ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ಕುಮಾರ್ ಅವರು ಬೆಂಗಳೂರಿನಲ್ಲಿ ಡಿಜಿಪಿ ಕಚೇರಿಗೆ ಭೇಟಿ ನೀಡಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಪೊಲೀಸರ ಹತ್ತಿರ ರಿಪೋರ್ಟ್ ತರಬೇಕಿತ್ತು. ಅಲ್ಲಿನ ಎಸ್ ಪಿ ಪ್ರತಿಕ್ರಿಯೆ ಮಾಡಿರಲಿಲ್ಲ. ನಿಧಾನ ಆಯ್ತು, ಅದಕ್ಕೆ ಡಿಜಿಪಿಯವರನ್ನ ಭೇಟಿಯಾಗಿದ್ದೇವೆ’ ಎಂದಿದ್ದಾರೆ.
ನಟ ಯಶ್ (Yash) ಅವರ ತಾಯಿ ಪುಷ್ಪಾ ಅರುಣ್ಕುಮಾರ್ ಅವರು ಬೆಂಗಳೂರಿನಲ್ಲಿ ಡಿಜಿಪಿ (DGP) ಕಚೇರಿಗೆ ಭೇಟಿ ನೀಡಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಹಾಸನ ಸೈಟ್ ವಿಚಾರವಾಗಿ ಭೇಟಿಯಾಗಿದ್ದೆ. ಕೋರ್ಟ್ನಲ್ಲಿ ಒಂದು ರಿಪೋರ್ಟ್ ಕೇಳಿದ್ದರು. ಪೊಲೀಸರ ಹತ್ತಿರ ರಿಪೋರ್ಟ್ ತರಬೇಕಿತ್ತು. ಅಲ್ಲಿನ ಎಸ್ ಪಿ ಸ್ಪಂದಿಸಿರಲಿಲ್ಲ. ನಿಧಾನ ಆಯ್ತು, ಅದಕ್ಕೆ ಡಿಜಿಪಿಯವರನ್ನ ಭೇಟಿಯಾಗಿದ್ದೇವೆ. ಇಲ್ಲಿಂದ ಎಸ್ಪಿಯವರಿಗೆ ರೆಫರ್ ಮಾಡಿದ್ದಾರೆ. ಅಲ್ಲಿನ ಅಧಿಕಾರಿ ಆ ಕೆಲಸ ಮಾಡಬೇಕಿತ್ತು. ಅವರು ಮಾಡಿಲ್ಲ. ನಾನು ಈಗ ಬೆಂಗಳೂರಿನಲ್ಲಿ ಇದ್ದೆ. ಹಾಗಾಗಿ ಡಿಜಿಪಿಯವರನ್ನ ಭೇಟಿ ಮಾಡಿ ಕೇಳಿದ್ದೇನೆ. ಈಗ ಹಾಸನ ಎಸ್ಪಿ ಅವರಿಗೆ ತಿಳಿಸಿದ್ದಾರೆ’ ಎಂದು ಡಿಜಿ ಕಚೇರಿಯಲ್ಲಿ ಯಶ್ ತಾಯಿ ಪುಷ್ಪಾ (Pushpa Arun Kumar) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
