Israel Gaza War: ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ, ಮಕ್ಕಳು ಸೇರಿ 35 ಮಂದಿ ಸಾವು
ಇಸ್ರೇಲ್ ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಹಮಾಸ್ ರಾಕೆಟ್ ದಾಳಿಯ ನಂತರ, ಇಸ್ರೇಲ್ ರಾಫಾ ಮೇಲೆ ದೊಡ್ಡ ವೈಮಾನಿಕ ದಾಳಿ ನಡೆಸಿದೆ.ಇಸ್ರೇಲಿ ವಾಯುಪಡೆಯು ದೊಡ್ಡ ಭಯೋತ್ಪಾದಕರು ಇರುವ ಭಯೋತ್ಪಾದಕ ಸಂಘಟನೆ ಹಮಾಸ್‌ನ ರಫಾ ಸಂಕೀರ್ಣವನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ.
ಇಸ್ರೇಲ್(Israel) ಗಾಜಾ(Gaza)ದ ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಕ್ಕಳು ಸೇರಿ 35 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನಿಯನ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಹಮಾಸ್ ರಾಕೆಟ್ ದಾಳಿಯ ನಂತರ, ಇಸ್ರೇಲ್ ರಾಫಾ ಮೇಲೆ ದೊಡ್ಡ ವೈಮಾನಿಕ ದಾಳಿ ನಡೆಸಿದೆ.ಇಸ್ರೇಲಿ ವಾಯುಪಡೆಯು ದೊಡ್ಡ ಭಯೋತ್ಪಾದಕರು ಇರುವ ಭಯೋತ್ಪಾದಕ ಸಂಘಟನೆ ಹಮಾಸ್‌ನ ರಫಾ ಸಂಕೀರ್ಣವನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ.
ದಾಳಿಯಲ್ಲಿ ವೆಸ್ಟ್ ಬ್ಯಾಂಕ್ ಪ್ರಧಾನ ಕಚೇರಿಯ ಮುಖ್ಯಸ್ಥ ಯಾಸಿನ್ ರಬಿಯಾ ಮತ್ತು ಇನ್ನೊಬ್ಬ ಭಯೋತ್ಪಾದಕ ಕಮಾಂಡರ್ ಖಾಲಿದ್ ನಜ್ಜಾರ್ ಹತರಾಗಿದ್ದಾರೆ.
ಇಸ್ರೇಲಿ ಬಾಂಬ್ ದಾಳಿಯಲ್ಲಿ 35 ಪ್ಯಾಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ಹೇಳಿದೆ. ಶೆಲ್ ದಾಳಿಯ ಪರಿಣಾಮವಾಗಿ ಈ ಪ್ರದೇಶದಲ್ಲಿ ಹಲವಾರು ನಾಗರಿಕರು ಗಾಯಗೊಂಡಿದ್ದಾರೆ.
ಇಸ್ರೇಲ್ ವೈಮಾನಿಕ ದಾಳಿಯ ನಂತರ ತನ್ನ ಕಮಾಂಡರ್‌ಗಳ ಸಾವಿನಿಂದ ಹಮಾಸ್ ಆಘಾತಕ್ಕೊಳಗಾಗಿದೆ. ರಫಾದಲ್ಲಿ ಇಸ್ರೇಲ್ ಸೇನೆಯ ವಿರುದ್ಧ ಪ್ರತಿಭಟಿಸುವಂತೆ ಹಮಾಸ್ ಪ್ಯಾಲೆಸ್ತೀನ್ ಜನರಿಗೆ ಮನವಿ ಮಾಡಿದೆ.
ಮತ್ತಷ್ಟು ಓದಿ: Israel Iran War: ಇಸ್ರೇಲ್ ಮೇಲೆ ಇರಾನ್ನಿಂದ ಕ್ಷಿಪಣಿ ದಾಳಿ
ಹಮಾಸ್ ಅಧಿಕಾರಿಯೊಬ್ಬರು ಈ ದಾಳಿಗೆ ಇಸ್ರೇಲ್ ಹಾಗೂ ಅಮೆರಿಕ ಎರಡನ್ನೂ ದೂಷಿಸಿದ್ದಾರೆ. ಇದು ನರಮೇಧ ಎಂದು ಆರೋಪಿಸಿದ್ದಾರೆ. ಅಮೆರಿಕದ ಶಸ್ತ್ರಾಸ್ತ್ರಗಳ ನೆರವಿನಿಂದ ಇಸ್ರೇಲ್ ಸೇನೆ ಈಗ ರಫಾದಲ್ಲಿ ನರಮೇಧ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ವಾರದ ಹಿಂದೆ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿತ್ತು ಇಸ್ರೇಲ್ನ ಟೆಲ್ ಅವಿವ್ ನಗರದ ಮೇಲೆ ಬೃಹತ್ ಕ್ಷಿಪಣಿ ದಾಳಿ ಮಾಡಿರುವುದಾಗಿ ಹಮಾಸ್ ಬೆಂಬಲಿತ ಅಲ್ ಖಾಸಮ್ ಸಂಘಟನೆ ಹೇಳಿದೆ. ನಗರದ ಮೇಲೆ ರಾಕೆಟ್ ದಾಳಿ ನಡೆದಿರುವ ಕುರಿತಾಗಿ ಸೈರನ್ ಕೇಳಿ ಬಂದಿದೆ ಎಂದು ಇಸ್ರೇಲ್ ಸೇನೆ ಒಪ್ಪಿಕೊಂಡಿದೆ.
ಗಾಜಾ ಪಟ್ಟಿಯಿಂದ ಈ ರಾಕೆಟ್ಗಳನ್ನು ಹಾರಿಸಲಾಗಿದ್ದು, 4 ತಿಂಗಳ ಬಳಿಕ ಟೆಲ್ ಅವಿವ್ ನಗರದಲ್ಲಿ ಸೈರನ್ ಶಬ್ದ ಕೇಳಿ ಬಂದಿತ್ತು. ಹೀಗಾಗಿ ಮತ್ತೆ ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ