ಚೀನಾದಲ್ಲಿ ಅಗ್ನಿ ದುರಂತ; ಲಾಜಿಸ್ಟಿಕ್​ ಗೋದಾಮಿಗೆ ಹೊತ್ತಿಕೊಂಡ ಬೆಂಕಿಗೆ 14 ಜನ ಬಲಿ, 26ಕ್ಕೂ ಹೆಚ್ಚು ಮಂದಿಗೆ ಗಾಯ

| Updated By: Lakshmi Hegde

Updated on: Jul 25, 2021 | 11:51 AM

ಅಗ್ನಿ ದುರಂತದ, ರಕ್ಷಣಾ ಕಾರ್ಯಾಚರಣೆಯ ಅನೇಕ ಫೋಟೋಗಳು ಚೀನಾ ಮಾಧ್ಯಮಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿವೆ. ಆದರೆ ಈ ಲಾಜಿಸ್ಟಿಕ್​ ಗೋದಾಮಿಗೆ ಬೆಂಕಿ ತಗುಲಲು ಕಾರಣವೇನೆಂಬುದಿನ್ನೂ ಸ್ಪಷ್ಟವಾಗಿಲ್ಲ.

ಚೀನಾದಲ್ಲಿ ಅಗ್ನಿ ದುರಂತ; ಲಾಜಿಸ್ಟಿಕ್​ ಗೋದಾಮಿಗೆ ಹೊತ್ತಿಕೊಂಡ ಬೆಂಕಿಗೆ 14 ಜನ ಬಲಿ, 26ಕ್ಕೂ ಹೆಚ್ಚು ಮಂದಿಗೆ ಗಾಯ
ಚೀನಾದ ಬೆಂಕಿ ದುರಂತದ ಚಿತ್ರ
Follow us on

ಬೀಜಿಂಗ್​: ಚೀನಾದ ಮಧ್ಯಪ್ರಾಂತ್ಯ ಹೆನಾನ್​ ಪ್ರವಾಹಕ್ಕೆ ತತ್ತರಿಸುತ್ತಿದ್ದರೆ ಇತ್ತ ಈಶಾನ್ಯ ಚೀನಾದಲ್ಲಿ ಬಹುದೊಡ್ಡ ಬೆಂಕಿ ದುರಂತ (Fire) ನಡೆದಿದೆ. ಗೋದಾಮಿನಲ್ಲಿ ಬೆಂಕಿ  ಹೊತ್ತಿಕೊಂಡು 14 ಜನ ಮೃತಪಟ್ಟಿದ್ದಾರೆ..ಸುಮಾರು 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಚೀನಾ (China)ದ ಈಶಾನ್ಯ ಪ್ರಾಂತ್ಯವಾದ ಜಿಲಿನ್​ನ ರಾಜಧಾನಿ ಚಂಗ್​ಚುನ್​​ನಲ್ಲಿರುವ ಲಾಜಿಸ್ಟಿಕ್​ ಗೋದಾಮಿಗೆ ಶನಿವಾರ ಬೆಂಕಿ ತಗುಲಿತ್ತು. ಕೂಡಲೇ ಅಗ್ನಿಶಾಮಕ ದಳದವರು ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರೂ 14 ಜನರ ಜೀವ ಬಲಿಯಾಗಿದೆ. ಅನೇಕರನ್ನು ರಕ್ಷಣೆ ಮಾಡಲಾಗಿದೆ. ಗಾಯಗೊಂಡವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಗ್ನಿ ದುರಂತದ, ರಕ್ಷಣಾ ಕಾರ್ಯಾಚರಣೆಯ ಅನೇಕ ಫೋಟೋಗಳು ಚೀನಾ ಮಾಧ್ಯಮಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿವೆ. ಆದರೆ ಈ ಲಾಜಿಸ್ಟಿಕ್​ ಗೋದಾಮಿಗೆ ಬೆಂಕಿ ತಗುಲಲು ಕಾರಣವೇನೆಂಬುದಿನ್ನೂ ಸ್ಪಷ್ಟವಾಗಿಲ್ಲ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ. ಚೀನಾದಲ್ಲಿ ಬೆಂಕಿ ದುರಂತಗಳು ಸಾಮಾನ್ಯ. ಜೂನ್​​ನಲ್ಲಿ ಹೆನಾನ್​ ಪ್ರಾಂತ್ಯದಲ್ಲಿರುವ ಮಾರ್ಶಲ್​ ಆರ್ಟ್​ ಬೋರ್ಡಿಂಗ್​ ಶಾಲೆಯಲ್ಲಿ ಬೆಂಕಿಬಿದ್ದು, 18 ಮಂದಿ ಸಾವನ್ನಪ್ಪಿದ್ದರು. 2010ರಲ್ಲಿ ಶಾಂಘೈನ 28 ಅಂತಸ್ತುಗಳ ವಸತಿ ಕಟ್ಟಡಕ್ಕೆ ಬೆಂಕಿಬಿದ್ದು 58 ಮಂದಿ ಮೃತಪಟ್ಟಿದ್ದನ್ನೂ ಮರೆಯಲಾಗದು.

ಇದನ್ನೂ ಓದಿ: ಸೀಕ್ರೆಟ್​ ಆಗಿ ನಡೆಯಿತು ಬಿಗ್​ ಬಾಸ್​ ಫಿನಾಲೆ; ಫೋಟೋದಿಂದ ಬಯಲಾಯ್ತು ವಿನ್ನರ್​ ಹೆಸರು

‘ಬಿಜೆಪಿಯೆಂದರೆ ಬ್ಯುಸಿನೆಸ್ ಜನತಾ ಪಾರ್ಟಿ’: ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪ

14 Dead 12 Injured In Logistics warehouse fire in China