂದು ಯುವ ದಸರಾಗೆ ತೆರೆ

ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ 5ನೇ ದಿನಕ್ಕೆ ಯುವ ದಸರಾ ಕಾಲಿಟ್ಟಿದೆ. ಮ್ಯೂಸಿಕ್ ಮಾಂತ್ರಿಕ ಇಳಿಯರಾಜ ಅವರಿಂದ ಸಂಗೀತ ಸಂಜೆ ಆಯೋಜಿಸಲಾಗಿದೆ. ಭಕ್ತಿ ಗೀತೆಗಳಿಂದ 7 ಗಂಟೆಗೆ ಯುವ ದಸರಾ ಪ್ರಾರಂಭಿಸಲಾಗಿದೆ. ಇಂದು ಯುವ ದಸರಾಗೆ ತೆರೆ ಬೀಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.