ಫೋಟೋ ಬೇಕೆಂದಾದರೆ ಹತ್ತಿರ ನಿಂತ್ಕೊಳ್ಳಮ್ಮ ಅನ್ನುತ್ತಾ ಯುವತಿಯನ್ನು ಸಮೀಪಕ್ಕೆ ಎಳೆದುಕೊಂಡರು ಯಡಿಯೂರಪ್ಪ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 03, 2022 | 5:25 PM

ಅವರು ಮಂಗಳವಾರ ಬೆಂಗಳೂರಲ್ಲಿ ಬಸವ ಜಯಂತಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಒಬ್ಬ ಸುಂದರ ಯುವತಿ ಬಿ ಎಸ್ ವೈ ಅವರಿಂದ ಗಾವುದ ದೂರ ನಿಂತು ಫೋಟೋ ತೆಗೆಸಿಕೊಳ್ಳಲು ಅಣಿಯಾಗುತ್ತಿದ್ದಾಗ ಮಾಜಿ ಮುಖ್ಯಮಂತ್ರಿಗಳು ಯುವತಿಯ ಕೈ ಹಿಡಿದು ಹತ್ತಿರಕ್ಕೆ ಎಳೆದುಕೊಳ್ಳುತ್ತಾರೆ!

Bengaluru: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ (BS Yediyurappa) ಈಗ 79 ರ ಇಳಿಪ್ರಾಯ ಮಾರಾಯ್ರೇ. ಆದರೆ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಬಿರುಸಿನಿಂದ ಓಡಾಡುವ ಅವರಿಗೆ ಅಷ್ಟು ವಯಸ್ಸಾಗಿದೆ ಅಂತ ಅನಿಸುವುದೇ ಇಲ್ಲ. ಮುಖ್ಯಮಂತ್ರಿ ಸ್ಥಾನವನ್ನು ಅವಧಿಗೆ ಮೊದಲೇ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ವಯಸ್ಸಿನ ಕಾರಣಕ್ಕೆ ಬಿಟ್ಟುಕೊಡಬೇಕಾಗಿ ಬಂದಿತ್ತು. ಬಿಜೆಪಿಯಲ್ಲಿ (BJP) 75 ವರ್ಷಕ್ಕಿಂತ ಹೆಚ್ಚು ವಯಸ್ಸಿನ ನಾಯಕರನ್ನು ಮಂತ್ರಿ, ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿ ಪರಿಗಣಿಸಲಾಗದು. ಈ ಮಾನದಂಡದ ಹಿನ್ನೆಲೆಯಲ್ಲಿ ಅಂದರೆ ವಯಸ್ಸಿನ ಆಧಾರದಲ್ಲಿ ಅವರು 2019 ರಲ್ಲಿ ಮುಖ್ಯಮಂತ್ರಿಯಾಗಲು ಅರ್ಹರಾಗಿರಲಿಲ್ಲ. ಅದರೆ, ಹೆಚ್ ಡಿ ಕುಮಾರಸ್ವಾಮಿಯ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪ ನಿರ್ಣಾಯಕ ಪಾತ್ರ ವಹಿಸಿದ್ದರು.

ಹಾಗಾಗಿ, ಅವರಿಗೆ ಎರಡು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲು ಪಕ್ಷದ ಹೈಕಮಾಂಡ್ ಹಸಿರು ನಿಶಾನೆ ತೋರಿತ್ತು.

ಯಡಿಯೂರಪ್ಪನವರ ವಯಸ್ಸಿನ ಬಗ್ಗೆ ಮಾತಾಡುವುದಕ್ಕೆ ಕಾರಣವಿದೆ ಮಾರಾಯ್ರೇ.ಅವರು ಮಂಗಳವಾರ ಬೆಂಗಳೂರಲ್ಲಿ ಬಸವ ಜಯಂತಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಒಬ್ಬ ಸುಂದರ ಯುವತಿ ಬಿ ಎಸ್ ವೈ ಅವರಿಂದ ಗಾವುದ ದೂರ ನಿಂತು ಫೋಟೋ ತೆಗೆಸಿಕೊಳ್ಳಲು ಅಣಿಯಾಗುತ್ತಿದ್ದಾಗ ಮಾಜಿ ಮುಖ್ಯಮಂತ್ರಿಗಳು ಯುವತಿಯ ಕೈ ಹಿಡಿದು ಹತ್ತಿರಕ್ಕೆ ಎಳೆದುಕೊಳ್ಳುತ್ತಾರೆ!

ಒಬ್ಬ ಯುವಕ ಪ್ರಾಯಶಃ ಯುವತಿಯ ಪತಿ ಅನಿಸುತ್ತೆ, ಅವರು ಫೋಟೋ ಕ್ಲಿಕ್ಕಿಸುತ್ತಾರೆ ಮತ್ತು ಅಮೇಲೆ ತಾವೂ ಸಹ ಅವರು ಜೊತೆ ನಿಂತುಕೊಂಡು ಫೋಟೋ ತೆಗೆಸಿಕೊಳ್ಳುತ್ತಾರೆ.

ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೂ ಪೋಟೋ ತೆಗೆಸಿಕೊಳ್ಳಲು ಮಹಿಳೆಯರು ಹಾತೊರೆಯುತ್ತಾರೆ. ಯಾವುದೋ ಊರಲ್ಲಿ ಒಬ್ಬ ಮಹಿಳೆ ಸಿದ್ದರಾಮಯ್ಯನವರ ಕೆನ್ನೆಗೆ ಮುತ್ತಿಟ್ಟಿದ್ದರು, ಆ ವಿಡಿಯೋ ನಿಮಗೆ ನೆನಪಿರಬಹುದು.

ಹಿರಿಯ ನಾಯಕರು ಅದು ಯಡಿಯೂರಪ್ಪನವರಾಗಲೀ ಅಥವಾ ಸಿದ್ದರಾಮಯ್ಯ-ಅವರ ಮೇಲಿನ ಪ್ರೀತಿ ಮತ್ತು ಅಭಿಮಾನಕ್ಕೆ ಮಹಿಳೆಯರು ಹಾಗೆ ಮಾಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು.

ಇದನ್ನೂ ಓದಿ:   2-3 ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಿಶ್ಚಿತ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ