ರೈತರ ಸಾಲ ಮಾಡುವಂತೆ ಹೇಳುವ ನೈತಿಕತೆ ಯಡಿಯೂರಪ್ಪನವರಿಗೆ ಇಲ್ಲ: ಸಿದ್ದರಾಮಯ್ಯ

|

Updated on: May 11, 2024 | 2:29 PM

ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮಾಡುವ ಪ್ರಸ್ತಾಪಕ್ಕೆ ಅವರು ಸರ್ಕಾರದ ಬಳಿ ನೋಟು ಮುದ್ರಿಸುವ ಮಶೀನ್ ಇದೆಯಾ? ಅಂತ ಹೇಳಿದ್ದರು. ಈಗ ಅದ್ಯಾವ ನೈತಿಕತೆಯೊಂದಿಗೆ ಅವರು ರೈತರ ಸಾಲಮಾಡಿ ಅನ್ನುತ್ತಾರೆ ಎಂದು ಸಿದ್ದರಾಮಯ್ಯ ಕೇಳಿದರು.

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ನಡುವೆ ಅಗಾಗ ಜುಗಲ್ ಬಂದಿ ನಡೆಯುತ್ತಿರುತ್ತದೆ. ಅವರು ಹೇಳಿದ್ದಕ್ಕೆ ಇವರು ತಿರುಗೇಟು ನೀಡುತ್ತಾರೆ ಇವರು ಹೇಳಿದ್ದನ್ನು ಅವರು ಟೀಕೆ ಮಾಡುತ್ತಾರೆ. ಈ ಸಂಪ್ರದಾಯ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಮೊನ್ನೆ ನಿಧನರಾದ ವಿ ಶ್ರೀನಿವಾಸ್ ಪ್ರಸಾದ್ (V Srinivas Prasad) ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಲು ಮುಂದಾಗಬೇಕು ಅಂತ ಯಡಿಯೂರಪ್ಪ ಹೇಳಿರುವುದಕ್ಕೆ ತೀಕ್ಷ್ನ ಪ್ರತಿಕ್ರಿಯೆ ನೀಡಿದರು. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮಾಡುವ ಪ್ರಸ್ತಾಪಕ್ಕೆ ಅವರು ಸರ್ಕಾರದ ಬಳಿ ನೋಟು ಮುದ್ರಿಸುವ ಮಶೀನ್ ಇದೆಯಾ? ಅಂತ ಹೇಳಿದ್ದರು. ಈಗ ಅದ್ಯಾವ ನೈತಿಕತೆಯೊಂದಿಗೆ ಅವರು ರೈತರ ಸಾಲಮಾಡಿ ಅನ್ನುತ್ತಾರೆ ಎಂದು ಸಿದ್ದರಾಮಯ್ಯ ಕೇಳಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ರೈತರ ಸಾಲಮನ್ನಾ ಮಾಡಲಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Prajwal Revanna Case: ಪ್ರಕರಣದ ಸ್ಟೇಟಸ್ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಚರ್ಚೆ