Loading video

India-Pakistan War Updates: ಚಂಡೀಗಢದಲ್ಲಿ ಸಿವಿಲ್ ಡಿಫೆನ್ಸ್ ಸ್ವಯಂಸೇವಕರಾಗಿ ಹೆಸರು ನೋಂದಾಯಿಸಿಕೊಳ್ಳಲು ನೂಕುನುಗ್ಗಲು

Updated on: May 10, 2025 | 4:01 PM

ಸಿವಿಲ್ ಡಿಫೆನ್ಸ್ ನವರು ಶತ್ರುಗಳ ಜೊತೆ ಯುದ್ಧಕ್ಕೇನೂ ಹೋಗಲ್ಲ, ಆದರೆ ಯುದ್ಧ ನಡೆಯುವ ಸಂದರ್ಭದಲ್ಲಿ ನಾಗರಿಕರ, ಸ್ಮಾರಕಗಳ ರಕ್ಷಣೆಯ ಜೊತೆ ಇತರ ನಾಗರಿಕ ಸೇವೆಗಳನ್ನು ಮಾಡಬೇಕಾಗುತ್ತದೆ. ಚಂಡೀಗಢನಲ್ಲಿ ಸ್ವಯಂಸೇವಕರಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಸೇರಿರುವ ಜನರಲ್ಲಿ ಪರಂವೀರ್ ಸಿಂಗ್ ಹೆಸರಿನ ಸಿಖ್, ಕರಣ್ ಚೋಪ್ರಾ ಹೆಸರಿನ ಹಿಂದೂ ಮತ್ತು ಹಮೀದ್ ಹೆಸರಿನ ಮುಸಲ್ಮಾನ ಕೂಡ ಇದ್ದಾರೆ. ದೇಶಪ್ರೇಮ, ರಾಷ್ಟ್ರಾಭಿಮಾನಕ್ಕೆ ಜಾತಿ, ಧರ್ಮಗಳಿಲ್ಲ.

ಚಂಡೀಗಢ, ಮೇ 10: ಇದು ಕೇವಲ ಚಂಡೀಗಢ ನಿವಾಸಿಗಳ ಸ್ಥೈರ್ಯ ಮಾತ್ರ ಅಲ್ಲ ಇಡೀ ದೇಶದ ಚೇತನ, ಭಾರತೀಯರೆಲ್ಲ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದಾರೆ. ಚಂಡೀಗಢ ನಲ್ಲಿ ಸ್ಥಳೀಯ ಆಡಳಿತವು ಸಿವಿಲ್ ಡಿಫೆನ್ಸ್ ನಲ್ಲಿ ಸ್ವಯಂಸೇವಕರಾಗಿ ಹೆಸರು ನೋಂದಾಯಿಸಿಕೊಳ್ಳಲು ಕರೆ ನೀಡಿದಾಕ್ಷಣ ಕೇವಲ ಯುವಕರಲ್ಲ, ಯುವತಿಯರು, ಮಧ್ಯವಯಸ್ಕರು ಮತ್ತು ಕೆಲ ವಯಸ್ಕರೂ ಸಹ ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದಾರೆ. ಅವರಲ್ಲಿರುವ ಉತ್ಸಾಹ ಮತ್ತು ಹುಮ್ಮಸ್ಸು ಕಂಡು ರೋಮಾಂಚನ ಉಂಟಾಗುತ್ತದೆ.

ಇದನ್ನೂ ಓದಿ: ರಾಯಚೂರಿನಲ್ಲಿ ರೈಲ್ವೆ ಇಲಾಖೆಯಿಂದ ಮಾಕ್ ಡ್ರಿಲ್: ತಾಲೀಮು ಪ್ರದರ್ಶನ ಹೇಗಿತ್ತು ನೋಡಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ