AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಖತ್ತಾಗಿದೆ: ‘ಏಳುಮಲೆ’ ನೋಡಿ ಯುವ ರಾಜ್​​ಕುಮಾರ್ ಹೇಳಿದ ಮೊದಲ ಮಾತು

ಸಖತ್ತಾಗಿದೆ: ‘ಏಳುಮಲೆ’ ನೋಡಿ ಯುವ ರಾಜ್​​ಕುಮಾರ್ ಹೇಳಿದ ಮೊದಲ ಮಾತು

ಮದನ್​ ಕುಮಾರ್​
|

Updated on: Sep 08, 2025 | 9:26 PM

Share

ಪ್ರಿಯಾಂಕಾ ಆಚಾರ್, ರಾಣಾ, ಕಿಶೋರ್ ಮುಂತಾದವರು ನಟಿಸಿದ ‘ಏಳುಮಲೆ’ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕಿದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ಈ ಸಿನಿಮಾ ಬಹಳ ಇಷ್ಟವಾಗಿದೆ. ಇತ್ತೀಚೆಗೆ ಸೆಲೆಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ನಟ ಯುವ ರಾಜ್​​ಕುಮಾರ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡರು.

ರಾಣಾ, ಪ್ರಿಯಾಂಕಾ ಆಚಾರ್ ಅವರು ಜೋಡಿಯಾಗಿ ನಟಿಸಿದ ‘ಏಳುಮಲೆ’ (Elumale) ಸಿನಿಮಾಗೆ ಜನರಿಂದ ಉತ್ತಮ ವಿಮರ್ಶೆ ಸಿಕ್ಕಿದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಈ ಚಿತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ. ಇತ್ತೀಚೆಗೆ ಸೆಲೆಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಯುವ ರಾಜ್​​ಕುಮಾರ್ (Yuva Rajkumar) ಅವರು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡರು. ‘ಸಿನಿಮಾ ಸಖತ್ತಾಗಿದೆ. ಚಿತ್ರಕಥೆ ತುಂಬ ನೀಟಾಗಿದೆ. ಪ್ರೇಕ್ಷಕರನ್ನು ಈ ಸಿನಿಮಾ ಕೂರಿಸುತ್ತದೆ. ಪ್ರತಿ ಸೆಕೆಂಡ್ ಕೂಡ ಮುಂದೇನಾಗುತ್ತದೆ ಅಂತ ಕಾಯುತ್ತೇವೆ. ಪ್ರೀತಿಯೇ ಪರಮಶ್ರೇಷ್ಠ ಎಂಬುದನ್ನು ಈ ಸಿನಿಮಾ ಮೂಲಕ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ರಾಣಾ ಮತ್ತು ಪ್ರಿಯಾಂಕಾ ಆಚಾರ್ (Priyanka Achar) ಅವರು ತುಂಬ ಚೆನ್ನಾಗಿ ನಟಿಸಿದ್ದಾರೆ. ರಿಯಲ್ ಲೈಫ್ ಘಟನೆಯ ಹಿನ್ನೆಲೆಯಲ್ಲಿ ಲವ್ ಸ್ಟೋರಿ ತೋರಿಸಿರುವುದು ನನಗೆ ಇಷ್ಟ ಆಯಿತು. ಸಿನಿಮಾ ನೋಡಿ ತೃಪ್ತಿ ಆಯಿತು’ ಎಂದು ಯುವ ರಾಜ್​ಕುಮಾರ್ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.