ಮುಂದಿನ ಚುನಾವಣೆಯಲ್ಲಿ ನನ್ನ ಆಯ್ಕೆಯ ಬಗ್ಗೆ ಕಾಮೆಂಟ್ ಮಾಡಲು ಯತ್ನಾಳ್ ಯಾರು? ವಿಜಯಾನಂದ ಕಾಶಪ್ಪನವರ್
ಯತ್ನಾಳ್ ಮತ್ತು ಪೂಜ್ಯರು ಸೇರಿದಂತೆ ಸಮಾಜದ ಮುಖಂಡರನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಕರೆದೊಯ್ದಿದ್ದೇನೆ, ಅವರು 2ಎ ಮೀಸಲಾತಿ ನೀಡಲು ಇರುವ ತಾಂತ್ರಿಕ ಸಮಸ್ಯೆ ಮತ್ತು ಸುಪ್ರೀಂ ಕೋರ್ಟಲ್ಲಿರುವ ತಡೆಯಾಜ್ಞೆ ಬಗ್ಗೆ ಹೇಳಿದ್ದಾರೆ, ಯತ್ನಾಳ್ ತಡೆಯಾಜ್ಞೆ ತೆಗೆಸಲು ಯಾಕೆ ಪ್ರಯತ್ನಿಸುತ್ತಿಲ್ಲ ಎಂದು ಕಾಶಪ್ಪನವರ್ ಕೇಳಿದರು.
ಬಾಗಲಕೋಟೆ, ಜುಲೈ 24: ಹುನುಗಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ನಡುವೆ ಹೇಳಿಕೆಗಳ ಸಮರ ಮುಂದುವರಿದಿದೆ. ಯತ್ನಾಳ್ ತನ್ನ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಕಾಶಪ್ಪನವರ್ ಕೋಪಗೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ನನ್ನ ಬಗ್ಗೆ ಮಾತಾಡಲು ಯತ್ನಾಳ್ ಯಾರು? 2028 ಅಸೆಂಬ್ಲಿ ಚುನಾವಣೆಯಲ್ಲಿ ಜನ ನನ್ನ ಕೈ ಹಿಡಿಯುತ್ತಾರೋ ಬಿಡುತ್ತಾರೋ? ಅದು ಕ್ಷೇತ್ರದ ಜನ ಮತ್ತ ನನ್ನ ನಡುವಿನ ವಿಚಾರ ಎಂದು ಹೇಳಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಲಿಲ್ಲ? ಎಂದು ಕೇಳಿದ ಕಾಶಪ್ಪನವರ್, ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಧಾರ್ಮಿಕ ಮುಖಂಡರಾಗಿರುವುದರಿಂದ ಅವರ ಚಟುವಟಿಕೆಕಗಳು ಮಠಕ್ಕೆ ಮಾತ್ರ ಸೀಮಿತವಾಗಿರಲಿ ಎಂದರು.
ಇದನ್ನೂ ಓದಿ: ಕಾಶಪ್ಪನವರ್ ಅಂತ್ಯ ಸಮೀಪಿಸಿದೆ, ವಿಭೂತಿ ಹೆಸರಲ್ಲಿ ಆಯಿಲ್ ಪೇಂಟ್ ಹಚ್ಚಿಕೊಳ್ಳುವ ಅವನೆಂಥ ಲಿಂಗಾಯತ? ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್: ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಏನು?

ಕುತ್ತಿಗೆಗೆ ಗುಂಡೇಟು, ಪೆಟ್ರೋಲ್ ಬಂಕ್ಗೆ ಬಂದು ಸಹಾಯ ಕೇಳಿದ ಯುವಕ

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್ಗೆ 2 ಚೀಲ ಯೂರಿಯಾ

‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
