World Water Day: ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆ ಶಿವಕುಮಾರ್
ಕಾವೇರಿ ನೀರು ಉಳಿಸಲು, ಸರಿಯಾಗಿ ಬಳಸಲು ಅಭಿಯಾನ ನಡೆಸಲಾಗುತ್ತದೆ. ಆ ನಿಟ್ಟಿನಲ್ಲಿ ಕಾವೇರಿ ಪೂಜೆ ಮಾಡಬೇಕೆಂದು ಈಗಾಗಲೇ ಹೇಳಿದ್ದೆ. ಕೆಆರ್ಎಸ್ನಲ್ಲಿ ನಾನು ಈ ಬಗ್ಗೆ ಘೋಷಣೆ ಮಾಡಿದ್ದೆ. ಪ್ರಾಯೋಗಿಕವಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ನಡೆಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಒಂದು ತಿಂಗಳು ಅಭಿಯಾನ ಮಾಡ್ತೇವೆ ಎಂದು ಡಿಸಿಎಂ ತಿಳಿಸಿದ್ದಾರೆ.
ಬೆಂಗಳೂರು, ಮಾರ್ಚ್ 20: ವಿಶ್ವಜಲ ದಿನ (World Water Day) ಆಚರಣೆ ಅಂಗವಾಗಿ ಮತ್ತು ಕಾವೇರಿ ನೀರು ಉಳಿಸುವ ಅಭಿಯಾನಕ್ಕಾಗಿ ಶುಕ್ರವಾರ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ, ಪೂಜೆ ನೆರವೇರಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ವರ್ಷ 5ನೇ ಹಂತದ ಕಾವೇರಿ ಯೋಜನೆ ಪ್ರಾರಂಭಿಸಿದ್ದೇವೆ. ಬೆಂಗಳೂರಿಗೆ ನೀರು ಒದಗಿಸಲು ಎಲ್ಲಾ ವ್ಯವಸ್ಥೆ ಆಗಿದೆ. 6ನೇ ಹಂತಕ್ಕೂ ಡಿಪಿಆರ್ ರೆಡಿಯಾಗಿದೆ ಎಂದರು.
Latest Videos