ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್

Updated on: Mar 20, 2026 | 11:18 PM

ಅರಣ್ಯ ಇಲಾಖೆಯು ಆ ಯುವಕನ ವೈರಲ್ ವೀಡಿಯೊವನ್ನು ಆಧರಿಸಿ ತನಿಖೆಯನ್ನು ಪ್ರಾರಂಭಿಸಿದೆ. ಶಿವಪುರಿಯ ಚಿಂತಹಾರ್ ದೇವಾಲಯದ ಬಳಿ ಇರುವ ಭುಜಾರಿಯಾ ಕೊಳದಿಂದ ಬೃಹತ್ ಮೊಸಳೆ ಹೊರಬಂದಿತ್ತು. ಮೊಸಳೆ ಕೊಳದಿಂದ ಹೊರಬಂದು ರಸ್ತೆಗೆ ಬಿದ್ದಿದ್ದರಿಂದ ಸುತ್ತಮುತ್ತಲಿನ ವಸತಿ ಪ್ರದೇಶದಲ್ಲಿ ಭಯಭೀತ ವಾತಾವರಣ ನಿರ್ಮಾಣವಾಯಿತು. ರಸ್ತೆಯಲ್ಲಿ ಬೃಹತ್ ಮೊಸಳೆಯನ್ನು ನೋಡಿ ಸ್ಥಳದಲ್ಲಿ ದೊಡ್ಡ ಜನಸಮೂಹ ಜಮಾಯಿಸಿತು. ಆಗ ಒಬ್ಬ ಯುವಕ ಮೊಸಳೆಯ ಬಾಲವನ್ನು ಹಿಡಿದನು. ಆ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆಗಳು ನಡೆಯುತ್ತಿವೆ.

ಶಿವಪುರ, ಮಾರ್ಚ್ 20: ಮಧ್ಯಪ್ರದೇಶದ ಶಿವಪುರಿ ನಗರದ ಬೀದಿಗಳಲ್ಲಿ ಮೊಸಳೆಗಳು ಓಡಾಡುವುದು ಹೊಸದೇನಲ್ಲ. ಆದರೆ ಯಾರೂ ಅವುಗಳ ತಂಟೆಗೆ ಹೋಗುತ್ತಿರಲಿಲ್ಲ. ಇದೀಗ ಈ ಊರಿನ ಯುವಕನೊಬ್ಬ ರಾತ್ರಿಯ ಕತ್ತಲೆಯಲ್ಲಿ ಬೀದಿಯಲ್ಲಿ ಅಡ್ಡಾಡುತ್ತಿದ್ದ ಮೊಸಳೆಯ (Crocodile Video) ಬಾಲವನ್ನು ಹಿಡಿದು ತಮಾಷೆ ಮಾಡುತ್ತಾ ರೀಲ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅರಣ್ಯ ಇಲಾಖೆಯು ಆ ಯುವಕನ ವೈರಲ್ ವೀಡಿಯೊವನ್ನು ಆಧರಿಸಿ ತನಿಖೆಯನ್ನು ಪ್ರಾರಂಭಿಸಿದೆ. ಶಿವಪುರಿಯ ಚಿಂತಹಾರ್ ದೇವಾಲಯದ ಬಳಿ ಇರುವ ಭುಜಾರಿಯಾ ಕೊಳದಿಂದ ಬೃಹತ್ ಮೊಸಳೆ ಹೊರಬಂದಿತ್ತು. ಮೊಸಳೆ ಕೊಳದಿಂದ ಹೊರಬಂದು ರಸ್ತೆಗೆ ಬಿದ್ದಿದ್ದರಿಂದ ಸುತ್ತಮುತ್ತಲಿನ ವಸತಿ ಪ್ರದೇಶದಲ್ಲಿ ಭಯಭೀತ ವಾತಾವರಣ ನಿರ್ಮಾಣವಾಯಿತು. ರಸ್ತೆಯಲ್ಲಿ ಬೃಹತ್ ಮೊಸಳೆಯನ್ನು ನೋಡಿ ಸ್ಥಳದಲ್ಲಿ ದೊಡ್ಡ ಜನಸಮೂಹ ಜಮಾಯಿಸಿತು. ಆಗ ಒಬ್ಬ ಯುವಕ ಮೊಸಳೆಯ ಬಾಲವನ್ನು ಹಿಡಿದನು. ಆ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆಗಳು ನಡೆಯುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More