ತಾಂತ್ರಿಕ ದೋಷದಿಂದ ಮನೆ ಮೇಲೆ ಬಿದ್ದ ವಿಮಾನ, ಯಾರೂ ಬದುಕುಳಿಯಲಿಲ್ಲ

|

Updated on: Nov 19, 2020 | 12:06 AM

ಕಾಂಗೋ: ನವೆಂಬರ್ 24ರಂದು ಆಫ್ರಿಕಾ ಖಂಡದ ಕಾಂಗೋದಲ್ಲಿ ಲಘು ವಿಮಾನ ಪತನಗೊಂಡು ಕನಿಷ್ಠ 23 ಮಂದಿ ಮೃತಪಟ್ಟಿದ್ದರು. ಗೋಮಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಮನೆಗಳಿಗೆ ವಿಮಾನ ಡಿಕ್ಕಿಯೊಡೆದು ಈ ಅವಘಡ ಸಂಭವಿಸಿತ್ತು. ಮೂಲಗಳ ಪ್ರಕಾರ ವಿಮಾನದಲ್ಲಿ 17 ಪ್ರಯಾಣಿಕರು ಮತ್ತು ಕೆಲ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅವಘಡದಲ್ಲಿ ವಿಮಾನ ಸಿಬ್ಬಂದಿ ಸೇರಿದಂತೆ ಯಾವ ಪ್ರಯಾಣಿಕರು ಬದುಕುಳಿದಿಲ್ಲ ಎಂದು ವರದಿಯಾಗಿದೆ. ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್​ವೊಂದರಲ್ಲಿ ಸ್ಫೋಟದ […]

ತಾಂತ್ರಿಕ ದೋಷದಿಂದ ಮನೆ ಮೇಲೆ ಬಿದ್ದ ವಿಮಾನ, ಯಾರೂ ಬದುಕುಳಿಯಲಿಲ್ಲ
Follow us on

ಕಾಂಗೋ: ನವೆಂಬರ್ 24ರಂದು ಆಫ್ರಿಕಾ ಖಂಡದ ಕಾಂಗೋದಲ್ಲಿ ಲಘು ವಿಮಾನ ಪತನಗೊಂಡು ಕನಿಷ್ಠ 23 ಮಂದಿ ಮೃತಪಟ್ಟಿದ್ದರು. ಗೋಮಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಮನೆಗಳಿಗೆ ವಿಮಾನ ಡಿಕ್ಕಿಯೊಡೆದು ಈ ಅವಘಡ ಸಂಭವಿಸಿತ್ತು.

ಮೂಲಗಳ ಪ್ರಕಾರ ವಿಮಾನದಲ್ಲಿ 17 ಪ್ರಯಾಣಿಕರು ಮತ್ತು ಕೆಲ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅವಘಡದಲ್ಲಿ ವಿಮಾನ ಸಿಬ್ಬಂದಿ ಸೇರಿದಂತೆ ಯಾವ ಪ್ರಯಾಣಿಕರು ಬದುಕುಳಿದಿಲ್ಲ ಎಂದು ವರದಿಯಾಗಿದೆ.

ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್​ವೊಂದರಲ್ಲಿ ಸ್ಫೋಟದ ಶಬ್ಧ ಕೇಳಿಸಿದೆ. ತಕ್ಷಣ ಪೈಲೆಟ್​ ವಿಮಾನವನ್ನು ಆರಂಭದ ಸ್ಥಳಕ್ಕೆ ಮರುಳಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

Published On - 10:12 am, Tue, 31 December 19