ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್

ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್

ಮಂಜುನಾಥ ಸಿ.
|

Updated on: Jan 21, 2025 | 3:22 PM

Bigg Boss Kannada season 11: ಬಿಗ್​ಬಾಸ್ ಕನ್ನಡ 11 ಫಿನಾಲೆ ವಾರ ಚಾಲ್ತಿಯಲ್ಲಿದೆ. ಮನೆಯಲ್ಲಿರುವವರು ಫಿನಾಲೆ ಗೆಲ್ಲುವುದು ಹೇಗೆಂಬ ಲೆಕ್ಕಾಚಾರದಲ್ಲಿರುವಾಗಲೇ ಬಿಗ್​ಬಾಸ್ ಮನೆಗೆ ಝಾನ್ಸಿಯ ಎಂಟ್ರಿ ಆಗಿದೆ. ಝಾನ್ಸಿಯ ಆವಾಜ್​ಗೆ ಅಗ್ರೆಸ್ಸಿವ್ ಆಟಗಾರ ರಜತ್ ಬೆಕ್ಕಿನ ಮರಿಯಂತಾಗಿದ್ದಾರೆ. ಅಷ್ಟಕ್ಕೂ ಯಾರು ಈ ಝಾನ್ಸಿ?

ಬಿಗ್​ಬಾಸ್ ಮನೆಗೆ ಝಾನ್ಸಿ ಕಾಲಿಟ್ಟಿದ್ದಾಳೆ. ಫಿನಾಲೆ ವಾರದ ಲೆಕ್ಕಾಚಾರದಲ್ಲಿದ್ದ ಮನೆ ಮಂದಿಗೆ ಝಾನ್ಸಿಯ ಎಂಟ್ರಿ ಶಾಕ್ ನೀಡಿದೆ. ಈ ಝಾನ್ಸಿಗೆ ಗಂಡಸರ ನೆರಳು ಕಂಡರೆ ಆಗುವುದಿಲ್ಲ. ಗಂಡಸರನ್ನು ತುಳಿಯುವುದೇ ಝಾನ್ಸಿಯ ಹಾಬಿ. ತನ್ನ ಮುಂದೆ ಎಲ್ಲ ಗಂಡಸರು ತಲೆ ತಗ್ಗಿಸಿ ಮಾತನಾಡಬೇಕು ಎಂಬುದು ಝಾನ್ಸಿಯ ಆಗ್ರಹ. ಝಾನ್ಸಿ ಮುಂದೆ ಬಾಲ ಬಿಚ್ಚಲು ಪ್ರಯತ್ನಿಸಿದ ರಜತ್​ಗೆ ಸರಿಯಾಗಿ ಆವಾಜ್ ಹಾಕಿದ್ದಾಳೆ ಝಾನ್ಸಿ. ಮೂರು ಎಣಿಸುವುದರೊಳಗೆ ತಲೆ ತಗ್ಗಿಸಬೇಕು ಎಂದು ಝಾನ್ಸಿ ನೀಡಿದ ಆದೇಶವನ್ನು ಕೈಕಟ್ಟಿ ಪಾಲಿಸಿದ್ದಾರೆ ರಜತ್. ಅಷ್ಟಕ್ಕೂ ಈ ಝಾನ್ಸಿ ಯಾರು? ಇಲ್ಲಿದೆ ನೋಡಿ ಪ್ರೋಮೋ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ