ಯಡಿಯೂರಪ್ಪರ ಪಿಎ ಆಗಿದ್ದ ಸಂತೋಷ್ ಕಾಂಗ್ರೆಸ್ ಶಾಸಕರಿಗೆ ರೂ.50 ಕೋಟಿ, ಮಂತ್ರಿಗಿರಿಯ ಆಮಿಶವೊಡ್ಡುತ್ತಿದ್ದಾನೆ: ರವಿ ಗಣಿಗ, ಶಾಸಕ

|

Updated on: Oct 27, 2023 | 11:53 AM

ಶಾಸಕರನ್ನು ವಿಮಾನಗಳಲ್ಲಿ ದೆಹಲಿಗೆ ಕಳಿಸುವ ಮತ್ತು ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಂತೋಷ್ ಆಡಿರುವ ಮಾತುಗಳ ಆಡಿಯೋ ಮತ್ತು ವಿಡಿಯೋ ಕ್ಲಿಪ್ಪಿಂಗ್ ಗಳು ತಮ್ಮಲ್ಲಿದ್ದು ಅವುಗಳನ್ನು ಸೂಕ್ತ ಸಮಯದಲ್ಲಿ ಬಹಿರಂಗ ಮಾಡಲಾಗುವುದು ಎಂದು ರವಿ ಹೇಳಿದರು.

ದಾವಣಗೆರೆ: ಹಿಂದೆ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಯಶ ಕಂಡಿದ್ದ ಬಿಜೆಪಿಯ ತಂಡಗಳು ಮತ್ತೊಮ್ಮೆ ಆಪರೇಶನ್ ಕಮಲಕ್ಕೆ ಮುಂದಾಗಿವೆ ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಗಣಿಗ (Ravi Ganiga) ಇಂದು ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರವಿ, ಹಿಂದೆ ಬಿಎಸ್ ಯಡಿಯೂರಪ್ಪನವರ (BS Yediyurappa) ಆಪ್ತ ಕಾರ್ಯದರ್ಶಿಯಾಗಿದ್ದ ಎನ್ ಆರ್ ಸಂತೋಷ್ (NR Santosh) ಒಂದು ತಂಡದ ನೇತೃತ್ವ ವಹಿಸಿ ಕಾಂಗ್ರೆಸ್ ಪಕ್ಷದ ನಾಲ್ವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ ಎಂದು ರವಿ ಹೇಳಿದರು. ಜೆಡಿಎಸ್ ಪಕ್ಷ ಸೇರಿ ವಿಧಾನ ಸಭಾ ಚುನಾವಣೆಯಲ್ಲಿ ಸೋತ್ರೂ ಇವನಿಗೆ ಬುದ್ಧಿ ಬಂದಿಲ್ಲ ಎಂದ ರವಿ, ಕಾಂಗ್ರೆಸ್ ಶಾಸಕರಿಗೆ ರೂ. 50 ಕೋಟಿ ಹಾಗೂ ಮಂತ್ರಿ ಸ್ಥಾನ ನೀಡುವ ಆಮಿಶವನ್ನು ಸಂತೋಷ್ ಒಡ್ಡಿದ್ದಾನೆ ಅಂತ ಹೇಳಿದರು. ಶಾಸಕರನ್ನು ವಿಮಾನಗಳಲ್ಲಿ ದೆಹಲಿಗೆ ಕಳಿಸುವ ಮತ್ತು ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಂತೋಷ್ ಆಡಿರುವ ಮಾತುಗಳ ಆಡಿಯೋ ಮತ್ತು ವಿಡಿಯೋ ಕ್ಲಿಪ್ಪಿಂಗ್ ಗಳು ತಮ್ಮಲ್ಲಿದ್ದು ಅವುಗಳನ್ನು ಸೂಕ್ತ ಸಮಯದಲ್ಲಿ ಬಹಿರಂಗ ಮಾಡಲಾಗುವುದು ಎಂದು ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ