ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ವಿನಯ್​ ನೋಡಲು ಜೈಲಿಗೆ ಬಂದ ಯುವತಿಗೆ ಭೇಟಿ ಸಾಧ್ಯವಾಗಲಿಲ್ಲ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ವಿನಯ್​ ನೋಡಲು ಜೈಲಿಗೆ ಬಂದ ಯುವತಿಗೆ ಭೇಟಿ ಸಾಧ್ಯವಾಗಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 08, 2024 | 3:41 PM

ಕಾರಲ್ಲಿ ಬಂದಿದ್ದ ಯುವತಿ ಪ್ರಾಯಶಃ ತನ್ನ ಗುರುತು ಸಿಗಬಾರದೆನ್ನುವ ಕಾರಣಕ್ಕೆ ಮುಖಕ್ಕೆ ಮಾಸ್ಕ್ ಧರಿಸಿದ್ದರು. ಅದು ಸಹಜವೇ, ಅರೋಪಿಗಳನ್ನು ಅಥವಾ ಅಪರಾಧಿಗಳನ್ನು ಭೇಟಿಯಾಗಲು ಬರುವ ಜನ ಅದಲ್ಲೂ ವಿಶೇಷವಾಗಿ ಮಹಿಳೆಯರು ಮಾಧ್ಯಮಗಳಿಗೆ ತಮ್ಮ ಗುರುತು ಸಿಗದಿರಲೆಂದದು ಮಾಸ್ಕ್ ಧರಿಸುತ್ತಾರೆ. ಒಂದು ಕುತೂಹಲಕಾರಿ ಸಂಗತಿಯೆಂದರೆ ಅವರು ಬಂದಿದ್ದ ಕಾರಿನ ಮೇಲೆ ಪ್ರೆಸ್ ಅಂತ ಒಂದು ಚಿಕ್ಕ ಸ್ಟಿಕ್ಕರ್ ಇತ್ತು.

ಆನೇಕಲ್ (ಬೆಂಗಳೂರು): ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿನ ಬಳಿ ಯಾವುದಾದರೂ ಘಟನೆ ಪ್ರತಿದಿನ ನಡೆಯುತ್ತಿರುತ್ತದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್ ತೂಗುದೀಪ, ಅವರ ಗೆಳತಿ ಪವಿತ್ರಾ ಗೌಡ ಜೊತೆ 14 ಅರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಅವರ ಪೈಕಿ ನಗರದಲ್ಲಿರುವ ಸ್ಟೋನಿ ಬ್ರೂಕ್ ಪಬ್ ಮಾಲೀಕ ವಿನಯ್ ಕೂಡ ಒಬ್ಬರು. ವಿನಯ್ ನನ್ನು ನೋಡಲು ಇಂದು ಅವರ ಸ್ನೇಹಿತೆ ಅಂತ ಹೇಳಿಕೊಂಡು ಯುವತಿಯೊಬ್ಬರು ಬಂದಿದ್ದರು. ಯುವತಿಯ ಜೊತೆ ಒಬ್ಬ ಯುವಕ ಕೂಡ ಇದ್ದರು. ಅವರು ಯುವತಿಯ ಸ್ನೇಹಿತನೋ, ಸಹೋದರನೋ ಅಥವಾ ಬಂಧುವೋ ಅನ್ನೋದು ಗೊತ್ತಾಗಿಲ್ಲ. ಯುವಕನ ಕೈಲಿ ಸೇಬುಹಣ್ಣುಗಳಿರುವ ಒಂದು ಪಾಲಿಥೀನ್ ಬ್ಯಾಗಿದೆ. ವಿಷಯ ಅದಲ್ಲ, ಇವರಿಬ್ಬರು ವಿನಯ್ ನನ್ನು ಕಾಣಲು ಅನುಮತಿ ಪಡೆದು ಜೈಲಿನ ಒಳಗೆ ಹೋದರೂ ಅರೋಪಿಯನ್ನು ಭೇಟಿಯಾಗುವುದು ಸಾಧ್ಯವಾಗಿಲ್ಲ, ವಿನಯ್ ಭೇಟಿಯಾಗಲು ನಿರಾಕರಿಸಿದನೋ ಅಥವಾ ಜೈಲು ಅಧಿಕಾರಿಗಳಿಂದ ಅಡಚಣೆ ಎದುರಾಯಿತೋ ಅನ್ನೋದೂ ಗೊತ್ತಾಗಲಿಲ್ಲ. ಯಾಕೆಂದರೆ, ಯುವಕ ಮತ್ತು ಯುವತಿ ಜೈಲು ಆವರಣದಿಂದ ಹೊರಬಂದು ಯಾರೊಂದಿಗೂ ಮಾತಾಡದೆ ಕಾರು ಹತ್ತಿ ಹೊರಟುಬಿಟ್ಟರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆಯನ್ನು ಮಾಧ್ಯಮಗಳಿಗಾಗಿ ಫಾಸ್ಟ್ ಫಾರ್ವರ್ಡ್ ಮಾಡಲಾಗಲ್ಲ: ಜಿ ಪರಮೇಶ್ವರ್