ಬೆಂಗಳೂರಿನಲ್ಲಿ ಸದ್ಯದಲ್ಲೇ ಏರಿಕೆ ಆಗಲಿದ್ಯಾ ನೀರಿನ ದರ? ಶಾಕಿಂಗ್ ರಿಯಾಕ್ಷನ್ ಕೊಟ್ಟ ಡಿಕೆಶಿ
ತೈಲ ಬೆಲೆ ಏರಿಕೆ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನ ವಾಸಿಗಳಿಗೆ ಸದ್ಯದಲ್ಲೇ ನೀರಿನ ದರ ಏರಿಕೆ ಆಗಲಿದ್ಯಾ ಎಂಬ ಪ್ರಶ್ನೆ ಮೂಡಿದೆ. ಹೌದು, ನೀರಿನ ದರ ಏರಿಕೆ ಬಗ್ಗೆಡಿಸಿಎಂ ಡಿಕೆ ಶಿವಕುಮಾರ್(DK Shivakumar) ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರು, ಜೂ.18: ತೈಲ ಬೆಲೆ ಏರಿಕೆ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನ ವಾಸಿಗಳಿಗೆ ಸದ್ಯದಲ್ಲೇ ನೀರಿನ ದರ ಏರಿಕೆ ಆಗಲಿದ್ಯಾ ಎಂಬ ಪ್ರಶ್ನೆ ಮೂಡಿದೆ. ಹೌದು, ನೀರಿನ ದರ ಏರಿಕೆ ಬಗ್ಗೆಡಿಸಿಎಂ ಡಿಕೆ ಶಿವಕುಮಾರ್(DK Shivakumar) ಮುನ್ಸೂಚನೆ ನೀಡಿದ್ದಾರೆ. ಇಂದು(ಜೂ.18) ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ನೀರಿನ ದರ ಏರಿಕೆ ಬಗ್ಗೆ BWSSB ಪ್ರಸ್ತಾವನೆ ಇಟ್ಟಿದೆ. 14 ವರ್ಷದಿಂದ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಆಗಿಲ್ಲ. ಈ ಹಿನ್ನಲೆ ಬೆಂಗಳೂರು ಜಲಮಂಡಳಿ ಸಿಬ್ಬಂದಿಗೆ ವೇತನ ನೀಡಲು ಸಮಸ್ಯೆ ಆಗುತ್ತಿದೆ. ನೀರಿನ ಬಳಕೆಯ ವಿದ್ಯುತ್ ವೆಚ್ಚ ಸಹ ಪಾವತಿಸಲು ಆಗುತ್ತಿಲ್ಲ. ಹೀಗಾಗಿ ನೀರಿನ ದರ ಏರಿಕೆ ಅನಿವಾರ್ಯ ಎಂದಿದ್ದಾರೆ. ಈ ಮೂಲಕ ನೀರಿನ ದರ ಏರಿಕೆ ಕುರಿತು ಪರೋಕ್ಷವಾಗಿ ಡಿಸಿಎಂ ಡಿಕೆ ಸುಳಿವು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos