ವಿದೇಶದಲ್ಲಿ ಓದು, ಐಟಿ ಕಂಪೆನಿಯಲ್ಲಿ ಉದ್ಯೋಗ, ಈಗ ಭಿಕ್ಷಾಟನೆ, ಬೆಂಗಳೂರು ಇಂಜಿನಿಯರ್ನ ಹೃದಯ ವಿದ್ರಾವಕ ಕಥೆ
ಮನುಷ್ಯನ ಜೀವನವೇ ಹಾಗೆ, ಎಲ್ಲವೂ ಇದ್ದ ವ್ಯಕ್ತಿಯೂ ಏನು ಇಲ್ಲದೇ ಬೀದಿಗೆ ಬೀಳಲು ಬಹುದು. ಒಂದು ಕಾಲದಲ್ಲಿ ಯಶಸ್ವಿ ವೃತ್ತಿಪರನಾಗಿದ್ದ ವ್ಯಕ್ತಿಯೊಬ್ಬನು ಹೆತ್ತವರನ್ನು ಕಳೆದುಕೊಂಡು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಾನೆ. ಈ ಕುರಿತಾದ ಹೃದಯ ವಿದ್ರಾವಕ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ನಮ್ಮ ಸುತ್ತಮುತ್ತಲಿನ ಕೆಲವು ಘಟನೆಗಳನ್ನು ನೋಡಿದಾಗ ಬದುಕು ಎಷ್ಟು ಕ್ರೂರವೆಂದೇನಿಸುತ್ತದೆ. ಇಲ್ಲಿ ನಾವಂದುಕೊಂಡಂತೆ ಏನು ಆಗದು. ಕೈತುಂಬಾ ಸಂಬಳ ಸಿಗುವ ಕೆಲಸ, ಮನೆ, ಕುಟುಂಬ ಎಲ್ಲವು ಇದ್ದವರು ಕೂಡ ಕೊನೆಗೊಂದು ದಿನ ಏನು ಇಲ್ಲದವರಂತೆ ಬದುಕಲು ಬಹುದು. ಇದಕ್ಕೆ ಉದಾಹರಣೆಯಂತೆ ಇಲ್ಲೊಬ್ಬ ವ್ಯಕ್ತಿಯೂ, ಒಂದು ಕಾಲದಲ್ಲಿ ಯಶಸ್ವಿ ವೃತ್ತಿಪರನಾಗಿದ್ದನು. ಜರ್ಮನಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಕೈ ತುಂಬಾ ಸಂಬಳ ಸಿಗುವ ಉದ್ಯೋಗದಲ್ಲಿದ್ದನು. ಆದರೆ ಇದೀಗ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದಾನೆ. ಈ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಕರ್ನಾಟಕ ಪೋರ್ಟ್ ಪೋಲಿಯೊ ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವ್ಯಕ್ತಿಯ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಈ ವ್ಯಕ್ತಿಯೂ, ”ನಾನು 2013ರಲ್ಲಿ ಫ್ರಾಂಕರ್ಟ್‌ನಲ್ಲಿದ್ದೆ, ನಂತರದಲ್ಲಿ ನಾನು ಬೆಂಗಳೂರಿಗೆ ಬಂದೆ. ಆ ಬಳಿಕ ನಾನು ಗ್ಲೋಬಲ್ ವಿಲೇಜ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ನಾನು ನನ್ನ ಹೆತ್ತವರನ್ನು ಕಳೆದುಕೊಂಡೆ,’ ಎಂದು ಹೇಳಿರುವುದನ್ನು ಕಾಣಬಹುದು.
ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಎಂಎಸ್ ಶಿಕ್ಷಣವನ್ನು ಪೂರ್ಣಗೊಳಿಸಿ, ಗ್ಲೋಬಲ್ ವಿಲೇಜ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಈ ವ್ಯಕ್ತಿಯೂ ಜೀವನದಲ್ಲಿ ವಿಧಿಯೂ ಆಟವಾಡಿದೆ. ಹೆತ್ತವರನ್ನು ಹಾಗೂ ಪ್ರೀತಿಸುತ್ತಿದ್ದ ಹುಡುಗಿಯೂ ಕಳೆದುಕೊಂಡ ವ್ಯಕ್ತಿಯೂ ಕುಡಿತಕ್ಕೆ ದಾಸನಾಗಿದ್ದಾನೆ. ಇದೀಗ ಜೀವನ ಸಾಗಿಸಲು ಬೆಂಗಳೂರಿನ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದಾನೆ. ಈ ವಿಡಿಯೋವು ವೈರಲ್ ಆಗುತ್ತಿದ್ದಂತೆ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ನೆಟ್ಟಿಗರೊಬ್ಬರು,” ಇದು ನಿಜಕ್ಕೂ ಹೃದಯ ವಿದ್ರಾವಕವಾಗಿದೆ. ತಂದೆ ತಾಯಿಯ ಬಿಟ್ಟು ಅವನಿಗೆ ಕುಟುಂಬದ ಸದಸ್ಯರಿದ್ದಾರೆಯೇ, ಅವರು ಆತನನ್ನು ಹುಡುಕುತ್ತಿರಬಹುದು. ಆದರೆ ಈ ವ್ಯಕ್ತಿ ಕುಟುಂಬದ ಸದಸ್ಯರಿಗೆ ಸಿಗದೇ ಇರಬಹುದು ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, ನೀವು ಆ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುದರಿಂದ ದಯವಿಟ್ಟು ಆತನಿಗೆ ಸರಿಯಾದ ಚಿಕಿತ್ಸೆ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: 56ನೇ ವಯಸ್ಸಿನ ಈ ರಾಜನಿಗೆ 16 ಮದುವೆ, 45 ಮಕ್ಕಳು
ಇನ್ನೊಬ್ಬರು, “ಪ್ರಾರಬ್ಧ ಕರ್ಮಗಳು ಜನರ ಜೀವನದ ಕೆಲವು ಸಮಯಗಳಲ್ಲಿ ಕಾಡುತ್ತವೆ, ಒಳ್ಳೆಯ ಮತ್ತು ಕೆಟ್ಟ ಕರ್ಮದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ವ್ಯಕ್ತಿಯ ದೈನಂದಿನ ಜೀವನದ ನೋವನ್ನು ಯಾರಿಂದಲೂ ಹಂಚಿಕೊಳ್ಳಲು ಸಾಧ್ಯವಿಲ್ಲ. ದೇವರು ಆತನನ್ನು ಕಾಪಾಡಲಿ. ಆ ವ್ಯಕ್ತಿಗೆ ಸಹಾಯ ಮಾಡುವ ಮನಸ್ಸು ನಮ್ಮೆಲ್ಲರದಾಗಲಿ’ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ