ಯಾದಗಿರಿ: ಭಾವೈಕ್ಯತೆಯ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಪ್ರತಿಷ್ಠಾಪಿಸಿ ಹಬ್ಬ ಆಚರಣೆ

| Updated By: ಆಯೇಷಾ ಬಾನು

Updated on: Sep 08, 2024 | 9:31 AM

ಅಬ್ದುಲ್ ನಬಿ ಎಂಬ ಮುಸ್ಲಿಂ ವ್ಯಕ್ತಿ ಮನೆಯಲ್ಲಿ ಕಳೆದ 24 ವರ್ಷಗಳಿಂದ ಗಣೇಶ ಚತುರ್ಥಿ ಆಚರಣೆ ಮಾಡುತ್ತಿದ್ದಾರೆ. ಈ ಮೂಲಕ ಈ ಕುಟುಂಬ ದೋರನಹಳ್ಳಿ ಗ್ರಾಮದಲ್ಲಿ ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬ ಭಾವೈಕ್ಯತೆಯ ಸಂದೇಶ ಸಾರಿದೆ.

ಯಾದಗಿರಿ, ಸೆ.08: ನಾಡಿನೆಲ್ಲೆಡೆ ಗಣೇಶ ಹಬ್ಬದ (Ganesha Chaturthi) ಸಂಭ್ರಮ ಮನೆ ಮಾಡಿದೆ. ಯಾದಗಿರಿ (Yadgir) ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಗಣೇಶ ಹಬ್ಬ ಭಾವೈಕ್ಯತೆಯ ಸಂದೇಶ ಸಾರಿದೆ. ಮುಸ್ಲಿಮರ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅಬ್ದುಲ್ ನಬಿ ಎಂಬ ಮುಸ್ಲಿಂ ವ್ಯಕ್ತಿ (Muslim Family) ಮನೆಯಲ್ಲಿ ಕಳೆದ 24 ವರ್ಷಗಳಿಂದ ಗಣೇಶ ಚತುರ್ಥಿ ಆಚರಣೆ ಮಾಡುತ್ತಿದ್ದಾರೆ. ಈ ಮೂಲಕ ಈ ಕುಟುಂಬ ದೋರನಹಳ್ಳಿ ಗ್ರಾಮದಲ್ಲಿ ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ.

ಅಬ್ದುಲ್ ನಬಿ ಮನೆಯಲ್ಲಿ ಹಿಂದು ಧರ್ಮದಂತೆ ಶಾಸ್ತ್ರಬದ್ಧವಾಗಿ ಗಣೇಶನ ಪೂಜೆ ನೆರವೇರುತ್ತೆ. ಮಾನವರು ನಾವೆಲ್ಲಾ ಒಂದೇ ಎಂಬ ತತ್ವದಲ್ಲಿ ಜೀವನ ಸಾಗಿಸಬೇಕೆಂಬ ಸಂದೇಶ ಸಾರುತ್ತಿದ್ದಾರೆ. ಅಬ್ದುಲ್ ನಬಿ ಅವರ ಗಣೇಶನ ಭಕ್ತಿಗೆ ಕುಟುಂಬಸ್ಥರು ಕೂಡ ಸಾಥ್ ನೀಡುತ್ತಿದ್ದಾರೆ. ಗಣೇಶ ಚತುರ್ಥಿ ದಿನದಂದು ಗಣೇಶ ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ನಿತ್ಯವೂ ಪೂಜೆ ಮಾಡುತ್ತಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on