ಎನ್​ಡಿಎ ಅಧಿಕಾರಕ್ಕೆ ಬಂದರೆ ಕೇಂದ್ರ ಸಚಿವರಾಗ್ತೀರಾ? ಕುಮಾರಸ್ವಾಮಿ ಏನಂದ್ರು ನೋಡಿ

ಎನ್​ಡಿಎ ಅಧಿಕಾರಕ್ಕೆ ಬಂದರೆ ಕೇಂದ್ರ ಸಚಿವರಾಗ್ತೀರಾ? ಕುಮಾರಸ್ವಾಮಿ ಏನಂದ್ರು ನೋಡಿ

Ganapathi Sharma
|

Updated on: Jun 04, 2024 | 9:19 AM

ದೇಶದಲ್ಲಿ ಭರ್ಜರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮಂಡ್ಯದಲ್ಲಿ ಪೋಸ್ಟಲ್ ಬ್ಯಾಲೆಟ್ ಶುರುವಾಗಿದೆ. ಕೊನೆಯ ಹಂತದ ವರೆಗೂ ಮುನ್ನಡೆಯಲ್ಲಿ ಇರುತ್ತೇನೆ ಎಂದು ಕುಮಾರಸ್ವಾಮಿ ಎನ್​ಡಿಎ ಅಧಿಕಾರಕ್ಕೆ ಬಂದರೆ ಕೇಂದ್ರ ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ ಏನಂದರು? ಇಲ್ಲಿದೆ ನೋಡಿ

ಬೆಂಗಳೂರು, ಜೂನ್ 4: ಲೋಕಸಭೆ ಚುನಾವಣೆ ಫಲಿತಾಂಶ (Lok Sabha Election Result) ಪ್ರಕಟವಾಗುತ್ತಿದ್ದು, ಮಂಡ್ಯದಲ್ಲಿ (Mandya) ಜೆಡಿಎಸ್ ಅಭ್ಯರ್ಥಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಮುನ್ನಡೆ ಕಾಯ್ದುಕೊಂಡಿದ್ದಾರೆ. ಗೆಲುವಿನ ಬಗ್ಗೆ ಭರವಸೆ ವ್ಯಕ್ತಪಡಿಸಿದ ಅವರು, ಮಂಡ್ಯ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡುತ್ತಾರೆ. ಎಕ್ಸಿಟ್​ ಪೋಲ್​​ ಸರ್ವೆ ಶೇ 90ರಷ್ಟು ಸತ್ಯವಾಗುತ್ತದೆ ಎಂದರು. ಕರ್ನಾಟಕದಲ್ಲಿ 25 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ದೇಶದಲ್ಲಿ ಎನ್​ಡಿಎ ಹೆಚ್ಚು ಸ್ಥಾನಗಳು ಗೆಲ್ಲುವ ವಿಶ್ವಾಸವಿದೆ ಎಂದರು.

ದೇಶದಲ್ಲಿ ಭರ್ಜರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮಂಡ್ಯದಲ್ಲಿ ಪೋಸ್ಟಲ್ ಬ್ಯಾಲೆಟ್ ಶುರುವಾಗಿದೆ. ಕೊನೆಯ ಹಂತದ ವರೆಗೂ ಮುನ್ನಡೆಯಲ್ಲಿ ಇರುತ್ತೇನೆ. ನಾನು ಚುನಾವಣೆ ಶುರುವಿನಿಂದಲೂ ಉತ್ಸಾಹದಿಂದ ಇದ್ದೇನೆ.

ಎನ್​ಡಿಎ ಅಧಿಕಾರಕ್ಕೆ ಬಂದರೆ ಕೇಂದ್ರ ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ನನಗೆ ಹೆಚ್ಚಿನ ಆಸಕ್ತಿ ಏನೂ ಇಲ್ಲ. ಮಂಡ್ಯ ಜಿಲ್ಲೆಗೆ ನನ್ನ ಕೈಲಾದ ಅಳಿಲು ಸೇವೆಯನ್ನು ಮಾಡುತ್ತೇನೆ. ರಾಜ್ಯಕ್ಕೆ ಏನಾಗಬೇಕೋ ಅದನ್ನು ಮಾಡುವುದು ನನ್ನ ಮೊದಲ ಆದ್ಯತೆ ಎಂದು ಕುಮಾರಸ್ವಾಮಿ ಹೇಳಿದರು.

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇದಕ್ಕೂ ಮುನ್ನ ಆದಿ ಚುಂಚನಗಿರಿ ಮಠದಲ್ಲಿ ಗಂಗಾದೇಶ್ವರನಿಗೆ ಪೂಜೆ ಸಲ್ಲಿಸಿ ನಿರ್ಮಾಲನಂದ ಸ್ವಾಮಿಜಿ ಬಳಿ ಆಶೀರ್ವಾದ ಪಡೆದರು.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ