ಕೇವಲ 14 ನೇ ತಿಂಗಳಲ್ಲೇ ಸಿಂಹದಂತೆ ಘರ್ಜಿಸಲಾರಂಭಿಸಿದ ಚಿರಂಜೀವಿ-ಮೇಘನಾ ಸರ್ಜಾ ಪುತ್ರ ರಾಯನ್ ಸರ್ಜಾ!

31-ವರ್ಷ ವಯಸ್ಸಿನ ಮೇಘನಾ ಈಗ ಸಾರ್ವಜನಿಕವಾಗಿ ಹೆಚ್ಚು ಕಾಣಿಸುತ್ತಿಲ್ಲ. ತಮ್ಮ ಇಡೀ ಸಮಯವನ್ನು ಅವರು ಮಗನ ಲಾಲನೆ ಪೋಷಣೆಗೆ ಮೀಸಲಿಟ್ಟಿದ್ದಾರೆ.

TV9kannada Web Team

| Edited By: Arun Belly

Dec 16, 2021 | 11:51 PM

ಕನ್ನಡ ನಟ ಚಿರಂಜೀವಿ ಸರ್ಜಾ ದಿವಂಗತರಾಗಿ ಒಂದೂವರೆ ವರ್ಷವಾಯಿತು. ಅವರು ನಿಧನರಾದಾಗ ಗರ್ಭಿಣಿಯಾಗಿದ್ದ ಪತ್ನಿ ಮೇಘನಾ ರಾಜ್ ನಾಲ್ಕು ತಿಂಗಳ ನಂತರ ಗಂಡುಮಗುವಿಗೆ ಜನ್ಮ ನೀಡಿದರು. 14 ತಿಂಗಳ ಮಗು ರಾಯನ್ ರಾಜ್ ಆಗಲೇ ಘರ್ಜಿಸಲಾರಂಭಿಸಿದ್ದಾನೆ ಮಾರಾಯ್ರೇ. ಈ ವಿಡಿಯೋ ನೋಡಿ ನಿಮಗೇ ಗೊತ್ತಾಗುತ್ತದೆ. ಸಿಂಹ ಹೇಗೆ ಘರ್ಜಿಸುತ್ತದೆ ಅಂತ ಅವರಮ್ಮ ಕೇಳಿದಾಗ ಅವನು ಘರ್ಜಿಸಿ ತೋರಿಸುತ್ತಾನೆ. ಅದು ಹಾಗಲ್ಲ ಮಗಾ ಅಂತ ಅವರು ಹೇಳಿದಾಗ ಘರ್ಜನೆಯ ಸ್ವರೂಪವನ್ನು ಬದಲಾಯಿಸುತ್ತಾನೆ. ಅದು ಬೆಕ್ಕಿನ ಥರ ಆಯ್ತು ಅಂತ ಮೇಘನಾ ಅವರ ಹೇಳಿದಾಗ ನಕ್ಕಂತೆ ಮಾಡುತ್ತಾನೆ. ತಾಯಿ ಮತ್ತು ಮಗನ ಈ ವಿಡಿಯೋ ಬಹಳ ಅಪ್ಯಾಯಮಾನವಾಗಿದೆ.

31-ವರ್ಷ ವಯಸ್ಸಿನ ಮೇಘನಾ ಈಗ ಸಾರ್ವಜನಿಕವಾಗಿ ಹೆಚ್ಚು ಕಾಣಿಸುತ್ತಿಲ್ಲ. ತಮ್ಮ ಇಡೀ ಸಮಯವನ್ನು ಅವರು ಮಗನ ಲಾಲನೆ ಪೋಷಣೆಗೆ ಮೀಸಲಿಟ್ಟಿದ್ದಾರೆ. ನಿಮಗೆ ಗೊತ್ತಿರಬಹುದು, ಅವರು ಸುಮಾರು 45 ಚಿತ್ರಗಳಲ್ಲಿ ನಟಿಸಿದ್ದಾರೆ. ಮದುವೆಗೆ ಮೊದಲು ಅವರು ದಕ್ಷಿಣ ಭಾರತದ ಜನಪ್ರಿಯ ನಾಯಕಿ ನಟಿಯರಲ್ಲಿ ಒಬ್ಬರಾಗಿದ್ದರು. ಹಾಗೆ ನೋಡಿದರೆ ಅವರು ಕನ್ನಡಕ್ಕಿಂತ ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಕ್ಷೇತ್ರಕ್ಕೆ ವಾಪಸ್ಸಾಗುವ ಇಚ್ಛೆ ಅವರಿಗೆ ಇಲ್ಲವೆನಿಸುತ್ತದೆ. ಆಗಲೇ ಹೇಳಿದಂತೆ ತಮ್ಮೆಲ್ಲ ಸಮಯವನ್ನು ಅವರು ರಾಯನ್ ಗೆ ಕೊಡುತ್ತಿರುವುರಿಂದ ಅದರ ಬಗ್ಗೆ ಯೋಚಿಸಿರಲಾರರು. ಆದರೆ ಅವನು ಶಾಲೆಗೆ ಹೋಗಲಾರಂಭಿಸಿದ ನಂತರ, ಚಿತ್ರ ನಿರ್ಮಾಣ, ನಿರ್ದೇಶನ ಮೊದಲಾದವುಗಳನ್ನು ಪ್ರಯತ್ನಿಸಬಹುದು. ಅವರು ಯಾವುದೇ ಕೆಲಸ ಆರಿಸಿಕೊಂಡರೂ ಕನ್ನಡಿಗರು ಬೆಂಬಲ ನೀಡುತ್ತಾರೆ.

ಇದನ್ನೂ ಓದಿ:   ಫೇಸ್‌ಬುಕ್‌ನಲ್ಲಿ ಯುವತಿ ಬಗ್ಗೆ ಮಹಿಳೆಯಿಂದ ಅವಹೇಳನ ವಿಡಿಯೋ; ಯುವತಿ ಆತ್ಮಹತ್ಯೆ ಯತ್ನ, ಸಾಕ್ಷ್ಯ ನೀಡುವಂತೆ ನೋಟಿಸ್ ಜಾರಿ

Follow us on

Click on your DTH Provider to Add TV9 Kannada