Video: ಗರ್ಬಾ ನೃತ್ಯ ಅಭ್ಯಾಸ ಮಾಡುತ್ತಿದ್ದ ಮಹಿಳೆಯ ಬಲವಂತವಾಗಿ ಎಳೆದೊಯ್ದ ಸಂಬಂಧಿಕರು
ಗರ್ಬಾ ನೃತ್ಯ ಅಭ್ಯಾಸ ಮಾಡುತ್ತಿದ್ದ ಮಹಿಳೆಯನ್ನು ಪುರುಷರ ಗುಂಪೊಂದು ಬಲವಂತವಾಗಿ ಎಳೆದೊಯ್ದಿರುವ ಘಟನೆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪುರುಷರು ಮತ್ತು ಮಹಿಳೆಯರ ಗುಂಪೊಂದು ಮಹಿಳೆಯನ್ನು ಸ್ಥಳದಿಂದ ಹೊರಗೆಳೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಹಿಳೆ ಕೆಲವು ತಿಂಗಳ ಹಿಂದೆ ಪುರುಷ ಸಂಗಾತಿಯೊಂದಿಗೆ ರಾಜಸ್ಥಾನದಿಂದ ಮಂದ್ಸೌರ್‌ಗೆ ತೆರಳಿದ್ದರು.ಆಕೆ ಈಗಾಗಲೇ ವಿವಾಹಿತಳಾಗಿದ್ದಳು ಆದರೆ ಪತಿ ಮತ್ತು ಕುಟುಂಬದಿಂದ ದೂರ ಇರುವ ಆಯ್ಕೆ ಮಾಡಿಕೊಂಡಿದ್ದಳು.
ಮಧ್ಯಪ್ರದೇಶ, ಸೆಪ್ಟೆಂಬರ್ 22: ಗರ್ಬಾ ನೃತ್ಯ ಅಭ್ಯಾಸ ಮಾಡುತ್ತಿದ್ದ ಮಹಿಳೆಯನ್ನು ಸಂಬಂಧಿಕರು ಬಲವಂತವಾಗಿ ಎಳೆದೊಯ್ದಿರುವ ಘಟನೆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪುರುಷರು ಮತ್ತು ಮಹಿಳೆಯರ ಗುಂಪೊಂದು ಮಹಿಳೆಯನ್ನು ಸ್ಥಳದಿಂದ ಹೊರಗೆಳೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಹಿಳೆ ಕೆಲವು ತಿಂಗಳ ಹಿಂದೆ ಪುರುಷ ಸಂಗಾತಿಯೊಂದಿಗೆ ರಾಜಸ್ಥಾನದಿಂದ ಮಂದ್ಸೌರ್‌ಗೆ ತೆರಳಿದ್ದರು.ಆಕೆ ಈಗಾಗಲೇ ವಿವಾಹಿತಳಾಗಿದ್ದಳು ಆದರೆ ಪತಿ ಮತ್ತು ಕುಟುಂಬದಿಂದ ದೂರ ಇರುವ ಆಯ್ಕೆ ಮಾಡಿಕೊಂಡಿದ್ದಳು, ಈ ನಿರ್ಧಾರವು ಆಕೆಯ ಸಂಬಂಧಿಕರನ್ನು ಕೆರಳಿಸಿದೆ ಎನ್ನಲಾಗಿದೆ.ಭಾವಸರ್ ಧರ್ಮಶಾಲೆಗೆ ನುಗ್ಗಿ ಆಕೆಯನ್ನು ಎಳೆದೊಯ್ದಿದ್ದಾರೆ. ಪೊಲೀಸರು ಆಕೆಯನ್ನು ರಕ್ಷಿಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

