ಸರ್ಕಾರಿ ಬಸ್ಸಿನ ಕಿಟಕಿಯಲ್ಲಿ ಮಹಿಳೆಯ ತಲೆ ಲಾಕ್! ವಿಡಿಯೋ ನೊಡಿ

| Updated By: ಸಾಧು ಶ್ರೀನಾಥ್​

Updated on: May 17, 2024 | 1:06 PM

ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಿಟಕಿ ಮೂಲಕ ತಲೆಯನ್ನು ಹೊರಹಾಕಿದಾಗ ಅವರ ತಲೆ ಕಿಟಕಿಗೆ ಸಿಕ್ಕಿಹಾಕಿಕೊಂಡು ಪರದಾಡಿದ್ದಾರೆ. ಬಸ್​ ಪ್ರಯಾಣದ ವೇಳೆ ಉಗಳುವ ಭರದಲ್ಲಿ ಕಿಟಕಿಯ ಸಣ್ಣ ಸಂದಿಯಿಂದಲೇ ತಲೆ ಹೊರ ಹಾಕಿದಾಗ ಮಹಿಳೆಯ ತಲೆ ಕಿಟಕಿಯಲ್ಲಿ ಲಾಕ್ ಆಗಿದೆ.

ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಿಟಕಿ ಮೂಲಕ ತಲೆಯನ್ನು ಹೊರಹಾಕಿದಾಗ ಅವರ ತಲೆ ಕಿಟಕಿಗೆ ಸಿಕ್ಕಿಹಾಕಿಕೊಂಡು ಪರದಾಡಿದ್ದಾರೆ. ಬಸ್​ ಪ್ರಯಾಣದ ವೇಳೆ ಉಗಳುವ ಭರದಲ್ಲಿ ಕಿಟಕಿಯ ಸಣ್ಣ ಸಂದಿಯಿಂದಲೇ ತಲೆ ಹೊರ ಹಾಕಿದಾಗ ಮಹಿಳೆಯ ತಲೆ ಕಿಟಕಿಯಲ್ಲಿ ಲಾಕ್ ಆಗಿದೆ. ಹಾಗೆ ಹೊರ ಹಾಕಿದ ತಲೆ ವಾಪಸ್​ ಒಳಗೆ ಬಾರದೇ ಅಲ್ಲೆ ಲಾಕ್ ಆಗಿಬಿಟ್ಟಿದೆ. ಕಿಟಕಿಯಲ್ಲಿ ಸಣ್ಣ ಜಾಗವಿದ್ದ ಕಾರಣ ಅರ್ಧ ಗಂಟೆಗೂ ಹೆಚ್ಚು ಕಾಲ ತಲೆ ಲಾಕ್ ಆಗಿತ್ತು.

ಈ ವೇಳೆ ಮಹಿಳೆಯ ತಲೆ ಗಮನಿಸಿದ KSRTC ಬಸ್ ನ ಚಾಲಕ, ನಿರ್ವಾಹಕ ಲಾಕ್ ಆಗಿದ್ದ ಮಹಿಳೆಯ ಪರದಾಟ ಕಂಡು ಬಸ್ ನಿಲ್ಲಿಸಿದ್ದಾರೆ. ಬಳಿಕ ಅತ್ಯಂತ ಜಾಗರೂಕತೆಯಿಂದ ಮಹಿಳೆಯ ರಕ್ಷಣೆ ಮಾಡಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಗೆ ಯಾಕ್ ಬೇಕಿತ್ತು ಈ ಅವಾಂತರ ಎಂದು ನೆಟ್ಟಿಗರು ಕಮೆಂಟ್ ಮೇಲೆ ಕಮೆಂಟ್ ಮಾಡ್ತಿದಾರೆ.

ಇದನ್ನೂ ಓದಿ: ದೇವರೇ! ನಾಳೆ ಮ್ಯಾಚ್ ಗೆಲ್ಸಪ್ಪಾ: ಆರ್​ಸಿಬಿ ಅಭಿಮಾನಿಗಳಿಂದ ದೊಡ್ಡಗಣಪತಿ ದೇವಸ್ಥಾನದಲ್ಲಿ ಪೂಜೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: May 17, 2024 01:02 PM