ದೀಪಿಕಾ ದಾಸ್ ಬಗ್ಗೆ ಹೇಳಿದ್ದ ಮಾತು ಸಮರ್ಥಿಸಿಕೊಂಡ ಯಶ್ ತಾಯಿ ಪುಷ್ಪ
ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರು ಕೆಲವೇ ದಿನಗಳ ಹಿಂದೆ ದೀಪಿಕಾ ದಾಸ್ ಬಗ್ಗೆ ನೀಡಿದ ಒಂದು ಹೇಳಿಕೆ ಬಹಳ ಸುದ್ದಿ ಆಗಿತ್ತು. ವಿವಾದದ ಸ್ವರೂಪ ಪಡೆದುಕೊಂಡಿತ್ತು. ಆ ಬಗ್ಗೆ ದೀಪಿಕಾ ದಾಸ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಈಗ ಪುಷ್ಪ ಅವರು ಈ ಕುರಿತು ಎದುರಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ನಟ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arun Kumar) ಅವರು ಇತ್ತೀಚೆಗೆ ದೀಪಿಕಾ ದಾಸ್ ಬಗ್ಗೆ ನೀಡಿದ ಒಂದು ಹೇಳಿಕೆ ಸಾಕಷ್ಟು ಸುದ್ದಿ ಆಗಿತ್ತು. ಆ ಬಗ್ಗೆ ದೀಪಿಕಾ ದಾಸ್ (Deepika Das) ಕೂಡ ಪ್ರತಿಕ್ರಿಯೆ ನೀಡಿದ್ದರು. ಈಗ ಪುಷ್ಪ ಅವರು ಈ ಕುರಿತು ಎದುರಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ‘ನಮ್ಮ ಮನೆಯ ಹೆಣ್ಮಗಳ ಬಗ್ಗೆ ನಾವು ಮಾತನಾಡಿದ್ದೇವೆ ಎಂದರೆ ಅದು ನಮಗೆ ಗೊತ್ತಿರುತ್ತದೆ. ನಿಮಗೆ ಗೊತ್ತಿರುವುದಿಲ್ಲ. ಅದನ್ನು ನೀವು ಕೇಳಬಾರದು. ನಾನು ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ನಾನು ಯಾಕೆ ಆ ರೀತಿ ಹೇಳಿದೆ ಎಂಬುದು ಅವರಿಗೆ ಗೊತ್ತು. ನಿಮಗೆಲ್ಲ ಗೊತ್ತಾಗುವ ಅವಶ್ಯಕತೆ ಇಲ್ಲ. ಯಶ್ಗೂ ನಾನು ಹೇಳುತ್ತೇನೆ. ಅವನು ಯಾವ ದೊಡ್ಡ ಹೀರೋ ಅಂತ. ನಮ್ಮ ಮನೆಯ ಮಕ್ಕಳಿಗೆ ಹೇಳುತ್ತೇನೆ. ಅದರಲ್ಲಿ ಬೇರೆಯವರಿಗೆ ಏನು ಕಷ್ಟ? ಯಶ್ (Yash) ಜೊತೆಗೇ ನಾನು ಮಾತಾಡಿಲ್ಲ. ಇನ್ನು, ದೀಪಿಕಾ ಜೊತೆ ಮಾತಾಡಲು ನನಗೆ ಟೈಮ್ ಎಲ್ಲಿರುತ್ತದೆ? ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ’ ಎಂದಿದ್ದಾರೆ ಪುಷ್ಪ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
