ರವೀಂದ್ರ ಕಲಾಕ್ಷೇತ್ರ ಮುಂದಿನ ರಸ್ತೆಗೆ ಬರಬೇಡಿ, ವ್ಯಕ್ತಿಯೊಬ್ಬ ಅನಾಮತ್ತಾಗಿ ಮುಳುಗಿ ಹೋಗುವಷ್ಟು ಆಳದ ಸಿಂಕ್​ಹೋಲ್ ಸೃಷ್ಟಿಯಾಗಿದೆ!

ಈ ಜಾಗ ಬಿ ಬಿ ಎಮ್ ಪಿ ಕೇಂದ್ರ ಕಚೇರಿಯಿಂದ 100 ಮೀಟರ್​ಗಳಿಗಿಂತಲೂ ಕಡಿಮೆ ದೂರದಲ್ಲಿದೆ. ಸಂಚಾರಿ ವಿಭಾಗದ ಪೊಲೀಸರು ಎಂದಿನಂತೆ ಈ ರಸ್ತೆಯಲ್ಲಿ ಓಡಾಡುವ ಜನರ ನೆರವಿಗೆ ಧಾವಿಸಿ ಸಿಂಕ್​ಹೋಲ್ ಸುತ್ತ ಬ್ಯಾರಿಕೇಡ್​ಗಳನ್ನು ಇಟ್ಟಿದ್ದಾರೆ.

TV9kannada Web Team

| Edited By: Apurva Kumar Balegere

Jan 08, 2022 | 5:12 PM

ಯಾರೇನೇ ಹೇಳಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ ಬಿ ಎಮ್ ಪಿ) ದಿನೇದಿನೆ ಅಧ್ವಾನಗೊಳ್ಳುತ್ತಿರೋದು ಮಾತ್ರ ಸತ್ಯ. ಯಾಕೆ ನಾವು ಹೀಗೆ ಹೇಳುತ್ತಿದ್ದೇವೆ ಅಂತ ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಬಿ ಬಿ ಎಮ್ ಪಿ ಬಡ್ತಿ ಪಡೆದುಕೊಂಡಿರುವಂತೆ ನಿಮಗೆ ಅನಿಸುತ್ತಿಲ್ಲವೇ? ನಮಗೆ ರಸ್ತೆಯಲ್ಲಿ ಗುಂಡಿಗಳನ್ನು ನೋಡಿ ಅಭ್ಯಾಸವಾಗಿದೆ. ಹಾಗಾಗಿ ಫಾರ್ ಎ ಚೇಂಜ್ ರಸ್ತೆಗಳಲ್ಲಿ ನಮಗೆ ಇನ್ನುಮುಂದೆ ಬತ್ತುಕುಳಿ (sinkhole) ಕಾಣಿಸಲಿವೆ. ನಮಗೆ ಅವುಗಳ ದರ್ಶನ ಮಾಡಿಸುವ ಪ್ರಕ್ರಿಯೆಗೆ ಬಿ ಬಿ ಎಮ್ ಪಿ ಚಾಲನೆ ನೀಡಿದೆ. ಅದರ ಮೊದಲ ಭಾಗವಾಗಿ ನಗರದ ಪ್ರಮುಖ ರಸ್ತೆಯನ್ನೇ ಆರಿಸಿಕೊಳ್ಳಲಾಗಿದೆ. ರವೀಂದ ಕಲಾಕ್ಷೇತ್ರ ಮತ್ತು ಟೌನ್ಹಾಲ್ ನಡುವಿನ ರಸ್ತೆ ಎಲ್ಲರಿಗೂ ಚಿರಪರಿಚಿತ. ಆದೇ ರಸ್ತೆಯಲ್ಲಿ ಈ ಪಾಟಿ ಸಿಂಕ್ಹೋಲ್ ನಿರ್ಮಾಣವಾಗಿದೆ.

ಈ ಜಾಗ ಬಿ ಬಿ ಎಮ್ ಪಿ ಕೇಂದ್ರ ಕಚೇರಿಯಿಂದ 100 ಮೀಟರ್​ಗಳಿಗಿಂತಲೂ ಕಡಿಮೆ ದೂರದಲ್ಲಿದೆ. ಸಂಚಾರಿ ವಿಭಾಗದ ಪೊಲೀಸರು ಎಂದಿನಂತೆ ಈ ರಸ್ತೆಯಲ್ಲಿ ಓಡಾಡುವ ಜನರ ನೆರವಿಗೆ ಧಾವಿಸಿ ಸಿಂಕ್​ಹೋಲ್ ಸುತ್ತ ಬ್ಯಾರಿಕೇಡ್​ಗಳನ್ನು ಇಟ್ಟಿದ್ದಾರೆ. ಆಗಲೇ ಹೇಳಿದಂತೆ ಇದು ನಗರದ ಪ್ರಮುಖ ರಸ್ತೆಗಳಲ್ಲಿ ಒಂದು. ಅದರ ದಪ್ಪ ಎಷ್ಟಿದೆ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ. ಸರಿಯಾಗಿ ಅರ್ಧ ಅಡಿಯೂ ಇರಲಾರದು ಅನಿಸುತ್ತದೆ.

ಮೆಟ್ರೋಪಾಲಿಟನ್ ನಗರಗಳಲ್ಲಿನ ಪ್ರಮುಖ ರಸ್ತೆಗಳ ಆಳ (ದಪ್ಪ) ಎಷ್ಟಿರಬೇಕು ಹಾಗೆಯೇ ಬಳಸುವ ಮೆಟೀರಿಯಲ್ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಗಳಿವೆ. ಅದು ಪಾಲಿಕೆ ಅಧಿಕಾರಿಗಳಿಗೆ ಗೊತ್ತು ಮತ್ತು ರಸ್ತೆ ನಿರ್ಮಾಣದ ಗುತ್ತಿಗೆಯನ್ನು ಅಧಿಕಾರಿಗಳಿಗೆ ಲಂಚ ನೀಡಿ ಪಡೆದ ಗುತ್ತಿಗೆದಾರರಿಗೂ ಗೊತ್ತಿರುತ್ತದೆ. ಆದರೆ ಆ ನಿಯಮ ಜಾರಿ ಮಾತ್ರ ಆಗದು.

ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾದರೆ ಅದನ್ನು ಸರಿಮಾಡುವ ಜವಾಬ್ದಾರಿ ಗುತ್ತಿಗೆದಾರನಾಗಿರುತ್ತದೆ ಎಂಬ ನಿಯಮವನ್ನೂ ಜಾರಿಗೊಳಿಸಲಾಗಿತ್ತು. ಅದು ಬಿಡಿ, ಯಾವ ಗುತ್ತಿಗೆದಾದರನೂ ಮಾಡಲಾರ. ಒಮ್ಮೆ ಬಿಲ್ ಕ್ಲೀಯರ್ ಆಯ್ತು ಆ ರಸ್ತೆ ಅವನು ಯಾವತ್ತೂ ತುಳಿಯಲಾರ.

ಆ ರಸ್ತೆಯ ಗುಣಮಟ್ಟ ಹೇಗಿರುತ್ತದೆ ಅವನಿಗಿಂತ ಚೆನ್ನಾಗಿ ಯಾರಿಗೆ ಗೊತ್ತಿರಲು ಸಾಧ್ಯ? ಬೇರೆಯವರು ಗುಂಡಿಗೆ ಬೀಳುವುದನ್ನು ನೋಡಿ ಸಂತೋಷಿಸುತ್ತಾನೆಯೇ ಹೊರತು ತಾನು ಮಾತ್ರ ರಸ್ತೆಗಿಳಿಯಲಾರ.

ಹೀಗಿದೆ ಬಿ ಬಿ ಎಮ್ ಪಿ ಮತ್ತು ಕಂಟ್ರ್ಯಾಕ್ಟರ್​​​ಗಳ ಕರಾಮತ್ತು. ಸರ್ಕಾರ ಯಾವುದಾದರೇನು, ಈ ಕರಾಮತ್ತು ಮಾತ್ರ ನಿಲ್ಲದು.

ಇದನ್ನೂ ಓದಿ:  ನಟ ಧ್ರುವ ಸರ್ಜಾರಿಂದ ಉಧೋ ಉಧೋ ಹುಲಿಗೆಮ್ಮ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ

Follow us on

Click on your DTH Provider to Add TV9 Kannada