ವಿಡಿಯೋ: ಹುಲ್ಲು ಹೊತ್ತ ಟ್ರ್ಯಾಕ್ಟರ್ ಜಸ್ಟ್ ಜೀಪ್ಗೆ ತಾಗಿತ್ತೆಂದು ರೈತನ ಮೇಲೆ ಲೇಡಿ ಪಿಎಸ್ಐ ಹಲ್ಲೆ ಆರೋಪ
ರೈತನ ಮೇಲೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ ಹಲ್ಲೆಗೈದು ನಿಂದಿಸಿರುವಂತಹ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ರಾಯಚೂರು: ರೈತನ ಮೇಲೆ ಮಹಿಳಾ ಪಿಎಸ್ಐ (Woman PSI) ಹಲ್ಲೆಗೈದು ನಿಂದಿಸಿರುವಂತಹ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಸಿರವಾರ ಠಾಣೆ ಪಿಎಸ್ಐ ಗೀತಾಂಜಲಿ ಶಿಂಧೆ ವಿರುದ್ಧ ರೈತ ಲಿಂಗಯ್ಯ ಆರೋಪ ಮಾಡಿದ್ದಾರೆ. ಹುಲ್ಲಿನ ಮೇವು ಲೋಡ್ ತುಂಬಿಕೊಂಡು ಲಿಂಗಯ್ಯ ಟ್ರ್ಯಾಕ್ಟರ್ನಲ್ಲಿ ಹೊರಟಿದ್ದು, ಈ ವೇಳೆ ಪೊಲೀಸ್ ಜೀಪ್ಗೆ ಟ್ರ್ಯಾಕ್ಟರ್ ಡಿಕ್ಕಿ ಆಗಿದೆ ಎಂಬ ಆರೋಪ ಮಾಡಲಾಗಿದೆ. ಲೇಡಿ ಪಿಎಸ್ಐ ಜೀಪ್ಗೆ ಟ್ರ್ಯಾಕ್ಟರ್ ಟಚ್ ಆದ ಹಿನ್ನೆಲೆ ಕಿರಿಕ್ ಮಾಡಿದ್ದಾರೆ. PSI ಗೀತಾಂಜಲಿ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಟ್ರ್ಯಾಕ್ಟರ್ ಕೀ ಕಸಿದುಕೊಂಡು ರೈತ ಲಿಂಗಯ್ಯನನ್ನು ಠಾಣೆಗೆ ಕರೆದೊಯ್ದ ಆರೋಪ ಮಾಡಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 02, 2022 05:41 PM