ಮಂಗಳೂರಲ್ಲಿ ಭಾರಿ ಮಳೆ, ಬಡಾವಣೆ ಮತ್ತು ಮನೆಗಳೊಳಗೆ ನುಗ್ಗಿದ ನೀರು

ಮಂಗಳೂರಲ್ಲಿ ಭಾರಿ ಮಳೆ, ಬಡಾವಣೆ ಮತ್ತು ಮನೆಗಳೊಳಗೆ ನುಗ್ಗಿದ ನೀರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 30, 2022 | 12:43 PM

ರಾಜಾಕಾಲುವೆ ದುರಸ್ತಿಯಾಗದ ಕಾರಣ ಮಳೆನೀರು ಜನವಸತಿ ಪ್ರದೇಶ ಮತ್ತು ಮನೆಗಳಲ್ಲಿ ನುಗ್ಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Mangaluru: ಕರಾವಳಿ ಮತ್ತು ಬಂದರು ನಗರ ಮಂಗಳೂರು (Mangaluru) ಕೇವಲ ಸಮುದ್ರ ನೀರಿನಿಂದ (sea water) ಮಾತ್ರ ಆವೃತಗೊಂಡಿಲ್ಲ ಮಾರಾಯ್ರೇ, ಬುಧವಾರ ಸುರಿದ ಧಾರಕಾರ ಮಳೆಯಿಂದಾಗಿ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಮಳೆ ನೀರಿನಿಂದಲೂ ಜಲಾವೃತಗೊಂಡಿವೆ (submerged). ನಗರದ ನಾನಾ ಭಾಗಗಳಿಂದ ನಮಗೆ ವಿಡಿಯೋಗಳು ಸಿಕ್ಕಿವೆ. ರಸ್ತೆಗಳ ಮೇಲೆ ಮೊಣಕಾಲು ಮಟ್ಟದವರೆಗೆ ನೀರು ಹರಿಯುತ್ತಿದೆ ಮತ್ತು ತಗ್ಗುಪ್ರದೇಶಗಳಲ್ಲಿರುವ ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ರಾಜಾಕಾಲುವೆ ದುರಸ್ತಿಯಾಗದ ಕಾರಣ ಮಳೆನೀರು ಜನವಸತಿ ಪ್ರದೇಶ ಮತ್ತು ಮನೆಗಳಲ್ಲಿ ನುಗ್ಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:    Viral Video: ಕ್ಯಾಮಾರಾ ಕಣ್ಣಿಗೆ ಬಿದ್ದ ‘ಚಿನ್ನದ ಸರ ಸಾಗಾಣಿಕದಾರರು’: ಇರುವೆಗಳ ಸಾಹಸದ ವಿಡಿಯೋ ವೈರಲ್