ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?

Updated on: Aug 18, 2025 | 4:47 PM

‘ದಿ ಡೆವಿಲ್’ ಸಿನಿಮಾಗೆ ತಮ್ಮ ಪಾಲಿನ ಶೂಟಿಂಗ್ ಹಾಗೂ ಡಬ್ಬಿಂಗ್ ಕೆಲಸಗಳನ್ನು ದರ್ಶನ್ ಅವರು ಮುಗಿಸಿಕೊಟ್ಟಿದ್ದರು. ಹಾಗಾಗಿ ರಿಲೀಸ್ ಬಗ್ಗೆ ಹೆಚ್ಚಿನ ಚಿಂತೆ ಇಲ್ಲ. ವಿಜಯಲಕ್ಷ್ಮಿ ದರ್ಶನ್, ದಿನಕರ್ ತೂಗುದೀಪ ಅವರು ಚಿತ್ರತಂಡದ ಜೊತೆ ನಿಲ್ಲಲಿದ್ದಾರೆ. ಈ ವರ್ಷವೇ ‘ದಿ ಡೆವಿಲ್’ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಿದೆ.

ನಟ ದರ್ಶನ್ (Darshan) ಅವರು ಜೈಲುಪಾಲಾಗಿದ್ದರಿಂದ ‘ದಿ ಡೆವಿಲ್’ ಸಿನಿಮಾದ ರಿಲೀಸ್ ಬಗ್ಗೆ ಅಭಿಮಾನಿಗಳಿಗೆ ಅನುಮಾನ ಮೂಡಿತು. ಆದರೆ ನಿರ್ಮಾಪಕರಿಗೆ ತೊಂದರೆ ಆಗದ ರೀತಿಯಲ್ಲಿ ದರ್ಶನ್ ನಿರ್ಧಾರ ತೆಗೆದುಕೊಂಡಿದ್ದಾರೆ. ತಾವು ಇಲ್ಲದಿದ್ದರೂ ಕೂಡ ಸಿನಿಮಾ ರಿಲೀಸ್ ಆಗಲಿ ಎಂಬುದು ದರ್ಶನ್ ಆಶಯ. ಆದ್ದರಿಂದ ತಮ್ಮ ಪಾಲಿನ ಶೂಟಿಂಗ್ ಮತ್ತು ಡಬ್ಬಿಂಗ್ ಕೆಲಸಗಳನ್ನು ದರ್ಶನ್ ಅವರು ಮುಗಿಸಿಕೊಟ್ಟಿದ್ದಾರೆ. ಹಾಗಾಗಿ ರಿಲೀಸ್ ಬಗ್ಗೆ ಹೆಚ್ಚಿನ ಚಿಂತೆ ಇಲ್ಲ. ವಿಜಯಲಕ್ಷ್ಮಿ ದರ್ಶನ್, ದಿನಕರ್ ತೂಗುದೀಪ ಅವರು ಚಿತ್ರತಂಡದ ಜೊತೆ ನಿಲ್ಲಲಿದ್ದಾರೆ. ಈ ವರ್ಷವೇ ‘ದಿ ಡೆವಿಲ್’ (The Devil) ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.