ಇಸ್ರೇಲ್:​ ಮೈದಾನಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬಿದ್ದ ರಾಕೆಟ್​, 12 ಮಂದಿ ಸಾವು

|

Updated on: Jul 28, 2024 | 10:24 AM

ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ ಪ್ರದೇಶದ ಹಳ್ಳಿಯೊಂದರ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಸಾವನ್ನಪ್ಪಿದರು. ಅಕ್ಟೋಬರ್ 7 ರಿಂದ ತನ್ನ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಎಂದು ಇಸ್ರೇಲ್ ಬಣ್ಣಿಸಿದೆ.

ಇಸ್ರೇಲ್:​ ಮೈದಾನಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬಿದ್ದ ರಾಕೆಟ್​, 12 ಮಂದಿ ಸಾವು
ಬಾಂಬ್​ ಸ್ಪೋಟ
Follow us on

ಇಸ್ರೇಲ್​ ಮೇಲೆ ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿಯಲ್ಲಿ ಮಕ್ಕಳು ಸೇರಿ 12 ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇಸ್ರೇಲ್ ಪ್ರಕಾರ, ಅಕ್ಟೋಬರ್ 7 ರಂದು ಹೋರಾಟ ಪ್ರಾರಂಭವಾದ ನಂತರ ಹಿಜ್ಬುಲ್ಲಾ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ.

ಲೆಬನಾನ್‌ನಿಂದ ಹಾರಿಸಲಾದ ರಾಕೆಟ್ ಗೋಲನ್ ಹೈಟ್ಸ್‌ನ ಉತ್ತರದ ಡ್ರೂಜ್ ಪಟ್ಟಣವಾದ ಮಜ್ಡಾಲ್ ಶಾಮ್ಸ್‌ನಲ್ಲಿರುವ ಫುಟ್‌ಬಾಲ್ ಮೈದಾನಕ್ಕೆ ಅಪ್ಪಳಿಸಿತು. ಲೆಬನಾನ್‌ನಿಂದ ಇಸ್ರೇಲ್ ಭೂಪ್ರದೇಶಕ್ಕೆ ಬಿದ್ದ 30 ಸ್ಪೋಟಕಗಳನ್ನು ಗುರುತಿಸಿರುವುದಾಗಿ ಇಸ್ರೇಲ್ ಹೇಳಿದೆ.

ಕೆಲವು ಇಸ್ರೇಲಿ ನಾಯಕರು ಪ್ರತೀಕಾರಕ್ಕೆ ಕರೆ ನೀಡಿದ್ದಾರೆ. ಆದರೆ, ರಾಕೆಟ್ ಹಾರಿಸಿರುವುದನ್ನು ಹಿಜ್ಬುಲ್ಲಾ ನಿರಾಕರಿಸಿದೆ. ಕಳೆದ 10 ತಿಂಗಳಿಂದ ಇಸ್ರೇಲ್ ಸೇನೆ ಮತ್ತು ಹಿಜ್ಬುಲ್ಲಾ ಪರಸ್ಪರ ಗುಂಡಿನ ದಾಳಿ ನಡೆಸುತ್ತಿದೆ. ಈ ದಾಳಿಗೂ ಮುನ್ನವೇ ಇಬ್ಬರ ನಡುವಿನ ಘರ್ಷಣೆ ಕಾದಾಟದ ಹಂತ ತಲುಪಿದೆ ಎನ್ನಲಾಗುತ್ತಿದೆ. ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.

ಮತ್ತಷ್ಟು ಓದಿ:
Israel Gaza War: ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್​ ವೈಮಾನಿಕ ದಾಳಿ, ಮಕ್ಕಳು ಸೇರಿ 35 ಮಂದಿ ಸಾವು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕದಿಂದ ವಾಪಸಾದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಅಲ್ಲಲ್ಲಿ ಘರ್ಷಣೆಗೆ ಬದಲಾಗಿ, ಹಿಜ್ಬುಲ್ಲಾ ಜೊತೆ ಪೂರ್ಣ ಪ್ರಮಾಣದ ಯುದ್ಧದ ಭೀತಿ ಈಗ ಹೆಚ್ಚಾಗಿದೆ.

1967 ರಲ್ಲಿ ಆರು ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲ್ ಸಿರಿಯಾದಿಂದ ವಶಪಡಿಸಿಕೊಂಡ ಪ್ರದೇಶ ಇದು. ಇದು ಅಂತರಾಷ್ಟ್ರೀಯ ಕಾನೂನುಗಳು ಮತ್ತು UN ಭದ್ರತಾ ಮಂಡಳಿಯ ನಿರ್ಣಯಗಳ ಅಡಿಯಲ್ಲಿ ಆಕ್ರಮಿತ ಪ್ರದೇಶವೆಂದು ಪರಿಗಣಿಸಲಾಗಿದೆ.

ಈ ಪ್ರದೇಶವು ಸರಿಸುಮಾರು 50,000 ಇಸ್ರೇಲಿ ಯಹೂದಿಗಳು ಮತ್ತು ಡ್ರೂಜ್‌ಗಳಿಗೆ ನೆಲೆಯಾಗಿದೆ. ಅಕ್ಟೋಬರ್ 7ರ ನಂತರ ನಡೆದ ಅತಿ ದೊಡ್ಡ ದಾಳಿ ಇದಾಗಿದ್ದು, ಕ್ರಮ ಕೈಗೊಳ್ಳುತ್ತೇವೆ. 50 ಕೆಜಿ ಸಿಡಿತಲೆ ಹೊಂದಿದ್ದ ಇರಾನಿನ ಫಲಾಕ್ 1 ರಾಕೆಟ್ ಮೂಲಕ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಮಾದರಿಯನ್ನು ಹಿಜ್ಬುಲ್ಲಾ ಮಾತ್ರ ಬಳಸುತ್ತಾರೆ ಎಂದು ಅವರು ಹೇಳಿದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published On - 10:23 am, Sun, 28 July 24