ಬೇರೊಬ್ಬನ ಜೊತೆ ಸುತ್ತಾಟ; ನಡು ರಸ್ತೆಯಲ್ಲಿಯೇ ಗರ್ಲ್‌ಫ್ರೆಂಡನ್ನು ಅಡ್ಡಗಟ್ಟಿ ತಾನು ಗಿಫ್ಟ್‌ ಕೊಟ್ಟ ಸ್ಕೂಟಿಯನ್ನು ಕಿತ್ತುಕೊಂಡು ಹೋದ ಗೆಳೆಯ

ಪ್ರೇಮಿಗಳ ಜಗಳ, ರಂಪಾಟಗಳಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ತನ್ನ ಗರ್ಲ್‌ಫ್ರೆಂಡ್‌ ನನಗೆಯೇ ಮೋಸ ಮಾಡಿ ಬೇರೊಬ್ಬ ಹುಡುಗನ ಜೊತೆ ಸುತ್ತಾಟ ನಡೆಸುತ್ತಿದ್ದ ವಿಷಯ ತಿಳಿದ ಪ್ರೇಮಿ ಆಕೆಯನ್ನು ನಡುರಸ್ತೆಯಲ್ಲಿಯೇ ಅಡ್ಡಗಟ್ಟಿ ತಾನು ಆಕೆಗೆ ಗಿಫ್ಟ್‌ ಕೊಟ್ಟಿದ್ದಂತಹ ಸ್ಕೂಟಿಯನ್ನು ಕಿತ್ತುಕೊಂಡು ಹೋಗಿದ್ದಾನೆ.

ಬೇರೊಬ್ಬನ ಜೊತೆ ಸುತ್ತಾಟ; ನಡು ರಸ್ತೆಯಲ್ಲಿಯೇ ಗರ್ಲ್‌ಫ್ರೆಂಡನ್ನು ಅಡ್ಡಗಟ್ಟಿ ತಾನು ಗಿಫ್ಟ್‌ ಕೊಟ್ಟ ಸ್ಕೂಟಿಯನ್ನು ಕಿತ್ತುಕೊಂಡು ಹೋದ ಗೆಳೆಯ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Nov 22, 2024 | 6:25 PM

ಈಗಂತೂ ಲವ್‌ ಲೈಫ್‌ ಅಲ್ಲಿ ವೈವಾಹಿಕ ಜೀವನದಲ್ಲಿ ಮೋಸದಾಟಗಳು ನಡೆಯುವುದು ಸಾಮಾನ್ಯವಾಗಿಬಿಟ್ಟಿದೆ. ಯಾರೋ ಹುಡುಗಿಗಾಗಿ ಪ್ರೀತಿಸಿದವಳಿಗೆ ಕೈ ಕೊಡುವಂತಹದ್ದು, ಒಬ್ಬನ ಜೊತೆ ಪ್ರೀತಿಯಲ್ಲಿ ಇದ್ರೂ ಇನ್ನೊಬ್ಬನ ಜೊತೆ ಸುತ್ತಾಟ ನಡೆಸುವಂತಹದ್ದು ಇದೆಲ್ಲಾ ನಡೆಯುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಯುವತಿಯೊಬ್ಬಳು ಬಾಯ್‌ಫ್ರೆಂಡ್‌ ಕಣ್ತಪ್ಪಿಸಿ ಬೇರೊಬ್ಬ ಹುಡುಗನ ಜೊತೆ ಸುತ್ತಾಡುವಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದು, ಗರ್ಲ್‌ಫ್ರೆಂಡ್‌ ಮೋಸದಾಟ ತಿಳಿದು ಆ ಯುವಕ ಆಕೆಯನ್ನು ನಡು ರಸ್ತೆಯಲ್ಲಿಯೇ ಅಡ್ಡಗಟ್ಟಿ ತಾನು ಆಕೆಗೆ ಗಿಫ್ಟ್‌ ಕೊಟ್ಟಿದ್ದಂತಹ ಸ್ಕೂಟಿಯನ್ನು ಕಿತ್ತುಕೊಂಡು ಹೋಗಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಯುವಕನ ಈ ಧೈರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಯುವತಿ ತಾನು ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನಿಗೆಯೇ ಮೋಸ ಮಾಡಿ ಬೇರೊಬ್ಬ ಹುಡುಗನ ಜೊತೆ ಸ್ಕೂಟಿಯಲ್ಲಿ ಸುತ್ತಾಡುತ್ತಿರುವ ವೇಳೆ ಆಕೆ ಬಾಯ್‌ಫ್ರೆಂಡ್‌ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದು, ಈಕೆಯ ಮೋಸದಾಟದಿಂದ ಕೋಪಗೊಂಡ ಗೆಳೆಯ ಆಕೆಗೆ ಬೈದು, ಸ್ಕೂಟಿಯಿಂದ ಕೆಳಗಿಳಿಯುವಂತೆ ಹೇಳಿ ಕೊನೆಗೆ ತಾನು ಗಿಫ್ಟ್‌ ನೀಡಿದ್ದಂತಹ ಸ್ಕೂಟರ್‌ ಅನ್ನು ಆಕೆಯಿಂದ ಕಿತ್ತುಕೊಂಡು ಹೋಗಿದ್ದಾನೆ.

ಶೋನಿ ಕಪೂರ್‌ (ShoneeKapoor) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಗರ್ಲ್‌ಫ್ರೆಂಡ್‌ ಬೇರೊಬ್ಬ ಯುವಕನ ಜೊತೆ ಸುತ್ತಾಡುತ್ತಿದ್ದಾಗ ಆಕೆಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿರುವ ದೃಶ್ಯವನ್ನು ಕಾಣಬಹುದು. ಆಕೆಯ ಸ್ಕೂಟಿಯನ್ನು ಅಡ್ಡಗಟ್ಟಿದ ಗೆಳೆಯ ಕೀ ಕಿತ್ತುಕೊಂಡು ಗಾಡಿಯಿಂದ ಎದ್ದೇಳೆ, ಅದು ನಾನು ನಿನಗೆ ಗಿಫ್ಟ್‌ ಕೊಟ್ಟಿದ್ದು ಎಂದು ರಂಪಾಟ ನಡೆಸಿ, ತಾನು ಗರ್ಲ್‌ಫ್ರೆಂಡ್‌ಗೆ ಗಿಫ್ಟ್‌ ಕೊಟ್ಟ ಸ್ಕೂಟಿಯನ್ನು ಆಕೆಯಿಂದ ಕಿತ್ತುಕೊಂಡು ಹೋಗಿದ್ದಾನೆ.

ಇದನ್ನೂ ಓದಿ: ಈ ದೇಶದವರು ನಿದ್ದೆಯಲ್ಲಿ ಅಗ್ರಸ್ಥಾನ, ಭಾರತಕ್ಕೆ ಎಷ್ಟನೇ ಸ್ಥಾನ?; ಗ್ಲೋಬಲ್ ಸ್ಲೀಪ್ ಸಮೀಕ್ಷೆಯ ವರದಿ ಇಲ್ಲಿದೆ

ನವೆಂಬರ್‌ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಯುವಕ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾನೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಕೆಯ ಆ ಯುವಕನ ಪವಿತ್ರ ಪ್ರೀತಿಗೆ ಯೋಗ್ಯಳಲ್ಲʼ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಹುಡುಗಿಯರನ್ನು ಯಾವತ್ತೂ ನಂಬಬಾರದುʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ