ಒತ್ತುವರಿ ತೆರವು ಮಾಡಲು ಬಂದ ಜೆಸಿಬಿಗೆ ಬೆಂಕಿ ಹಚ್ಚಿದ ವ್ಯಕ್ತಿ; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 28, 2024 | 6:02 PM

ಒತ್ತುವರಿ ತೆರವು ಮಾಡಲು ಬಂದ ಜೆಸಿಬಿಗೆ ವ್ಯಕ್ತಿಯೋರ್ವ ಬೆಂಕಿ ಹಚ್ಚಿದ ಘಟನೆ ಯಲಹಂಕದ(Yalahanka) ಶಿವಕೋಟೆ ಬಳಿ ನಡೆದಿದೆ. ಒತ್ತುವರಿ ಸಂಬಂಧಿಸಿದಂತೆ ಯಲಹಂಕ ತಹಶೀಲ್ದಾರ್​ಗೆ ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನಲೆ ಒತ್ತುವರಿ ತೆರವು ಮಾಡಲು ತಹಶೀಲ್ದಾರ್ ಅಧಿಕಾರಿಗಳನ್ನು ಕಳುಹಿಸಿದ್ದರು.

ಬೆಂಗಳೂರು, ಫೆ.28: ಜಿಲ್ಲೆಯ ಯಲಹಂಕದ(Yalahanka) ಶಿವಕೋಟೆ ಬಳಿ ಒತ್ತುವರಿ ತೆರವು ಮಾಡಲು ಬಂದ ಜೆಸಿಬಿಗೆ ವ್ಯಕ್ತಿಯೋರ್ವ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಒತ್ತುವರಿ ಮಾಡಿದ ಆರೋಪ ಹಿನ್ನಲೆ ಒತ್ತುವರಿಯನ್ನು ತೆರವು ಮಾಡಲು ಯಲಹಂಕ ತಹಶೀಲ್ದಾರ್​ ಕಳುಹಿಸಿದ್ದರು. ಈ ವೇಳೆ ಅದೇ ಗ್ರಾಮದ ಬಚ್ಚೇಗೌಡ ಎಂಬಾತ ಜೆಸಿಬಿಗೆ ಬೆಂಕಿ ಹಚ್ಚಿದ್ದಾನೆ. ಒತ್ತುವರಿ ಸಂಬಂಧಿಸಿದಂತೆ ಯಲಹಂಕ ತಹಶೀಲ್ದಾರ್​ಗೆ ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನಲೆ ಒತ್ತುವರಿ ತೆರವು ಮಾಡಲು ತಹಶೀಲ್ದಾರ್ ಅಧಿಕಾರಿಗಳನ್ನು ಕಳುಹಿಸಿದ್ದರು. ಈ ವೇಳೆ ಗ್ರಾಮದ ಬಚ್ಚೇಗೌಡ ಹಾಗೂ ಪುತ್ರ ಚೇತನ್​ ಗಲಾಟೆ ಮಾಡಿದ್ದಾರೆ. ಅಲ್ಲದೇ ತೆರವು ವೇಳೆ ಬಾಟಲ್​ಗೆ ಪೆಟ್ರೋಲ್ ತುಂಬಿ ಜೆಸಿಬಿಗೆ ಬೆಂಕಿ ಹಾಕಿದ್ದಾರೆ.  ಜೆಸಿಬಿ ಚಾಲಕ ಹಾಗೂ ಕಂದಾಯ ಅಧಿಕಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಬಚ್ಚೇಗೌಡನನ್ನು ರಾಜಾನುಕುಂಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Feb 28, 2024 06:00 PM