Loading video

ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ನಡೆಸುವ ಸುದ್ದಿಗೋಷ್ಠಿಯಲ್ಲಿ ಹಾಜರಿರುವ ಮಹಿಳೆ ಕರವೇ ಪ್ರತಿಭಟನೆಯಲ್ಲೂ ಭಾಗಿ!

|

Updated on: Feb 22, 2025 | 4:39 PM

ಪ್ರತಿಭಟನೆಯಲ್ಲಿ ಇವರು ಪೊಲೀಸ್ ಠಾಣೆಯ ಪ್ರವೇಶ ದ್ವಾರದ ಮುಂದೆ ಮಲಗಿಬಿಡುತ್ತಾರೆ. ಪುರುಷ ಪ್ರತಿಭಟನೆಕಾರರನ್ನು ಪೊಲೀಸರು ಎತ್ತಿಕೊಂಡು ಹೋಗಿ ವ್ಯಾನಲ್ಲಿ ಹಾಕುತ್ತಾರೆ. ಆದರೆ ಅಲ್ಲಿ ಮಹಿಳಾ ಪೊಲೀಸರು ಇಲ್ಲದ ಕಾರಣ ಮೇಡಂ ಪ್ರತಿಭಟನೆಯನ್ನು ಮುಂದುವರಿಸುತ್ತಾರೆ. ಪೊಲೀಸ್ ಅಧಿಕಾರಿಯೊಬ್ಬರು ಏಳವ್ವ ಅಕ್ಕ, ಏಳಿ ಮೇಡಂ ಅಂತ ಪರಿಪರಿಯಾಗಿ ಬೇಡಿಕೊಂಡರೂ ಮೇಡಂ ಮಾತ್ರ ಕದಲಲ್ಲ.

ಬೆಳಗಾವಿ: ಬೆಳಗಾವಿ ತಾಲ್ಲೂಕಿನಲ್ಲಿರುವ ಮಾರಿಹಾಳ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿ ಇಂದು ಜಿಲ್ಲೆಯ ಹಲವಾರು ಭಾಗಗಳಲ್ಲಿ ಪ್ರತಿಭಟನೆ ನಡೆದಿವೆ. ನಗರದ ಪೊಲೀಸ್ ಠಾಣೆಯೊಂದರ ಮುಂದೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಮಹಿಳೆಯನ್ನೊಮ್ಮೆ ನೋಡಿ. ಅವರನ್ನು ಎಲ್ಲೋ ನೋಡಿದಂತಿದೆಯಲ್ಲ ಅಂತ ನಿಮಗನ್ನಿಸಿರಬಹುದು. ಹೌದು ಮಾರಾಯ್ರೇ ಇವರು ಅವರೇ! ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ನಡೆಸುವ ಮಾಧ್ಯಮ ಗೋಷ್ಠಿಗಳಲ್ಲಿ ಸಚಿವನ ಎಡ, ಬಲ ಮತ್ತು ಹಿಂದೆ ಕಾಣಿಸಿಕೊಳ್ಳುವ ಮಹಿಳೆ ಇವರೇ. ಇವರು ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಂತ ಕನ್ನಡಿಗರಿಗೆ ಈಗಷ್ಟೇ ಗೊತ್ತಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಂಡಕ್ಟರ್ ಮೇಲೆ ಹಲ್ಲೆ, ನಾಲ್ವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ: ಮಾರ್ಟಿನ್ ಮಾಬನಿಯಾಂಗ್