ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ; ಮೂವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
Pakistan: ಬೈಕ್ನಲ್ಲಿ ಬಂದ ಸೂಸೈಡ್ ಬಾಂಬರ್ ಚೆಕ್ಪೋಸ್ಟ್ ಬಳಿ ಕಾನೂನು ಜಾರಿ ಸಂಸ್ಥೆಗೆ ಸೇರಿದ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ದಾಳಿಯಲ್ಲಿ ಮೃತಪಟ್ಟ ಮೂರೂ ಮಂದಿ ಈ ಪ್ಯಾರಾಮಿಲಿಟರಿ ಸಿಬ್ಬಂದಿಯೇ ಆಗಿದ್ದಾರೆ.

ಮೋಟಾರ್ ಬೈಕ್ನಲ್ಲಿ ಬಂದ ವ್ಯಕ್ತಿಯ ಆತ್ಮಾಹುತಿ ಬಾಂಬ್ ದಾಳಿ ( Suicide Bomb Attack)ಗೆ ಮೂವರು ಮೃತಪಟ್ಟು, 20 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದಿದೆ. ಈ ದಾಳಿಯ ಹೊಣೆಯನ್ನು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (Tehrik-e-Taliban Pakistan) ಸಂಘಟನೆ ಹೊತ್ತುಕೊಂಡಿದೆ. ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ದಕ್ಷಿಣ ಭಾಗದಿಂದ ಸುಮಾರು 25 ಕಿಮೀ ದೂರದಲ್ಲಿ, ಕ್ವೆಟ್ಟಾ-ಮಸ್ತುಂಗ್ ರಸ್ತೆಯ ಅರೆ ಮಿಲಿಟರಿ ಫ್ರಂಟಿಯರ್ ಕಾರ್ಪ್ಸ್ (ಅರೆಸೇನಾ ಗಡಿ ಪೊಲೀಸ್) ಇರುವ ಚೆಕ್ಪಾಯಿಂಟ್ ಸಮೀಪ ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಶೇಖ್ ಜೈದ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ನಲ್ಲಿ ಬಂದ ಸೂಸೈಡ್ ಬಾಂಬರ್ ಚೆಕ್ಪೋಸ್ಟ್ ಬಳಿ ಕಾನೂನು ಜಾರಿ ಸಂಸ್ಥೆಗೆ ಸೇರಿದ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ದಾಳಿಯಲ್ಲಿ ಮೃತಪಟ್ಟ ಮೂರೂ ಮಂದಿ ಈ ಪ್ಯಾರಾಮಿಲಿಟರಿ ಸಿಬ್ಬಂದಿಯೇ ಆಗಿದ್ದಾರೆ. ಐಟಿಪಿ ನಡೆಸಿದ ಈ ಸೂಸೈಡ್ ಬಾಂಬ್ ದಾಳಿಯನ್ನು ಪ್ರಧಾನಿ ಇಮ್ರಾನ್ ಖಾನ್ ಖಂಡಿಸಿದ್ದಾರೆ. ದಾಳಿಯಲ್ಲಿ ಹುತಾತ್ಮರಾದವರ ಕುಟುಂಬಕ್ಕೆ ಸಾಂತ್ವನಗಳು ಹಾಗೂ ಗಾಯಗೊಂಡವರು ಬೇಗನೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ವಿದೇಶಿ ಬೆಂಬಲಿತ ಉಗ್ರರಿಂದ ನಮ್ಮನ್ನು ಸದಾಕಾಲ ಸುರಕ್ಷಿತವಾಗಿಡುವ ರಕ್ಷಣಾ ಸಿಬ್ಬಂದಿಗೆ ಸೆಲ್ಯೂಟ್ ಎಂದು ಹೇಳಿದ್ದಾರೆ.
ಟಿಟಿಪಿ ಸಂಘಟನೆಯ ಸಮಸ್ಯೆಗಳನ್ನು ಇಮ್ರಾನ್ ಖಾನ್ ಸರ್ಕಾರ ಶೀಘ್ರವೇ ಬಗೆಹರಿಸಬೇಕು. ಅದನ್ನು ಬಗೆಹರಿಸಬೇಕಾಗಿದ್ದು ಅಫ್ಘಾನಿಸ್ತಾನವಲ್ಲ. ಸಂಘಟನೆಯ ಕಷ್ಟ ಆಲಿಸಿ ಪರಿಹಾರ ಕೊಡುವ ಜವಾಬ್ದಾರಿ ಪಾಕಿಸ್ತಾನಿ ಸರ್ಕಾರ, ಧಾರ್ಮಿಕ ಗುಂಪುಗಳದ್ದೇ ಹೊರತು, ಅಫ್ಘಾನಿಸ್ತಾನದ ತಾಲಿಬಾನಿಗಳದ್ದಲ್ಲ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದರು. ಈ ಮೂಲಕ ಟಿಟಿಪಿಗೂ ತಮಗೂ ಸಂಬಂಧವಿಲ್ಲ ಎಂದಿದ್ದರು. ಇತ್ತೀಚೆಗೆ ಈ ಬಲೂಚಿಸ್ತಾನ ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಉಗ್ರರ ದಾಳಿಗಳು ಪದೇಪದೆ ನಡೆಯುತ್ತಿವೆ.
ಏನಿದು ಟಿಟಿಪಿ ಸಂಘಟನೆ? ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ ಎಂದರೆ ಪಾಕಿಸ್ತಾನ ತಾಲಿಬಾನ್ ಸಂಘಟನೆಯ ಇನ್ನೊಂದು ಹೆಸರು. ಮೂಲತಃ ಅಫ್ಘಾನಿಸ್ತಾನದವರಾದ ಪಶ್ತೂನ್ ಇಸ್ಲಾಮಿಸ್ಟ್ನ ಸಶಸ್ತ್ರ ವಿದ್ಯಾರ್ಥಿಗಳ ಸಂಘಟನೆ. ಅಫ್ಘಾನ್-ಪಾಕಿಸ್ತಾನದ ಗಡಿ ಭಾಗದಲ್ಲಿರುವ ವಿವಿಧ ವಿದ್ಯಾರ್ಥಿ ಭಯೋತ್ಪಾದಕ ಸಂಘಟನೆಗಳ ಅಂಬ್ರೆಲ್ಲಾ ಗುಂಪಾಗಿದೆ. ಅಂದರೆ, ಒಂದೇ ಧ್ಯೇಯವನ್ನಿಟ್ಟು ಕೆಲಸ ಮಾಡುತ್ತಿರುವ ವಿದ್ಯಾರ್ಥಿ ಭಯೋತ್ಪಾದಕ ಸಂಘಟನೆಗಳ ಒಕ್ಕೂಟ. ಪಾಕಿಸ್ತಾನದಲ್ಲಿರುವ ಬಹುತೇಕ ತಾಲಿಬಾನಿ ಗುಂಪುಗಳೆಲ್ಲ ಈ ಟಿಟಿಪಿ ಅಡಿಯಲ್ಲೇ ಬರುತ್ತವೆ.
ಇದನ್ನೂ ಓದಿ: ಇರಾಕ್ನಲ್ಲಿ ಐಸಿಸ್ ಉಗ್ರರಿಂದ ಭೀಕರ ದಾಳಿ; 13 ಪೊಲೀಸರು ಸಾವು, ಮೂವರಿಗೆ ಗಾಯ
ಪರಿಸರ ಸ್ನೇಹಿ ಗಣೇಶ ವಿಗ್ರಹಗಳು; ಧಾರವಾಡದ ಕಲಾವಿದ ಕುಟುಂಬದ ಅದ್ಭುತ ಕಾರ್ಯ
Published On - 3:20 pm, Sun, 5 September 21




