ಪೆಗಾಸಸ್​ನಂಥ ತಂತ್ರಜ್ಞಾನ ಇರುವುದರಿಂದಲೇ ಲಕ್ಷಾಂತರ ಜನರು ರಸ್ತೆಗಳ ಮೇಲೆ ಓಡಾಡುತ್ತಿದ್ದಾರೆ, ರಾತ್ರಿ ನೆಮ್ಮದಿಯಾಗಿ ಮಲಗುತ್ತಿದ್ದಾರೆ: ಎನ್​ಎಸ್​ಒ

ವಿಶ್ವದ ಹಲವು ದೇಶಗಳಲ್ಲಿ ಕಾನೂನು ಜಾರಿ ಹೊಣೆ ಹೊತ್ತ ಸರ್ಕಾರಿ ಇಲಾಖೆಗಳಿಗೆ ಪೆಗಾಸಸ್​ನಂಥ ತಂತ್ರಜ್ಞಾನದ ನೆರವು ಅತ್ಯಗತ್ಯ ಎಂದು ಎನ್​ಎಸ್​ಒ ಹೇಳಿದೆ.

ಪೆಗಾಸಸ್​ನಂಥ ತಂತ್ರಜ್ಞಾನ ಇರುವುದರಿಂದಲೇ ಲಕ್ಷಾಂತರ ಜನರು ರಸ್ತೆಗಳ ಮೇಲೆ ಓಡಾಡುತ್ತಿದ್ದಾರೆ, ರಾತ್ರಿ ನೆಮ್ಮದಿಯಾಗಿ ಮಲಗುತ್ತಿದ್ದಾರೆ: ಎನ್​ಎಸ್​ಒ
ಪೆಗಾಸಸ್ ಸ್ಪೈವೇರ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 24, 2021 | 10:42 PM

ಜೆರುಸಲೆಂ: ಪೆಗಾಸಸ್​ನಂಥ ಕಣ್ಗಾವಲು ತಂತ್ರಾಂಶಗಳು ಲಭ್ಯವಿರುವ ಕಾರಣದಿಂದಲೇ ಲಕ್ಷಾಂತರ ಜನರು ಸುರಕ್ಷಿತರಾಗಿ ರಸ್ತೆಗಳ ಓಡಾಡುತ್ತಿದ್ದಾರೆ, ರಾತ್ರಿ ಹೊತ್ತು ನೆಮ್ಮದಿಯಾಗಿ ಮಲಗುತ್ತಿದ್ದಾರೆ ಎಂದು ಎನ್​ಎಸ್​ಒ ಗ್ರೂಪ್​ ಪೆಗಾಸಸ್ ಕಣ್ಗಾವಲು ತಂತ್ರಾಶವನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದೆ. ವಿಶ್ವದ ಹಲವು ದೇಶಗಳಲ್ಲಿ ಕಾನೂನು ಜಾರಿ ಹೊಣೆ ಹೊತ್ತ ಸರ್ಕಾರಿ ಇಲಾಖೆಗಳಿಗೆ ಪೆಗಾಸಸ್​ನಂಥ ತಂತ್ರಜ್ಞಾನದ ನೆರವು ಅತ್ಯಗತ್ಯ ಎಂದು ಎನ್​ಎಸ್​ಒ ಹೇಳಿದೆ.

ನಾವು ತಂತ್ರಜ್ಞಾನ ಒದಗಿಸುತ್ತೇವೆ ಅಷ್ಟೇ. ಅದನ್ನು ನಿರ್ವಹಿಸುವುದಿಲ್ಲ. ನಾವು ಒದಗಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ಸಂಬಂಧಿಸಿದ ಸಂಸ್ಥೆಗಳು ಮುಂದಿನ ಕ್ರಮ ಜರುಗಿಸುತ್ತವೆ. ನಮ್ಮಿಂದ ತಂತ್ರಾಂಶ ಪಡೆದ ಸಂಸ್ಥೆಗಳು ಸಂಗ್ರಹಿಸುವ ದತ್ತಾಂಶವೂ ನಮ್ಮ ಬಳಿ ಇರುವುದಿಲ್ಲ ಎಂದು ಕಂಪನಿ ಹೇಳಿಕೆ ನೀಡಿದೆ.

ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು, ರಾಜಕಾರಿಣಿಗಳು ಮತ್ತು ಇತರರ ಮೇಲೆ ಭಾರತ ಸೇರದಿಂತೆ ಹಲವು ದೇಶಗಳಲ್ಲಿ ಪೆಗಾಸಸ್ ಸಾಫ್ಟ್​ವೇರ್ ಬಳಸಿ ಗೂಢಚರ್ಯೆ ನಡೆಸಲಾಯಿತು ಎಂಬ ಆರೋಪಗಳು ಕೇಳಿ ಬಂದಿದ್ದವು. ಖಾಸಗಿ ಬದುಕಿನ ಬಗ್ಗೆಯೂ ಇದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿತ್ತು.

ಪೆಗಾಸಸ್​ನಂಥ ಸ್ಮಾರ್ಟ್​ ತಂತ್ರಜ್ಞಾನಗಳು ಅಪರಾಧ ಕೃತ್ಯಗಳನ್ನು ತಡೆಯಲು, ತನಿಖೆ ನಡೆಸಲು, ಭಯೋತ್ಪಾದನಾ ಸಂಚುಗಳನ್ನು ಪತ್ತೆಹಚ್ಚಲು ಇಂಥ ನೆರವಾಗುತ್ತವೆ. ತುದಿಯಿಂದ ತುದಿಗೆ ಗೂಢಲಿಪಿಯ ರಕ್ಷಣೆ ಪಡೆದಿರುವ ಆ್ಯಪ್​ಗಳ ಛತ್ರಿಯಡಿ ನಡೆಯುವ ಯೋಜನೆಗಳನ್ನು ಅರ್ಥೈಸಲು ಇಂಥ ತಂತ್ರಜ್ಞಾನಗಳು ಅತ್ಯಗತ್ಯ ಎಂದು ಎನ್​ಎಸ್​ಒ ಹೇಳಿದೆ.

ವಿಶ್ವದ ಹಲವು ಸೈಬರ್​ ಇಂಟೆಲಿಜೆನ್ಸ್​ ಕಂಪನಿಗಳಂತೆ ಎನ್​ಎಸ್​ಒ ಸಹ ಸರ್ಕಾರಗಳಿಗೆ ಹಲವು ಸೈಬರ್ ಇಂಟೆಲಿಜೆನ್ಸ್​ ಸಾಧನಗಳನ್ನು ಒದಗಿಸುತ್ತದೆ. ಏಕೆಂದರೆ ವಿಶ್ವದ ಹಲವು ದೇಶಗಳಲ್ಲಿ ಇನ್​ಸ್ಟಂಟ್ ಮೆಸೇಜಿಂಗ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿರ್ವಹಿಸುವ ಯಾವುದೇ ಶಾಸನಬದ್ಧ ಸಾಧನಗಳು ಇನ್ನೂ ರೂಪುಗೊಂಡಿಲ್ಲ ಎಂದು ಕಂಪನಿಯು ಹೇಳಿದೆ.

ಎನ್​ಎಸ್​ಒ ಬಳಕೆಯ ಕುರಿತು ವಿಶ್ವದ ಹಲವು ದೇಶಗಳಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಎನ್​ಎಸ್​ಒ ವಕ್ತಾರರು, ನಾವು ರೂಪಿಸಿರುವ ತಂತ್ರಜ್ಞಾನವನ್ನು ಸಾರ್ವಭೌಮ ಸರ್ಕಾರಗಳಿಗೆ ಒದಗಿಸುತ್ತೇವೆ. ಸಂಗ್ರಹವಾಗುವ ದತ್ತಾಂಶವನ್ನು ನಾನು ಇಣುಕಿ ನೋಡುವುದಿಲ್ಲ. ಸುರಕ್ಷಿತ ವಿಶ್ವ ನಿರ್ಮಾಣಕ್ಕೆ ನಮ್ಮದೇ ಆದ ರೀತಿಯಲ್ಲಿ ನಾವು ನೆರವಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

(Thanks to technologies like Pegasus Millions sleep well at night walk safely on streets says  NSO)

ಇದನ್ನೂ ಓದಿ: Parliament Session 2021: ಮುಂಗಾರು ಅಧಿವೇಶನದಲ್ಲಿ ಪೆಗಾಸಸ್ ವಿರುದ್ಧ ಗದ್ದಲ; ಲೋಕಸಭಾ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಇದನ್ನೂ ಓದಿ: Pegasus row: ಪೆಗಾಸಸ್ ವಿವಾದ ಬಗ್ಗೆ ಪ್ರತಿಭಟನೆ ನಡೆಸಿದ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಪೊಲೀಸರ ವಶಕ್ಕೆ