ಇಪ್ಲೂಟೋ 7ಜಿ ಇಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಇವೆ ಹಲವು ಕಾರಣಗಳು; ಇದನ್ನೊಮ್ಮೆ ಓದಿ
ಇಪ್ಲೂಟೋ 7ಜಿ ಸ್ಕೂಟರನ್ನು ಖರೀದಿಸಿದರೆ, ನಿಮ್ಮ ಸಂಗಾತಿಯೊಂದಿಗೆ ದೂರದ ಪ್ರಯಾಣವನ್ನು ಸಹ ನಿರಾತಂಕವಾಗಿ, ವಾಯು-ಮಾಲಿನ್ಯದ ಸಮಸ್ಯೆಯಿಲ್ಲದೆ ಕ್ರಮಿಸಬಹುದು ಅಂತ ಪ್ಯೂರ್ ಕಂಪನಿಯು ಹೇಳುತ್ತಿದೆ.
ಹೈದರಾಬಾದ್ ನ ಐಐಟಿಯಲ್ಲಿ ತಯಾರಾಗುವ ಪ್ಯೂರ್ ಇಪ್ಲೂಟೋ 7ಜಿ ಪ್ರೀಮಿಯಮ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಿ. ಕಡಿಮೆ ಸಮಯದಲ್ಲಿ ಜಾಸ್ತಿ ಜನಪ್ರಿಯತೆ ಗಳಿಸಿರುವ ಇಲೆಕ್ಟ್ರಿಕ್ ಸ್ಕೂಟರ್ ಇದು. ನೋಡಲು ಇಪ್ಲೂಟೋ 7ಜಿ ನಿಸ್ಸಂದೇಹವಾಗಿ ಅತ್ಯಾಕರ್ಷಕವಾಗಿದೆ. ನೋಡಿದಾಕ್ಷಣ ಅದರ ಸೌಂದರ್ಯಕ್ಕೆ ಮಾರುಹೋಗುತ್ತೀರಿ ಅಂತ ಕಂಪನಿ ಕ್ಲೇಮ್ ಮಾಡುತ್ತಿರುವುದರಲ್ಲಿ ಅತಿಶಯೋಕ್ತಿ ಇಲ್ಲ ಅನಿಸುತ್ತದೆ. ಹಾಗೆಯೇ ಇಪ್ಲೂಟೋ 7ಜಿ ಸ್ಕೂಟರ್ ರೈಡ್ ಬಹಳ ಆರಾಮದಾಯಕ ಮತ್ತು ಆಹ್ಲಾದಕರ ಅಂತಲೂ ಕಂಪನಿ ಹೇಳುತ್ತದೆ.
ಇಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಖರೀದಿಸುವ ಮೊದಲು ನಾವು ಅದರ ಬೆಲೆ, ಮೈಲೇಜ್ ಮತ್ತು ಬ್ಯಾಟರಿ ಲೈಫ್ ಮೊದಲಾದವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇಪ್ಲೂಟೋ 7ಜಿ ಸ್ಕೂಟರನ್ನು ಖರೀದಿಸಿದರೆ, ನಿಮ್ಮ ಸಂಗಾತಿಯೊಂದಿಗೆ ದೂರದ ಪ್ರಯಾಣವನ್ನು ಸಹ ನಿರಾತಂಕವಾಗಿ, ವಾಯು-ಮಾಲಿನ್ಯದ ಸಮಸ್ಯೆಯಿಲ್ಲದೆ ಕ್ರಮಿಸಬಹುದು ಅಂತ ಪ್ಯೂರ್ ಕಂಪನಿಯು ಹೇಳುತ್ತಿದೆ.
ಗಾಡಿಯ ಅತಿದೊಡ್ಡ ಪ್ಲಸ್ ಪಾಯಿಂಟ್ ಎಂದರೆ, ಇದು ಅಪ್ಟಟ ಸ್ವದೇಶಿ ತಯಾರಿಕೆ-ಮೇಕ್ ಇನ್ ಇಂಡಿಯಾ.
ಇಪ್ಲೂಟೋ 7ಜಿ ಸ್ಕೂಟರ್ 4 ಬಣ್ಣಗಳಲ್ಲಿ ಲಭ್ಯವಿದೆ-ಕೆಂಪು, ಹಳದಿ, ನೀಲಿ ಮತ್ತು ಬಿಳಿ. ನಾವು ಆಗಲೇ ಹೇಳಿದ ಹಾಗೆ ಸ್ಕೂಟರ್ ಈಗಾಗಲೇ ಮಾರ್ಕೆಟ್ನಲ್ಲಿ ಲಭ್ಯವಿದೆ. ದೆಹಲಿಯಲ್ಲಿ ಇದರ ಎಕ್ಸ್ ಶೋರೂಮ್ ಬೆಲೆ ರೂ. 83,701. ಆದರೆ ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಹಲವಾರು ರಾಜ್ಯಗಳು ಈ ಸ್ಕೂಟರ್ಗೆ ಸಬ್ಸಿಡಿ ನೀಡುತ್ತಿವೆ.
ಇಪ್ಲೂಟೋ 7ಜಿ ಸ್ಕೂಟರನ್ನು ಒಮ್ಮೆ 4 ಗಂಟೆಗಳ ಅವಧಿಗೆ ಚಾರ್ಜ್ ಮಾಡಿದರೆ, ಸುಮಾರು 100 ಕಿಮೀಗಳಷ್ಟು ಅಂತರವನ್ನು ಕ್ರಮಿಸಬಹುದು. ಗಾಡಿಯ ಗರಿಷ್ಠ ಸ್ಪೀಡ್ 60 ಕಿಮೀ/ಗಂಟೆ ಆಗಿದೆ.