ಕೆಫೆ ಕಾಫಿ ಡೇ ಸಂಸ್ಥಾಪಕ ದಿ ಸಿದ್ದಾರ್ಥರನ್ನು ಆದರ್ಶವಾಗಿಟ್ಟುಕೊಂಡ ಯುವಕ ಮದುವೆಗೆ ಮೊದಲು ಕಾಫಿದೊರೆಗೆ ಪುಷ್ಪನಮನ ಸಲ್ಲಿಸಿದರು
ಸಿದ್ದಾರ್ಥ ಅವರನ್ನು ಭೇಟಿಯಾಗಿ, ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪಡೆಯಬೇಕೆನ್ನುವ ಮಹತ್ವಾಕಾಂಕ್ಷೆಯನ್ನು ಸಿದ್ದಾರ್ಥರ ಕಾಲೀಜಿನಲ್ಲೇ ಸಂತೋಷ್ ಪೂರೈಸಿದರು. ತನಗೆ ಸಿದ್ದಾರ್ಥ ಸರ್ ಸ್ಟೈಪಂಡ್ ದೊರಕುವಂತೆ ಮಾಡಿದ್ದರಿಂದ ತಂದೆತಾಯಿಗಳಿಗೆ ಸ್ವಲ್ಪವೂ ಹೊರೆಯಾಗದ ಹಾಗೆ ಪದವಿ ಪಡೆಯುವುದು ಸಾಧ್ಯವಾಯಿತು ಎಂದು ಸಂತೋಷ್ ಹೇಳುತ್ತಾರೆ.
ಬದುಕಿನ ಶುಭ ಸಂದರ್ಭಗಳಲ್ಲಿ, ಹೊಸದಾಗಿ ಯಾವುದಾದರೂ ಕೆಲಸ, ಉದ್ದಿಮೆ ಇಲ್ಲವೇ ಮದುವೆಯಾಗುವಾಗ ಜನ ತಮ್ಮ ಆರಾಧ್ಯ ದೈವಗಳಿಗೆ ತಮ್ಮದೇ ಆದ ರೀತಿ ಗೌರವ ಸಲ್ಲಿಸುವ ಪರಿಪಾಠ ನಮ್ಮಲ್ಲಿದೆ. ಅವರ ರೋಲ್ ಮಾಡೆಲ್ (role model) ಗತಿಸಿದ್ದರೆ ನುಡಿನಮನ, ಪುಷ್ಪನಮನ (floral tribute) ಮೂಲಕ ಶ್ರದ್ಧಾಂಜಲಿ ಸಮರ್ಪಿಸುತ್ತಾರೆ. ಚಿಕ್ಕಮಗಳೂರಿನ ಯುವಕರೊಬ್ಬರಿಗೆ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ ಜಿ ಸಿದ್ದಾರ್ಥ (VG Siddhartha) ಅವರೇ ಆದರ್ಶ, ಮೆಂಟರ್ ಮತ್ತು ಗೈಡ್. ತನ್ನ ಪಾಲಿನ ದೇವರು ಅಂತಲೂ ಯುವಕ ಹೇಳುತ್ತಾರೆ. ಸಿದ್ದಾರ್ಥ್ ಬಗ್ಗೆ ಅಪಾರ ಅಭಿಮಾನ, ಪ್ರೀತಿ ಗೌರವ ಇಟ್ಟುಕೊಂಡಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನಲ್ಲಿರುವ ಹೊಳೆಕೂಡಿ ಗ್ರಾಮದ ಯುವಕನ ಹೆಸರು ಸಂತೋಷ್ (Santosh). ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡುವ ಮೊದಲು ಅವರು ತಮ್ಮಂತೆ ಅನೇಕರ ಬದುಕಿಗೆ ದಾರಿದೀಪವಾಗಿದ್ದ ಸಿದ್ದಾರ್ಥ ಅವರಿಗೆ ಹೀಗೆ ಶ್ರದ್ಧಾಂಜಲಿ ಸಮರ್ಪಿಸಿದರು.
ಕೇವಲ ಸಂತೋಷ್ ಮಾತ್ರವಲ್ಲ, ಅವರ ಅಜ್ಜಿ, ತಂದೆ-ತಾಯಿ, ಸಹೋದರ ಮತ್ತು ಸಹೋದರಿ, ಆಪ್ತರು, ಬಳಗದವರು, ಸ್ನೇಹಿತರು ಮತ್ತು ಚಿಕ್ಕ ಪುಟ್ಟ ಮಕ್ಕಳು ಸಹ ಸಿದ್ದಾರ್ಥ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಮದುವೆಯ ನಂತರ ಟಿವಿ9 ಚಿಕ್ಕಮಗಳೂರು ಪ್ರತಿನಿಧಿಯೊಂದಿಗೆ ಮಾತಾಡಿದ ಸಂತೋಷ್, ಸಿದ್ದಾರ್ಥ ಸರ್ ತನ್ನ ಬದುಕಿನ ರೂವಾರಿ ಮತ್ತು ಪಾಲಿನ ದೇವರು ಅಂತ ಹೇಳಿದರು. ಪಿಯು ವ್ಯಾಸಂಗ ಮುಗಿದ ಬಳಿಕ ಏನು ಮಾಡುವುದು ಎಂಬ ಗೊಂದಲದಲ್ಲಿದ್ದ ಸಂತೋಷ್ ಗೆ ಊರ ಹಿರಿಯರೊಬ್ಬರು ಸಿದ್ದಾರ್ಥ ಅವರನ್ನು ಕಾಣುವಂತೆ ಹೇಳಿದರಂತೆ.
ಸಿದ್ದಾರ್ಥ ಅವರನ್ನು ಭೇಟಿಯಾಗಿ, ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪಡೆಯಬೇಕೆನ್ನುವ ಮಹತ್ವಾಕಾಂಕ್ಷೆಯನ್ನು ಸಿದ್ದಾರ್ಥರ ಕಾಲೀಜಿನಲ್ಲೇ ಸಂತೋಷ್ ಪೂರೈಸಿದರು. ತನಗೆ ಸಿದ್ದಾರ್ಥ ಸರ್ ಸ್ಟೈಪಂಡ್ ದೊರಕುವಂತೆ ಮಾಡಿದ್ದರಿಂದ ತಂದೆತಾಯಿಗಳಿಗೆ ಸ್ವಲ್ಪವೂ ಹೊರೆಯಾಗದ ಹಾಗೆ ಪದವಿ ಪಡೆಯುವುದು ಸಾಧ್ಯವಾಯಿತು ಎಂದು ಸಂತೋಷ್ ಹೇಳುತ್ತಾರೆ.
ಪದವಿ ಪಡೆದ ಬಳಿಕ ಕೆಲಸದ ನಿಮಿತ್ತ ಮೊದಲು ಬೆಂಗಳೂರು ಆಮೇಲೆ ಮುಂಬೈ ಮತ್ತು ಕೊನೆಗೆ ವಿದೇಶಕ್ಕೂ ಹೋಗುವಂತಾಗಿದ್ದು ಸಿದ್ದಾರ್ಥ ಸರ್ ಮಾಡಿದ ಸಹಾಯದಿಂದ ಅಂತ ಸಂತೋಷ್ ಹೇಳುತ್ತಾರೆ. ಇಂಗ್ಲಿಷ್ ಭಾಷೆ ಮಾತಾಡಲು ಕಲಿಲಿದ್ದು ಸಹ ಅವರಿಂದಲೇ ಎಂದು ಸಂತೋಷ್ ಕೃತಜ್ಞತೆಯಿಂದ ನೆನೆಯುತ್ತಾರೆ.
ಇದನ್ನೂ ಓದಿ: ಸಂಕಷ್ಟದಿಂದ ಮತ್ತೆ ಸ್ವಾವಲಂಬನೆಯತ್ತ ಕೆಫೆ ಕಾಫಿ ಡೇ: ಕೊಟ್ಟಿದ್ದ ಮಾತಿನೊಂದಿಗೆ ಕಂಪನಿಯನ್ನೂ ಉಳಿಸಿಕೊಂಡ ಮಾಳವಿಕಾ ಹೆಗ್ಡೆ