ಕಲಬುರಗಿ: ಹೆಂಡತಿಯನ್ನು ಮನೆಗೆ ಕರೆತರಲು ಹೋದಾಗ ಅಣ್ಣನಿಂದ ಪತಿಯ ಮೇಲೆ ಹಲ್ಲೆ, ಚಾಕು ಇರಿತ

Updated on: Apr 11, 2025 | 5:05 PM

ದ್ಯಾವಮ್ಮ ಹೇಳುವಂತೆ ಟೋನಿ ತಂಗಿಯನ್ನು ಆನಂದ್ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಅದರೆ ಆಕೆಗೆ ಆನಂದ್ ಮೇಲೆ ಜಾಸ್ತಿ ಅಪನಂಬಿಕೆಯಂತೆ. ಫೋನ್ ಮಾಡಿದಾಗ ಆನಂದ್ ಫೋನ್ ಬ್ಯೂಸಿ ಬಂದರೆ ಯಾವ ಹುಡುಗಿ ಜೊತೆ ಮಾತಾಡುತ್ತಿದ್ದೆ ಅಂತ ಜಗಳ ಕಾಯುತ್ತಿದ್ದಳಂತೆ. ಮನೆಗೆ ತಡವಾಗಿ ಬಂದರೆ ಇಷ್ಟು ಹೊತ್ತು ಯಾವಳ ಜೊತೆ ಇದ್ದೆ ಅಂತ ಕಾದಾಡುತ್ತಿದ್ದಳಂತೆ.

ಕಲಬುರಗಿ, ಏಪ್ರಿಲ್ 11: ಕಲಬುರಗಿಯ ಗಾಜಿಪುರದಲ್ಲಿ ಕೊಲೆ ಯತ್ನವೊಂದು ನಡೆದಿದ್ದು ಹಲ್ಲೆಗೊಳಗಾದ ವಿವಾಹಿತ ಯುವಕನ ತಾಯಿ ತಮ್ಮ ಗೋಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಈ ಮಹಿಳೆಯ ಹೆಸರು ದ್ಯಾವಮ್ಮ (Dyavamma) ಮತ್ತು ಅವರು ಹೇಳುವ ಪ್ರಕಾರ ಮಗ ಆನಂದ್ ತನ್ನ ಹೆಂಡತಿಯನ್ನು ಮನೆಗೆ ಕರೆತರಲೆಂದು ಪತ್ನಿಯ ತವರುಮನೆ ನಗರದಲ್ಲಿರುವ ಗಾಜಿಪುರ ಏರಿಯಾಗೆ ಹೋದಾಗ ಹೆಂಡತಿಯ ಅಣ್ಣ ಟೋನಿ ಹೆಸರಿನ ಯುವಕ ಚಾಕುವಿನ ಇರಿದು ಹತ್ಯೆ ಮಾಡುವ ಪ್ರಯತ್ನ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆನಂದ್​​ನನ್ನು ಕಲಬುರಗಿ ಜಿಲ್ಲಾಸ್ಪತ್ರೆಯ ಟ್ರಾಮಾ ಕೇರ್​ಗೆ ದಾಖಲಿಸಲಾಗಿದೆ.

ಇದನ್ನೂ ಓದಿ:   Video: ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ