ಮಳೆರಾಯನನ್ನು ಮೆಚ್ಚಿಸಲು ಬೀದರ್ ರೈತ ಮಹಿಳೆಯೊಬ್ಬರು ತಮ್ಮ ಹೊಲದಲ್ಲಿ ಡ್ಯಾನ್ಸ್ ಮಾಡಿದರು!
ಮಳೆರಾಯ ಸಂಪ್ರೀತಗೊಂಡು ಸುರಿಯಲಾರಂಭೀಸಲಿ ಅಂತ ಅವರು ತಮ್ಮ ಹೊಲದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ಅವರ ಕಾಳಜಿಪೂರ್ವಕ ಕುಣಿತ ವರುಣನಿಗೆ ಮೆಚ್ಚಿಕೆಯಾಗಿ ಆತ ಆ ಭಾಗದಲ್ಲಿ ಮಾತ್ರವಲ್ಲ ಎಲ್ಲೆಲ್ಲಿ ಕೊರತೆ ಅನಿಸಿದೆಯೋ ಅಲ್ಲೆಲ್ಲ ಸುರಿಯಲಿ ಅಂತ ಆಶಿಸೋಣ.
ಬೀದರ್ ಜಿಲ್ಲೆಯ ಹುಮಾನಾಬಾದ್ ನಲ್ಲಿ (Humnabad) ಇದುವರೆಗೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಮಾರಾಯ್ರೇ. ಬಿತ್ತನೆ ಕಾರ್ಯ ಪೂರೈಸಿರುವ ರೈತರು ಕಾತುರತೆ ಮತ್ತು ಆತಂಕದಿಂದ ಮಳೆಗಾಗಿ ಕಾಯುತ್ತಿದ್ದಾರೆ. ಈ ರೈತ ಮಹಿಳೆಯ ಹೆಸರು ವಿಜಯಲಕ್ಷ್ಮಿ ವೀರೇಶ್ ಹಾರ್ಕುಡೆ (Vijayalaxmi Veeresh Harkude). ಮಳೆರಾಯ ಸಂಪ್ರೀತಗೊಂಡು ಸುರಿಯಲಾರಂಭೀಸಲಿ ಅಂತ ಅವರು ತಮ್ಮ ಹೊಲದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ಅವರ ಕಾಳಜಿಪೂರ್ವಕ ಕುಣಿತ ವರುಣನಿಗೆ ಮೆಚ್ಚಿಕೆಯಾಗಿ ಆತ ಆ ಭಾಗದಲ್ಲಿ ಮಾತ್ರವಲ್ಲ ಎಲ್ಲೆಲ್ಲಿ ಕೊರತೆ ಅನಿಸಿದೆಯೋ ಅಲ್ಲೆಲ್ಲ ಸುರಿಯಲಿ ಅಂತ ಆಶಿಸೋಣ. ಅಂದಹಾಗೆ, ವಿಜಯಲಕ್ಷ್ಮಿ ಒಬ್ಬ ಪ್ರಗತಿಪರ (progressive) ರೈತಮಹಿಳೆಯಾಗಿದ್ದು ಟ್ರ್ಯಾಕ್ಟರ್ ಕೂಡ ಓಡಿಸುತ್ತಾರೆ.
ಇದನ್ನೂ ಓದಿ: Viral Video: ನೆಲಗಡಲೆಯನ್ನು ತಿನ್ನಲು ಹರಸಾಹಸ ಪಡುತ್ತಿರುವ ಅಳಿಲು!