ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ ಎಂದ ಕಾಂಗ್ರೆಸ್ ಶಾಸಕ

Edited By:

Updated on: Jun 22, 2025 | 4:12 PM

ಕೆಎಸ್ ಆರ್ ಟಿಸಿ ಬಸ್​ ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಬಗ್ಗೆ ಸಾರ್ವಜನಿಕರಿಂದ ಅಪಸ್ವರ ಕೇಳಿಬರುತ್ತಿವೆ. ಫ್ರೀ ಪ್ರಯಾಣ ಮಾಡಿದ್ದರಿಂದ ಹೆಚ್ಚಾಗಿ ಮಹಿಳೆಯರು ಬಸ್​ ನಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಗಂಡು ಮಕ್ಕಳಿಗೆ ಜಾಗ ಇಲ್ಲದಂತಾಗಿದೆ ಎನ್ನುವ ಆರೋಪ ಕೇಳಿಬಂದಿವೆ. ಇನ್ನು ಇದೀಗ ಇದನ್ನು ಸ್ವತಃ ಕಾಂಗ್ರೆಸ್ ಶಾಸಕ, ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ  ಆರ್ ವಿ ದೇಶಪಾಂಡೆ ಅವರೇ ಒಪ್ಪಿಕೊಂಡಿದ್ದಾರೆ.

ಕೊಪ್ಪಳ, (ಜೂನ್ 22): ಕೆಎಸ್ ಆರ್ ಟಿಸಿ ಬಸ್​ ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಬಗ್ಗೆ ಸಾರ್ವಜನಿಕರಿಂದ ಅಪಸ್ವರ ಕೇಳಿಬರುತ್ತಿವೆ. ಫ್ರೀ ಪ್ರಯಾಣ ಮಾಡಿದ್ದರಿಂದ ಹೆಚ್ಚಾಗಿ ಮಹಿಳೆಯರು ಬಸ್​ ನಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಗಂಡು ಮಕ್ಕಳಿಗೆ ಜಾಗ ಇಲ್ಲದಂತಾಗಿದೆ . ಅಲ್ಲದೇ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿವೆ. ಇನ್ನು ಇದೀಗ ಇದನ್ನು ಸ್ವತಃ ಕಾಂಗ್ರೆಸ್ ಶಾಸಕ, ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ  ಆರ್ ವಿ ದೇಶಪಾಂಡೆ ಅವರೇ ಒಪ್ಪಿಕೊಂಡಿದ್ದಾರೆ. ಕೊಪ್ಪಳದಲ್ಲಿಂದು ಮಾತನಾಡಿದ ಅವರು, ಹೆಣ್ಮಕ್ಕಳು ಎಲ್ಲೊಂದರಲ್ಲಿ ಹೋಗುತ್ತಿದ್ದಾರೆ. ಹೀಗಾಗಿ ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ. ಪರಿಸ್ಥಿತಿ ಕೆಟ್ಟದಾಗಿದೆ ಎಂದರು.

Loading...
Unable to load recommendations.
Follow Us