AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾಕ್​​ನಲ್ಲಿ ಐಸಿಸ್​ ಉಗ್ರರಿಂದ ಭೀಕರ ದಾಳಿ; 13 ಪೊಲೀಸರು ಸಾವು, ಮೂವರಿಗೆ ಗಾಯ

Attack on Iraq: ಇರಾಕ್​ ಸೇನೆ ಮತ್ತು ಪೊಲೀಸರ ಮೇಲೆ ಸದಾ ಜಿಹಾದಿಗಳ ಗುಂಪು ದಾಳಿ ನಡೆಸುತ್ತಿರುತ್ತದೆ. ಆದರೆ ಇದು ಈ ವರ್ಷದ ಅತ್ಯಂತ ಭೀಕರ ದಾಳಿ ಎಂದು ಹೇಳಲಾಗಿದೆ.

ಇರಾಕ್​​ನಲ್ಲಿ ಐಸಿಸ್​ ಉಗ್ರರಿಂದ ಭೀಕರ ದಾಳಿ; 13 ಪೊಲೀಸರು ಸಾವು, ಮೂವರಿಗೆ ಗಾಯ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Sep 05, 2021 | 2:31 PM

Share

ಇರಾಕ್​​ನ ಉತ್ತರದ ಪ್ರದೇಶ ಕಿರ್ಕುಕ್​ ಸಮೀಪದ ಚೆಕ್​ಪಾಯಿಂಟ್​ ಮೇಲೆ ಐಸಿಸ್​ ಉಗ್ರರು (ISIS Group) ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸುಮಾರು 13 ಪೊಲೀಸರು ಹತರಾಗಿದ್ದಾರೆ ಎಂದು ಇರಾಕ್​ನ ವೈದ್ಯಕೀಯ ಮತ್ತು ಭದ್ರತಾ ಮೂಲಗಳು ತಿಳಿಸಿವೆ. ಕಿರ್ಕುಕ್​​ ನಗರದ ದಕ್ಷಿಣ ಭಾಗದಲ್ಲಿ ದಾಳಿ ನಡೆಸಿದ್ದಾರೆ. ಇರಾಕ್​ ಸೇನೆ ಮತ್ತು ಪೊಲೀಸರ ಮೇಲೆ ಸದಾ ಜಿಹಾದಿಗಳ ಗುಂಪು ದಾಳಿ ನಡೆಸುತ್ತಿರುತ್ತದೆ. ಆದರೆ ಈ ದಾಳಿ, ಪ್ರಸಕ್ತ ವರ್ಷದ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ದಾಳಿ ಎಂದು ಇರಾಕಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.  

ಕಿರ್ಕುಕ್​ ನಗರದ ದಕ್ಷಿಣದಲ್ಲಿ ಸುಮಾರು 65 ಕಿಮೀ ದೂರದಲ್ಲಿರುವ ಆಲ್​ ರಶದ್​ ಎಂಬ ಪ್ರದೇಶದಲ್ಲಿರುವ ಚೆಕ್​ಪಾಯಿಂಟ್ ಮೇಲೆ ಮಧ್ಯರಾತ್ರಿ ಐಸಿಸ್​ ಉಗ್ರರು ದಾಳಿ ನಡೆಸಿದ್ದಾರೆ.   ಈ ಬಾರಿ ಐಸಿಸ್​ ಸಂಘಟನೆ ಫೆಡರಲ್​ ಪೊಲೀಸ್​ ಚೆಕ್​ಪಾಯಿಂಟ್​ನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದು ಐಸಿಸ್​ ದಾಳಿ ಎಂಬುದು ಸ್ಪಷ್ಟವಾಗಿದೆ..ಆದರೆ ಆ ಸಂಘಟನೆ ಇನ್ನೂ ಹೊಣೆ ಹೊತ್ತುಕೊಂಡಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಇರಾಕ್​ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇರಾಕ್​​ನಲ್ಲಿ ಐಸಿಸ್​ ದಾಳಿ ಹೊಸದಲ್ಲ. ಇನ್ನು ಸುನ್ನಿ ಉಗ್ರರನ್ನು ನಾವು 2017ರ ಅಂತ್ಯದಲ್ಲಿ  ಸೋಲಿಸಿದ್ದೇವೆ ಎಂದು ಇರಾಕಿ ಸರ್ಕಾರ ಹೇಳಿಕೊಂಡಿದ್ದರೂ, ಆ ಸಂಘಟನೆ ಸ್ಲೀಪರ್ ಸೆಲ್​ಗಳನ್ನು ಉಳಿಸಿಕೊಂಡಿದೆ ಮತ್ತು ಆಗಾಗ ಇರಾಕ್​ನ ಸೇನಾಪಡೆ, ಪೊಲೀಸರ ಮೇಲೆ ದಾಳಿ ಮುಂದುವರಿಸುತ್ತಲೇ ಇದೆ.  ಜುಲೈ 19ರಂದು ಐಸಿಸ್​ ಸಂಘಟನೆ ಬಾಗ್ದಾದ್‌ನ ಶಿಯಾ ಉಪನಗರವಾದ ಸದರ್ ನಗರದ ಅಲ್-ವೊಹೈಲಾಟ್ ಮಾರುಕಟ್ಟೆ ಮೇಲೆ ಬಾಂಬ್ ದಾಳಿ ನಡೆಸಿ, ಅದರಲ್ಲಿ 30 ಜನರು ಹತರಾಗಿದ್ದರು.

ಇದನ್ನೂ ಓದಿ: ಪ್ರತಿದಿನ 5ಜಿಬಿ ಡೇಟಾ: ಜಿಯೋ, ಏರ್ಟೆಲ್​ಗೆ ಪೈಪೋಟಿ ನೀಡುತ್ತಿರುವ ಬಿಎಸ್​ಎನ್​ಎಲ್

ಯಾದಗಿರಿ: ಆರ್ಥಿಕ ಸಂಕಷ್ಟದಲ್ಲಿರುವ ಶಿಕ್ಷಕರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿ

Published On - 2:14 pm, Sun, 5 September 21

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ