ಹಿಜ್ಬುಲ್ಲಾ ನೆಲೆಗಳ ಗುರಿಯಾಗಿಸಿಕೊಂಡು ಇಸ್ರೇಲ್​ ದಾಳಿ

ಇಸ್ರೇಲ್​ ದಕ್ಷಿಣ ಲೆಬನಾನ್​ನಲ್ಲಿ ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದೀಗ ಇಸ್ರೇಲ್​ ಹಿಜ್ಮುಲ್ಲಾ ನೆಲೆಗಳ ಮೇಲೆ ದಾಳಿ ನಡೆಸಿದೆ, ಇಸ್ರೇಲ್​ನ ಭದ್ರತಾ ಪಡೆಯ ಯುದ್ಧ ವಿಮಾನಗಳು ದಕ್ಷಿಣ ಲೆಬನಾನ್​ನ ಹಿಜ್ಬುಲ್ಲಾಗಳ 40 ನೆಲೆಗಳ ಮೇಲೆ ದಾಳಿ ನಡೆಸಿದೆ.

ಹಿಜ್ಬುಲ್ಲಾ ನೆಲೆಗಳ ಗುರಿಯಾಗಿಸಿಕೊಂಡು ಇಸ್ರೇಲ್​ ದಾಳಿ
Image Credit source: Mint
Follow us
|

Updated on: Apr 25, 2024 | 8:37 AM

ಜೆರುಸಲೇಮ್, ಏಪ್ರಿಲ್​ 25: ದಕ್ಷಿಣ ಲೆಬನಾನ್​ನಲ್ಲಿರುವ ಹಿಜ್ಮುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್(Israel)​ ದಾಳಿ ನಡೆಸಿದೆ. ಇತ್ತೀಚೆಗಷ್ಟೇ ಇರಾನ್ ಇಸ್ರೇಲ್​ ಮೇಲೆ ಕ್ಷಿಪಣಿಗಳ ದಾಳಿ ನಡೆಸಿತ್ತು. ಇದಾದ ಬಳಿಕ ಇಸ್ರೇಲ್​ ಕೂಡಲ ಇರಾನ್​ ಮೇಲೆ ಪ್ರತಿದಾಳಿ ನಡೆಸಿತ್ತು. ಇದೀಗ ಇಸ್ರೇಲ್​ ಹಿಜ್ಮುಲ್ಲಾ ನೆಲೆಗಳ ಮೇಲೆ ದಾಳಿ ನಡೆಸಿದೆ, ಇಸ್ರೇಲ್​ನ ಭದ್ರತಾ ಪಡೆಯ ಯುದ್ಧ ವಿಮಾನಗಳು ದಕ್ಷಿಣ ಲೆಬನಾನ್​ನ ಹಿಜ್ಬುಲ್ಲಾಗಳ 40 ನೆಲೆಗಳ ಮೇಲೆ ದಾಳಿ ನಡೆಸಿದೆ.

ಇದರ ನಡುವೆ ಇಸ್ರೇಲ್​ ಗಡಿ ಸಮೀಪವಿರುವ ಗ್ರಾಮವೊಂದರ ಮೇಲೆ 20ಕ್ಕೂ ಅಧಿಕ ಕ್ಷಿಪಣಿಗಳ ದಾಳಿ ನಡೆಸಲಾಗಿದೆ ಎಂದು ಹಿಜ್ಬುಲ್ಲಾ ಮೂಲಗಳು ತಿಳಿಸಿವೆ.ದಕ್ಷಿಣ ಲೆಬನಾನ್‌ನಲ್ಲಿ ಮತ್ತು ಲೆಬನಾನ್‌ನ ಇತರ ಭಾಗಗಳಲ್ಲಿ ಇಸ್ರೇಲಿ ಮಿಲಿಟರಿ ಪಡೆಗಳು ನಿರಂತರ ಆಕ್ರಮಣ ಮಾಡುತ್ತಿವೆ.

ದಕ್ಷಿಣ ಲೆಬನಾನ್‌ನಲ್ಲಿ ಅರ್ಧದಷ್ಟು ಹಿಜ್ಬುಲ್ಲಾದ ಕಮಾಂಡರ್‌ಗಳನ್ನು ಇಸ್ರೇಲಿ ಪಡೆಗಳು ಹತ್ಯೆ ಮಾಡಿದ್ದಾರೆ. ಇಸ್ರೇಲಿ ಪಡೆಗಳು ಅಕ್ಟೋಬರ್​ನಿಂದ ಲೆಬನಾನ್​ನಲ್ಲಿ ಸುಮಾರು 250 ಹಿಜ್ಬುಲ್ಲಾ ಹೋರಾಟಗಾರರನ್ನು ಕೊಂದಿದ್ದಾರೆ. ನೆರೆಯ ಸಿರಿಯಾದಲ್ಲಿ ಇಸ್ರೇಲಿ ದಾಳಿಗಳಲ್ಲಿ ಇನ್ನೂ 30 ಮಂದಿ ಸಾವನ್ನಪ್ಪಿದ್ದಾರೆ. ಲೆಬನಾನ್‌ನಲ್ಲಿ 70 ಕ್ಕೂ ಹೆಚ್ಚು ನಾಗರಿಕರು ಕೊಲ್ಲಲ್ಪಟ್ಟರು ಮತ್ತು ಇಸ್ರೇಲ್‌ನಲ್ಲಿ ಸೈನಿಕರು ಮತ್ತು ನಾಗರಿಕರು ಸೇರಿದಂತೆ 18 ಜನರು ಕೊಲ್ಲಲ್ಪಟ್ಟಿದ್ದಾರೆ.

ಮತ್ತಷ್ಟು ಓದಿ: ಪಾಕಿಸ್ತಾನದ ಕ್ಷಿಪಣಿ ಯೋಜನೆಗೆ ಸಹಾಯವಾದ ಚೀನಾ, ಬೆಲಾರಸ್ ಕಂಪನಿಗಳಿಗೆ ಅಮೆರಿಕದ ನಿಷೇಧ

ಇರಾನ್ ಹಾಗೂ ಇಸ್ರೇಲ್ ಉದ್ವಿಗ್ನತೆಯ ನಡುವೆ ಉತ್ತರ ಇಸ್ರೇಲ್​ನಲ್ಲಿ ಸೇನಾ ಕೇಂದ್ರ ಕಚೇರಿಯನ್ನು ಗುರಿಯಾಗಿಸಿ ಸೋಮವಾರ ರಾತ್ರಿ ಕ್ಷಿಪಣಿಗಳ ಮಳೆಗರೆಯಲಾಗಿದೆ ಎಂದು ಹಿಜ್ಬುಲ್ಲಾ ಮೂಲಗಳು ತಿಳಿಸಿದ್ದವು. ಬೆಲನಾನ್​ನಲ್ಲಿ ನೆಲೆ ಹೊಂದಿರುವ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗಂಪಿಗೆ ಇರಾನ್ ಆರ್ಥಿಕ ಮತ್ತು ಶಸ್ತ್ರಾಸ್ತ್ರ ನೆರವು ಒದಗಿಸುತ್ತಿದೆ.

ಎಯಿನ್ ಝೆಯಿಟಿಮ್ ಸೇನಾ ನೆಲೆಯ 3ನೇ ದಳದ ಪ್ರಧಾನ ಕಚೇರಿ ಮೇಲೆ 82 ಎಂಎಂ ಮತ್ತು 132 ಎಂಎಂ ಕಟ್ಯುಷಾ ರಾಕೆಟ್​ಗಳಿಂದ ದಾಳಿ ನಡೆಸಲಾಗಿದೆ. ಲೆಬನಾನ್ ಕಡೆಯಿಂದ ಸುಮಾರು 35 ರಾಕೆಟ್​ಗಳನ್ನ ಉಡಾಯಿಸಲಾಗಿದೆ. ರಾಕೆಟ್​ ಹಾರಿಬಂದ ದಕ್ಷಿಣ ಲೆಬನಾನ್​ನ ಹಿಜ್ಬುಲ್ಲಾ ನೆಲೆಯನ್ನು ಗುರಿತಿಸಿ ಪ್ರತಿದಾಳಿ ನಡೆಸಲಾಗಿದ್ದು ಇಬ್ಬರು ಹಿಜ್ಬುಲ್ಲಾ ಸದಸ್ಯರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಹೇಳಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ