AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2-3 ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಿಶ್ಚಿತ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ

2-3 ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಿಶ್ಚಿತ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ. ಈ ನಿರ್ಧಾರ ತೆಗೆದುಕೊಂಡೇ ಬಂದಿದ್ದಾರೆ ಅನಿಸುತ್ತಿದೆ. ಅಥವಾ ದೆಹಲಿಗೆ ವಾಪಸ್ ಹೋಗಿ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ ಎಂದರು.

2-3 ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಿಶ್ಚಿತ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ
ಬಿ ಎಸ್ ಯಡಿಯೂರಪ್ಪ
TV9 Web
| Updated By: sandhya thejappa|

Updated on:May 03, 2022 | 4:11 PM

Share

ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟದ ಬಗ್ಗೆ ಚರ್ಚೆಗಳು ಶುರುವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕೂಡಾ ಆಗಾಗ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬರುತ್ತಿದ್ದಾರೆ. ಇಂದು ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಸಚಿವ ಸಂಪುಟದ ಬಗ್ಗೆ ಪ್ರತಿಕ್ರಿಯೆ ನೀಡಿ ಕೆಲ ಮಾಹಿತಿಗಳನ್ನ ನೀಡಿದ್ದಾರೆ. 2-3 ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಿಶ್ಚಿತ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ. ಈ ನಿರ್ಧಾರ ತೆಗೆದುಕೊಂಡೇ ಬಂದಿದ್ದಾರೆ ಅನಿಸುತ್ತಿದೆ. ಅಥವಾ ದೆಹಲಿಗೆ ವಾಪಸ್ ಹೋಗಿ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ. ಆದಷ್ಟು ಬೇಗ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದೊಡ್ಡೇರಿ ಸಮಾಧಾನ ಮಠದ ಸಮಾರಂಭಕ್ಕೆ ಬಿಎಸ್​ವೈ ಇಂದು ಭೇಟಿ ನೀಡಿದ್ದರು. ಬಸವ ಜಯಂತಿ ಹಾಗೂ ಅಡಿಗಲ್ಲು ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಿಎಸ್​ವೈ ಜೊತೆ ವಿಜಯೇಂದ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ನಂತರ ಮಠದ ಮೌನತಪಸ್ವಿ ಶ್ರೀ ಜಡೆಯ ಶಾಂತಲಿಂಗ ಮಹಾ ಸ್ವಾಮೀಜಿಗಳಿಂದ ಆರ್ಶಿವಾದ ಪಡೆದು ನಿರ್ಗಮಿಸಿದರು.

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಇಲ್ಲ, ಎಲ್ಲವೂ ಊಹಾಪೋಹ ಅಷ್ಟೇ ಎಂದು ಹೇಳಿಕೆ ನೀಡಿದ ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಾರಿಗೆ ರೇಸ್ ಕೋರ್ಸ್ ನಿವಾಸಕ್ಕೆ ಆಗಮಿಸಿದ್ದರು.

ಬಿಜೆಪಿ ವರಿಷ್ಠರ ಎರಡು ಪ್ಲ್ಯಾನ್: ವಿದೇಶ ಪ್ರವಾಸದಿಂದ ಪ್ರಧಾನಿ ನರೇಂದ್ರ ಮೋದಿ ವಾಪಸಾದ ಬಳಿಕ ಸಂಪುಟ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಮೇ 5ರ ರಾತ್ರಿ ಪ್ರಧಾನಿ ವಿದೇಶದಿಂದ ವಾಪಸಾಗುತ್ತಾರೆ. ಮೇ 6ರ ಬಳಿಕ‌ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ, ಬಿಎಲ್​ ಸಂತೋಷ್ ಜೊತೆ ಚರ್ಚೆ ನಡೆಸುತ್ತಾರೆ. ಸದ್ಯಕ್ಕೆ ಬಿಜೆಪಿ ವರಿಷ್ಠರು 2 ಪ್ಲ್ಯಾನ್​ ಇಟ್ಟುಕೊಂಡಿದ್ದಾರೆ. ಒಂದು ಸಿಎಂ ಬದಲಾವಣೆ ಸಹಿತ ಸಂಪುಟ ಪುನಾರಚನೆ, ಇನ್ನೊಂದು ಸಿಎಂ ಬದಲಾಯಿಸದೇ ಸಂಪುಟ ಪುನಾರಚನೆ ಮಾಡುವ ಬಗ್ಗೆ ಚರ್ಚಿಸುತ್ತಾರೆ.

ಅಮಿತ್ ಶಾ ಭೇಟಿ ಮಾಡದೇ ವಾಪಸ್ ತೆರಳಿದ ಈಶ್ವರಪ್ಪ: ಅಮಿತ್ ಶಾ ಭೇಟಿಗಾಗಿಯೇ ಶಿವಮೊಗ್ಗದಿಂದ ಆಗಮಿಸಿದ್ದ ಮಾಜಿ ಸಚಿವ ಈಶ್ವರಪ್ಪ ಭೇಟಿಯಾಗದೇ ವಾಪಸ್ ಆಗಿದ್ದಾರೆ. ಈಶ್ವರಪ್ಪ ಅಮಿತ್ ಶಾ ಕಚೇರಿ ಸೂಚನೆ ಮೇರೆಗೆ ಬಂದಿದ್ದರು. ಆದರೆ ಭೋಜನ ಕೂಟದಲ್ಲಿ ಭಾಗಿಯಾಗದೆ ವಾಪಸ್ ತೆರಳಿದ್ದಾರೆ.

ಕೇವಲ ಊಹಾಪೋಹ ಅಷ್ಟೇ; ಬಿವೈ ವಿಜಯೇಂದ್ರ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ ಅಷ್ಟೇ ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಸಂಪುಟ ವಿಸ್ತರಣೆಗಾಗಿ ಬಹಳಷ್ಟು ಶಾಸಕರು ನಿರೀಕ್ಷೆಯಲ್ಲಿದ್ದಾರೆ. ದೆಹಲಿಯಲ್ಲೂ ಸಿಎಂ ಬೊಮ್ಮಾಯಿ ಹಲವು ಬಾರಿ ಚರ್ಚಿಸಿದ್ದಾರೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗುತ್ತೆ ಅನ್ನೋ ಭರವಸೆ‌ ಇದೆ. ಸಚಿವ ಸ್ಥಾನದ ಆಸೆ ಇಟ್ಟುಕೊಂಡು ನಾನು ಕೆಲಸ ಮಾಡುತ್ತಿಲ್ಲ. ಭರವಸೆಯಿಟ್ಟು ನನಗೆ ಬಿಜೆಪಿ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಆ ವಿಶ್ವಾಸದಲ್ಲೇ ನಾನು ಕೆಲಸ ಮಾಡ್ತಿದ್ದೇನೆ‌ ಎಂದಿದ್ದಾರೆ.

ಸಿಎಂ ಬದಲಾವಣೆ ವಿಚಾರ ಅಪ್ರಸ್ತುತ- ನಳಿನ್ ಕುಮಾರ್​ ಕಟೀಲು: ಇನ್ನು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್​ ಕಟೀಲು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಿಎಂ ಬದಲಾವಣೆಯಿಲ್ಲ ಎಂದಿದ್ದಾರೆ. ಯಾರಾದ್ರೂ ಸಿಎಂ ಬದಲಾವಣೆ ಭ್ರಮೆಯಲ್ಲಿ ಇದ್ದರೆ ತೆಗೆದುಬಿಡಿ. ನಿಮ್ಮ ತಲೆಯಿಂದ ಸಿಎಂ ಬದಲಾವಣೆ ವಿಚಾರವನ್ನು ತೆಗೆದುಬಿಡಿ. ಈಗಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಚುನಾವಣೆಗೆ ಹೋಗುತ್ತೇವೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ನಮ್ಮ ಗುರಿ. ಸಿಎಂ ಬದಲಾವಣೆ ವಿಚಾರ ಅಪ್ರಸ್ತುತ. ರಾಜ್ಯ ಬಿಜೆಪಿ ಘಟಕದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದರು.

ಇದನ್ನೂ ಓದಿ

ಸೋಲಾರ್ ಹಗರಣದ ಆರೋಪಿಯ ಲೈಂಗಿಕ ಕಿರುಕುಳ ಪ್ರಕರಣ: ಕೇರಳ ಸಿಎಂ ನಿವಾಸದಲ್ಲಿ ಸಿಬಿಐ ಪರಿಶೀಲನೆ

Puneeth Rajkumar: ಪುನೀತ್​ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ; ಸಮಾರಂಭದಲ್ಲಿ ಗದ್ಗದಿತರಾದ ಅಶ್ವಿನಿ

Published On - 1:51 pm, Tue, 3 May 22