ಯುವ ಐಪಿಎಸ್ ಅಧಿಕಾರಿಯ ವೃತ್ತಿಬದುಕು ಆರಂಭಕ್ಕೆ ಮುನ್ನವೇ ಅಂತ್ಯಗೊಂಡಿದ್ದು ದುರದೃಷ್ಟಕರ
ತೀವ್ರವಾಗಿ ಗಾಯಗೊಂಡಿದ್ದ ಹರ್ಷವರ್ಧನ್ ಅವರನ್ನು ಕೂಡಲೇ ಹಾಸನದ ಖಾಸಗಿ ಆಸ್ಪತ್ರೆಯೊಂದಕ್ಕೆ ಶಿಫ್ಟ್ ಮಾಡಲಾಗಿತ್ತಾದರೂ ತಲೆ ಮತ್ತು ಹೊಟ್ಟೆಭಾಗದಲ್ಲಿ ಭಾರೀ ಸ್ವರೂಪದ ಗಾಯಗಳಾಗಿದ್ದರಿಂದ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಹರ್ಷವರ್ಧನ್ಗೆ ಚಿಕಿತ್ಸೆ ನೀಡಿದ ವೈದ್ಯರೊಬ್ಬರು ಹೇಳುತ್ತಾರೆ.
ಹಾಸನ: ಇದು ದುರದೃಷ್ಟಕರ ಅಂತ ಹೇಳಿದರೆ ಅಂಡರ್ಸ್ಟೇಟ್ಮೆಂಟ್ ಅನಿಸಿಕೊಳ್ಳುತ್ತದೆ. ಒಬ್ಬ ಐಪಿಎಸ್ ಅಧಿಕಾರಿಯ ವೃತ್ತಿಬದುಕು ಆರಂಭಗೊಳ್ಳುವ ಮುನ್ನವೇ ದಾರುಣವಾಗಿ ಮುರುಟಿಹೋಗಿದೆ. ಹಾಸನ ತಾಲೂಕಿನ ಕಿತ್ತಾನೆಗಡಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತವೊಂದರಲ್ಲಿ 26-ವರ್ಷ ವಯಸ್ಸಿನ ಹರ್ಷವರ್ಧನ್ ಬಲಿಯಾಗಿದ್ದಾರೆ. ನಮ್ಮ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಬಿಹಾರದವರಾಗಿದ್ದರೂ ಮಧ್ಯಪ್ರದೇಶದಲ್ಲಿ ವಾಸವಾಗಿದ್ದ ಮೃತ ಅಧಿಕಾರಿಯು 2023-24 ಐಪಿಎಸ್ ಬ್ಯಾಚ್ನಲ್ಲಿ ಉತ್ತೀರ್ಣಗೊಂಡು ಕರ್ನಾಟಕ ಕೇಡರ್ನಲ್ಲಿ ಆಯ್ಕೆಯಾಗಿ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಹಾಸನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಕೆಲಸಕ್ಕೆ ವರದಿ ಮಾಡಿಕೊಳ್ಳಲು ಜೀಪೊಂದರಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತುಮಕೂರು ರಸ್ತೆ ಅಪಘಾತದಲ್ಲಿ 6 ಸಾವು: ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್, ಕೇಂದ್ರ ವಲಯ ಐಜಿಪಿ ಲಾಬೂರಾಮ್ ಭೇಟಿ
Latest Videos