Loading video

ಕುಡಿಯುವ ನೀರು ಹಿಡಿಯಲು ಹೋದ ಮಹಿಳೆ ವಿದ್ಯುತ್ ಪ್ರವಹಿಸಿ ಸಾವು, ಜಮೀರ್ ಅಹ್ಮದ್​ರನ್ನು ದೂರಿದ ಸ್ಥಳೀಯರು

|

Updated on: Mar 13, 2025 | 11:44 AM

ಸ್ಥಳೀಯರು ಹೇಳುವ ಪ್ರಕಾರ ಸಚಿವ ಜಮೀರ್ ಅಹ್ಮದ್ ಖಾನ್ 20 ವರ್ಷಗಳಿಂದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ, ಮೂಲಭೂತ ಸೌಕರ್ಯವಾಗಿರುವ ಕುಡಿಯುವ ನೀರನ್ನು ಮನೆಗಳಿಗೆ ತಲುಪಿಸುವುದೂ ಕೂಡ ಸಚಿವನಿಗೆ ಆಗಿಲ್ಲ, ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ನೂರೆಂಟು ಭರವಸೆಗಳನ್ನು ನೀಡುತ್ತಾರೆ.

ಬೆಂಗಳೂರು, ಮಾರ್ಚ್ 13: ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ (Chamarajapet Assembly constituency) ಭಾಗವಾಗಿರುವ ಆನಂದಪುರ ಎಂಬಲ್ಲಿ ಇಂದು ಬೆಳಗ್ಗೆ ಸುಮಾರು 4 ಗಂಟೆಗೆ ಸೆಲ್ವಿ ಹೆಸರಿನ ಮಹಿಳೆಯೊಬ್ಬರು ಕುಡಿಯುವ ನೀರು ಹಿಡಿದುಕೊಳ್ಳಲು ಹೋದಾಗ ವಿದ್ಯುತ್ ಪ್ರವಹಿಸಿ ದುರಂತ ಸಾವನ್ನಪ್ಪಿದ್ದಾರೆ. ಏರಿಯಾದಲ್ಲಿರುವ ಮನೆಗಳಿಗೆ ನೀರಿನ ಸಂಪರ್ಕ ಇಲ್ಲದಿರುವ ಕಾರಣ ಸ್ಥಳೀಯರು, ನೀರು ಬಿಟ್ಟಾಗ ನೇರವಾಗಿ ವಿದ್ಯುತ್ ಕಂಬದಿಂದ ವಿದ್ಯುತ್ ಪಡೆದು ಮೋಟಾರ್​ ಗಳನ್ನು ಆನ್ ಮಾಡಿಕೊಳ್ಳುತ್ತಾರೆ. ಸೆಲ್ವಿ ಹಾಗೆ ಕಂಬಕ್ಕೆ ಪ್ಲಗ್ ಹಾಕಲು ಹೋದಾಗ ಅನಾಹುತ ಸಂಭವಿಸಿದೆ. ಇಲ್ಲಿನ ನಿವಾಸಿಗಳು ಶಾಸಕ ಜಮೀರ್ ಅಹ್ಮದ್​ರನ್ನು ದೂರುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಜಮೀರ್ ಅಹ್ಮದ್​ ​ಕಾರಣ, ಭಾಸ್ಕರ್ ರಾವ್