ಕಂಡ ಕಂಡಲ್ಲಿ ಪಾನ್ ಮಸಾಲ ಉಗುಳಿದರೆ 12 ಸಾವಿರ ರೂ. ದಂಡ
ಲಂಡನ್‌ನಲ್ಲಿ ಭಾರತೀಯರಿಂದ ನಡೆಯುತ್ತಿರುವ ಪಾನ್ ಮಸಾಲಾ ಉಗುಳುವಿಕೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಬೀದಿಗಳು ಮತ್ತು ಸಾರ್ವಜನಿಕ ಸ್ಥಳಗಳು ಕೆಂಪು ಕಲೆಗಳಿಂದ ತುಂಬಿದ್ದು, ಸ್ವಚ್ಛತೆಗೆ ಸಾವಿರಾರು ಪೌಂಡ್‌ಗಳು ವ್ಯಯವಾಗುತ್ತಿವೆ. ಇದನ್ನು ತಡೆಗಟ್ಟಲು ಸ್ಥಳೀಯರು 12,000ರೂ. ವರೆಗೆ ದಂಡ ವಿಧಿಸುವಂತೆ ಒತ್ತಾಯಿಸಿದ್ದಾರೆ. ಬ್ರೆಂಟ್ ಕೌನ್ಸಿಲ್ ಈಗಾಗಲೇ 12,000 ರೂ. ದಂಡ ವಿಧಿಸುತ್ತಿದೆ. ಈ ಅಶಿಸ್ತು ಲಂಡನ್‌ನ ಸಾರ್ವಜನಿಕ ನೈರ್ಮಲ್ಯಕ್ಕೆ ದೊಡ್ಡ ಸವಾಲಾಗಿದೆ.

ಲಂಡನ್, ಜನವರಿ 07: ಭಾರತದ ಬಹುತೇಕ ಬೀದಿಗಳಲ್ಲಿ ಅಲ್ಲಲ್ಲಿ ಪಾನ್ ಮಸಾಲ ಉಗುಳಿರುವ ಕಲೆಗಳು ಕಾಣುತ್ತವೆ. ಆದರೆ ನಮ್ಮ ಜನರು ಲಂಡನ್ಗೆ ಹೋಗಿ ಅಲ್ಲಿಯೂ ಅದೇ ಕೆಲಸ ಮಾಡುತ್ತಿದ್ದು, ಅಲ್ಲಿನ ಜನರು ಬೇಸರ ವ್ಯಕ್ತಪಡಿಸಿದ್ದಾರೆ, ಅಷ್ಟೇ ಅಲ್ಲದೆ 12 ಸಾವಿರ ರೂ. ವರೆಗೆ ದಂಡ(Penalty) ವಿದಿಸುವಂತೆ ಮನವಿ ಮಾಡಿದ್ದಾರೆ.
ಅವರು ಹಂಚಿಕೊಂಡಿರುವ ವಿಡಿಯೋ ಹಾಗೂ ಫೋಟೊದಲ್ಲಿ ಡಸ್ಟ್ಬಿನ್ ಡಬ್ಬಿಯಿಂದ ಹಿಡಿದು ಪಾದಚಾರಿ ಮಾರ್ಗಗಳು, ಗೋಡೆಗಳು, ರಸ್ತೆಯ ಪಕ್ಕದಲ್ಲೆಲ್ಲಾ ಪಾನ್ ಮಸಾಲವನ್ನು ಉಗುಳಿರುವುದನ್ನು ಕಾಣಬಹುದು. ಅವುಗಳನ್ನು ಸ್ವಚ್ಛಗೊಳಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಲಾಗುತ್ತಿದೆ. ಲಂಡನ್‌ನಲ್ಲಿ ವಾಸಿಸುತ್ತಿರುವ ಭಾರತೀಯರೊಬ್ಬರು ಹ್ಯಾರೋ ಮತ್ತು ವೆಂಬ್ಲಿಯ ಹಲವಾರು ಪ್ರದೇಶಗಳ ಈ ಪರಿಸ್ಥಿತಿ ಕುರಿತು ಮಾಹಿತಿ ಹಂಚಿಕೊಂಡಿದ್ದರು.
ಜನರು ಪಾನ್ ಉಗುಳುವುದರಿಂದಾಗಿ ರಸ್ತೆಗಳು ಕೆಂಪು ಬಣ್ಣಕ್ಕೆ ತಿರುಗಿವೆ. ಈ ಪ್ರದೇಶಗಳನ್ನು ಸ್ವಚ್ಛವಾಗಿಡುವ ಅಗತ್ಯತೆಯ ಬಗ್ಗೆ ಮಾತನಾಡಿದ್ದರು. ಸ್ಥಳೀಯ ಪಾನ್ ಅಂಗಡಿ ಮಾಲೀಕರು ಸಹ ಕಳವಳ ವ್ಯಕ್ತಪಡಿಸಿದ್ದು, ಕೆಲವು ಗ್ರಾಹಕರು ಅಜಾಗರೂಕತೆಯಿಂದ ಉಗುಳುವುದು ತಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಮತ್ತಷ್ಟು ಓದಿ: ಒಂದೇ ಬೈಕ್‌ನಲ್ಲಿ 5 ಜನ ಸವಾರಿ! 31 ಸಾವಿರ ರೂ. ದಂಡ ಹಾಕಿದ ಪೊಲೀಸರು
ಮೊದಲ ಅಪರಾಧಕ್ಕೆ 1000 ಪೌಂಡ್‌ಗಳು ಮತ್ತು ಎರಡನೇ ಅಪರಾಧಕ್ಕೆ 5000 ಪೌಂಡ್‌ಗಳ ದಂಡ ವಿಧಿಸಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಮೂರನೆಯದು 10 ಸಾವಿರ + 1 ವಾರ ಜೈಲು ಶಿಕ್ಷೆ, ಇಂಗ್ಲೆಂಡ್ನಲ್ಲಿ ಇದು ಜಾರಿಯಾದರೆ ಮುಂದೊಂದು ದಿನ ಭಾರತದಲ್ಲೂ ಇಂಥಾ ನಿಯಮಗಳನ್ನು ಜಾರಿಗೆ ತರಬಹುದು. ಬ್ರೆಂಟ್ ಕೌನ್ಸಿಲ್ ಈಗ ಜನರಿಗೆ ಕಲೆಗಳಿಗಾಗಿ ನೂರು ಪೌಂಡ್ ದಂಡ ವಿಧಿಸುತ್ತಿದೆ.
ತೆರಿಗೆದಾರರಾದ ನಾವು ಈ ಕಲೆಗಳನ್ನು ತೆಗೆದುಹಾಕಲು ಸಾವಿರಾರು ಪೌಂಡ್ ಹಣವನ್ನು ಪಾವತಿಸುತ್ತಿದ್ದೇವೆ. ಗುಟ್ಕಾ-ಪಾನ್ ಮಸಾಲ ರಸ್ತೆಗಳಿಗೆ ಸಾಂಕ್ರಾಮಿಕ ರೋಗದಂತಾಗಿದೆ. ಬಾಲಿವುಡ್ ನಟರು ಅಂತಹ ಉತ್ಪನ್ನಗಳನ್ನು ಜಾಹೀರಾತು ಮಾಡಲು ನಾಚಿಕೆಪಡಬೇಕು ಎನ್ನು ಶೀರ್ಷಿಕೆಯಡಿ ಪೋಸ್ಟ್ ಮಾಡಿದ್ದಾರೆ.
ಉಗುಳುವುದು ಸಾಮಾನ್ಯವಾಗಿ ಕಂಡುಬರುವ ಮೂರು ಪ್ರದೇಶಗಳಲ್ಲಿ ಅಧಿಕಾರಿಗಳು ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ ಮತ್ತು ಈ ಸ್ಥಳಗಳಲ್ಲಿ ಅಧಿಕಾರಿಗಳು ಗಸ್ತು ತಿರುಗಲಿದ್ದಾರೆ. ಪಾನ್ ಉಗುಳುವುದು ಕಂಡುಬಂದರೆ ಜನರು 100 ಪೌಂಡ್‌ಗಳು(ಸುಮಾರು ರೂ. 12,000) ವರೆಗೆ ದಂಡ ವಿಧಿಸಬಹುದು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
