ಭಿಕ್ಷೆಯೆತ್ತಿ ಬದುಕು ನಡೆಸುವ ರಾಯಚೂರಿನ ರಂಗಮ್ಮ ದೇವಸ್ಥಾನ ನಿರ್ಮಾಣಕ್ಕೆ ಕೊಟ್ಟಿದ್ದು ₹ 1.80 ಲಕ್ಷ!
ಆಂಧ್ರಪ್ರದೇಶ ಮೂಲದವರಾಗಿರುವ ಮತ್ತು ಯಾರೊಂದಿಗೂ ಹೆಚ್ಚು ಮಾತಾಡದ ರಂಗಮ್ಮ ಅವರಲ್ಲಿರುವ ಉದಾರತೆ ದಿಗಿಲು ಮೂಡಿಸುತ್ತದೆ. ಪುರಸಭೆಯವರು ಕಸ ಗುಡಿಸುತ್ತಿರುವುದು ಕಂಡರೆ, ಹೋಗಿ ತಿಂಡಿ ತಿನ್ನು ಅಂತ ಹಣ ನೀಡುತ್ತಾರಂತೆ. ಭಿಕ್ಷಾಟನೆ ತಪ್ಪು ಅಂತ ಒಂದು ಜನರಲ್ ಕಾನ್ಸೆಪ್ಷನ್ ನಮ್ಮಲ್ಲಿದೆ. ಅದರೆ, ಮಹಿಳೆಯೊಬ್ಬರು ಭಿಕ್ಷೆ ಮೂಲಕ ಎತ್ತಿದ ಹಣವನ್ನು ಹೀಗೆ ದಾನ ಮಾಡಿದರೆ ಅದನ್ನು ತಪ್ಪೆನ್ನಲಾದೀತೇ?
ರಾಯಚೂರು, ಆಗಸ್ಟ 8: ಭಿಕ್ಷಾಟನೆ ಮಾಡುವ ಜನ ಬದುಕಲು ಅದನ್ನು ಮಾಡುತ್ತಾರೆ, ಆದರೆ ರಾಯಚೂರು ತಾಲೂಕಿನ ಬಿಜ್ಜನಗೆರಾ (Bijjangera) ಹೆಸರಿನ ಗ್ರಾಮದ ರಂಗಮ್ಮ ತಮ್ಮ ಬದುಕಿನಿಡೀ ಮಾಡಿದ ಸಂಪಾದನೆಯನ್ನು ಗ್ರಾಮದಲ್ಲಿರುವ ಮಾರೆಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ನೀಡಿದ್ದಾರೆ ಅಂದರೆ ನಂಬ್ತೀರಾ? ಅಂದಹಾಗೆ ಭಿಕ್ಷುಕಿ ರಂಗಮ್ಮ ದಾನದ ರೂಪದಲ್ಲಿ ದೇವಸ್ಥಾನಕ್ಕೆ ನೀಡಿದ ಹಣವೆಷ್ಟು ಗೊತ್ತಾ? ಬರೋಬ್ಬರಿ 1.80 ಲಕ್ಷ ರೂ.! ಭಿಕ್ಷೆಯ ಮೂಲಕ ಅವರು ಸಂಪಾದಿಸಿದ ಹಣದಲ್ಲಿ ಕೆಲ ನೋಟುಗಳು ನೀರುಬಿದ್ದು, ಹುಳತಿಂದು ಬ್ಯಾಂಕ್ನವರೂ ಸ್ವೀಕರಿಸದಷ್ಟು ಹಾಳಾಗಿದ್ದವಂತೆ! ಅಂಥ ನೋಟುಗಳ ಮೊತ್ತ ಏನಿಲ್ಲವೆಂದರೂ ₹15,000! ಅರವತ್ತು ವರ್ಷ ವಯಸ್ಸಿನ ರಂಗಮ್ಮನನ್ನು ಕಳೆದ 40 ವರ್ಷಗಳಿಂದ ನೋಡುತ್ತಿರುವ ಸ್ಥಳೀಯ ಮುತ್ತಪ್ಪ ಹೇಳುವ ಹಾಗೆ ಊರವರು ಆಕೆಗೊಂದು ಶೆಡ್ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: ವಿದೇಶದಲ್ಲಿ ಓದು, ಐಟಿ ಕಂಪೆನಿಯಲ್ಲಿ ಉದ್ಯೋಗ, ಈಗ ಭಿಕ್ಷಾಟನೆ, ಬೆಂಗಳೂರು ಇಂಜಿನಿಯರ್ನ ಹೃದಯ ವಿದ್ರಾವಕ ಕಥೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
