AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಯ ಬೇಕು ಎಂದು 9 ಮಹಡಿಗಳ ಬಿಲ್ಡಿಂಗ್ ಏರಿ ಯುವಕನ ಹೈಡ್ರಾಮಾ: ಮನವೊಲಿಕೆಗೂ ಬಗ್ಗದೆ ಮೊಂಡಾಟ

ನ್ಯಾಯ ಬೇಕು ಎಂದು 9 ಮಹಡಿಗಳ ಬಿಲ್ಡಿಂಗ್ ಏರಿ ಯುವಕನ ಹೈಡ್ರಾಮಾ: ಮನವೊಲಿಕೆಗೂ ಬಗ್ಗದೆ ಮೊಂಡಾಟ

ನವೀನ್ ಕುಮಾರ್ ಟಿ
| Edited By: |

Updated on: Apr 21, 2026 | 4:36 PM

Share

ಪೋಕ್ಸೋ ಪ್ರಕರಣದ ಆರೋಪಿ ಆನಂದ್ ಎಂಬಾತ, ತನಗೆ ನ್ಯಾಯ ಬೇಕೆಂದು ಅಪಾರ್ಟ್ಮೆಂಟ್ ಮೇಲೇರಿ ಹೈಡ್ರಾಮಾ ಮಾಡಿರುವ ಘಟನೆ ದೇವನಹಳ್ಳಿ ಬೈಪಾಸ್​​ನ ಖಾಸಗಿ ಅಪಾರ್ಟ್ಮೆಂಟ್ ಬಳಿ ನಡೆದಿದೆ. ಸ್ಥಳಕ್ಕೆ ಡಿಸಿ ಬರಬೇಕೆಂದು ಪಟ್ಟು ಹಿಡಿದಿರುವ ಈತ, ಪೊಲೀಸರು ಹಾಗೂ ತಾಯಿಯ ಮನವೊಲಿಕೆಯ ಪ್ರಯತ್ನಗಳಿಗೂ ಬಗ್ಗದೆ ಹಠ ಮುಂದುವರಿಸಿದ ಪ್ರಸಂಗ ನಡೆದಿದೆ.

ದೇವನಹಳ್ಳಿ, ಏಪ್ರಿಲ್​​ 21: ನನಗೆ ನ್ಯಾಯ ಬೇಕು, ಡಿಸಿ ಕರೆಸಿ ಎಂದು ಯುವಕನೋರ್ವ 9 ಮಹಡಿಗಳ ಬಿಲ್ಡಿಂಗ್ ಏರಿ ಹೈಡ್ರಾಮಾ ನಡೆಸಿರುವ ಘಟನೆ ದೇವನಹಳ್ಳಿ ಬೈಪಾಸ್​​ನ ಖಾಸಗಿ ಅಪಾರ್ಟ್ಮೆಂಟ್ ಬಳಿ ನಡೆದಿದೆ. ಪೋಕ್ಸೋ ಕೇಸ್​​ನ ಆರೋಪಿ ಆನಂದ್ ಎಂಬ ಯುವಕ ಈ ರೀತಿ ಹುಚ್ಚಾಟ ನಡೆಸಿದ್ದು, ಸ್ಥಳಕ್ಕೆ ಬಂದ ಪೊಲೀಸರ ಮನವೊಲಿಕೆಗೂ ಈತ ಬಗ್ಗಿಲ್ಲ. ಇಲ್ಲಿಗೆ ಡಿಸಿ ಬರಲೇ ಬೇಕು ಎಂದು ಪಟ್ಟುಹಿಡಿದಿರುವ ಈತ, ಸ್ಥಳಕ್ಕೆ ಬಂದ ತಾಯಿಯ ಮನವಿಗೂ ಕ್ಯಾರೇ ಎಂದಿಲ್ಲ. ಎಷ್ಟೇ ಮನವೊಲಿಕೆ ಮಾಡಿದ್ರೂ ಈತ ತನ್ನ ಹಠ ಬಿಡದ ಹಿನ್ನೆಲೆ ಪೊಲೀಸರಿಗೂ ಈತನ ಹೈಡ್ರಾಮಾ ತಲನೋವಾಗಿ ಮಾರ್ಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Naveen Kumar
Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More